ಇಂಡಿ: ಮನುಷ್ಯ ಕುಲವೊಂದೇ ಎಂಬುದನ್ನು ಪ್ರವಾದಿಗಳು ಹೇಳಿದ್ದು ಅರ್ಥಮಾಡಿಕೊಳ್ಳಬೇಕು.ಭಾರತದಂತಹ ದೇಶ ಮುನ್ನಡೆಸಲು ಎಲ್ಲರೂ ಜೊತೆಗೂಡಿದರೆ ಮಾತ್ರ ಸಾಧ್ಯ.ಭಾರತೀಯರು ಇದನ್ನು ಅರ್ಥೈಸಿಕೊಳ್ಳಬೇಕು ಎಂದು ಮುಖ್ಯ ಅತಿಥಿ ಸೀರಾಜ ಜಂಖಾನಿ ಹೇಳಿದರು.
ಪಟ್ಟಣದ ಮಾಡಲ್ ಪಬ್ಲಿಕ್ ಶಾಲೆಯಲ್ಲಿ ಮಹಮ್ಮದಿಯಾ ನಾತ್ ಕಮಿಟಿ ವತಿಯಿಂದ ತಾಲೂಕಾ ಮಟ್ಟದಲ್ಲಿ ಪ್ರವಾದಿ ಕುರಿತು ರಸಪ್ರಶ್ನೆ ಹಾಗೂ ನಾತ್ ಪಠಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಷ್ಟೋ ಜನರು ಪ್ರವಾದಿ ಮಹಮ್ಮದ್‌ರ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದರು. ಬದುಕಿನುದ್ದಕ್ಕೂ ಅಪಪ್ರಚಾರ ಮಾಡಿದ್ದರೂ ಅವೆಲ್ಲವನ್ನೂ ಮಾನವೀಯ ಮೌಲ್ಯಗಳ ನೆಲೆಗಟ್ಟಿನ ಮೂಲಕ ಎದುರಿಸಿದರು ಎಂದು ಹೇಳಿದರು.
ಮುಪ್ತಿ ಅಬ್ದುಲ್ ರಹೆಮಾನ ಅರಬ, ಮೌಲಾನಾ ಜಿಯಾವುಲಹಕ್ ಉಮರಿ ಹಾಗೂ ಕಾಂಗ್ರೆಸ್ ಬ್ಲಾಕ್ ತಾಲೂಕು ಮಾಜಿ ಅಧ್ಯಕ್ಷ ಇಲಿಯಾಸ ಬೊರಾಮಣಿ ಮಾತನಾಡಿ, ಪ್ರವಾದಿಗಳ ಸಂದೇಶಗಳು ಜನರ ಮನಮುಟ್ಟಬೇಕಾಗಿದೆ. ಗುಡಿ-ಮಸೀದಿಗಳಿಗೆ ಸೀಮಿತಗೊಳಿಸಬೇಡಿ, ಪ್ರವಾದಿ ಅವರ ಸಂದೇಶ ಸಾರ್ವಕಾಲಿಕವಾದುದು. ಅವರ ಜೀವನವೇ ನಮಗೆಲ್ಲ ದಾರಿದೀಪ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಮ್ಮದಿಯಾ ನಾತ್ ಕಮೀಟಿ ಜಿಲ್ಲಾ ಅಧ್ಯಕ್ಷ ಸೈಯದ್ ಮುಸ್ತಫಾ ಕಾದರಿ, ಜಹಾಂಗೀರ ಹಿಪ್ಪರಗಿ, ಅಬ್ದುಲನಬಿ ಜಮಾದಾರ, ಅಬ್ದುಲ ರಜಾಕ ಕೋಲಾರ, ಮೈನುದ್ದಿನ ಬೂದಿಹಾಳ, ಅಬುಬಕರ ಅಂಬಾರಖಾನೆ, ಪುರಸಭೆ ಸದಸ್ಯ ಅಯುಬ ಬಾಗವಾನ, ಅಬ್ದುಲಮಾಜಿದ ಸೌದಾಗರ, ಅತೀಕ ಶೇಖ್, ಬಶೀರ ಇನಾಮದಾರ, ರಫೀಕ ಜಂಬಗಿ, ಇಸಾಕ ಮುಲ್ಲಾ, ಹಸನ ಮುಜಾವರ, ಅಶಿಫ್ ಜಮಾದಾರ, ರಫೀಕ ಮುಲ್ಲಾ, ನಾಸೀರ ಇನಾಮದಾರ, ಮುಜೀಬ ಅಫಜಲಪೂರ, ಮುನ್ನಾ ಇಂಡಿಕರ, ಅಬ್ದುಲಾ ಪಾಟೇಲ ಸೇರಿದಂತೆ ಇತರರು ಇದ್ದರು.
Related Posts
Add A Comment