ಬಸವನಬಾಗೇವಾಡಿ: ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ 156ನೇ ಜಯಂತೋತ್ಸವ ನಿಮಿತ್ಯ ಸಮೀಪದ ಇವಣಗಿ, ಹಂಚಿನಾಳ ಹಾಗೂ ನರಸಲಗಿ ಗ್ರಾಮಗಳಲ್ಲಿ ವಿವಿಧ ಮಠಾಧೀಶರಿಂದ ದುಶ್ಚಟಗಳ ಭಿಕ್ಷೆ- ಸದ್ಗುಣಗಳ ದೀಕ್ಷೆ ಜನ ಜಾಗೃತಿ ಅಭಿಯಾನ ಹಾಗೂ ಧರ್ಮ ಸಭೆ ಜರುಗಿತು.
ಶ್ರೀ ಕುಮಾರ ಶಿವಯೋಗಿಗಳ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಬೀಳಗಿಯ ಕಲ್ಮಠದ ಗುರುಪಾದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆಯು ಇವಣಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಸ್ವಾಗತಕ್ಕಾಗಿ ತರಲಾದ 7 ಕ್ವಿಂಟಾಲ್ ಹೂವುಗಳಿಂದ ಪುಷ್ಪವೃಷ್ಟಿ ಮಾಡುವ ಮೂಲಕ ಮಠಾಧೀಶರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಅಪಾರ ಸಂಖ್ಯೆಯ ಸುಮಂಗಲೆಯರು ಕುಂಭ ಹೊತ್ತು ಪಾಲ್ಗೊಂಡರು.
ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಧರ್ಮ ಸಭೆಯಲ್ಲಿ ಬಿಳೂರಿನ ಮುರುಘೇಂದ್ರ ಸ್ವಾಮಿಜಿ ಮಾತನಾಡಿ, ಪ್ರತಿಯೊಬ್ಬರೂ ಇಂತಹ ದಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಕರಿಬಂಟನಾಳದ ಶಿವಕುಮಾರ ಸ್ವಾಮೀಜಿ, ಆನಂದ ದೇವರು, ವಿರುಪಾಕ್ಷ ದೇವರು, ದಾನೇಶ್ವರ ದೇವರು, ಷಡಕ್ಷರಿ ದೇವರು ಹಾಗೂ ವಿವಿಧ ಪಕ್ಷದ ಮುಖಂಡರು ಸೇರಿದಂತೆ ವಿವಿಧ ಮಠಾಧೀಶರು ಇದ್ದರು.
Related Posts
Add A Comment