ವಿಜಯಪೂರ: ಸಂಗನಬಸವ ಶಿಶುನಿಕೇತನ ಶಾಲೆ ವಿದ್ಯಾರ್ಥಿ ಸಾಯಿ ಸಮರ್ಥ ಹೆಗಡೆ ಗುಂಡು ಎಸೆತ ಮತ್ತು ಟ್ರೈಯತ್ಲನ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಇದೆ ತಿಂಗಳ 27 ರಿಂದ 29 ವರೆಗೆ ಮಂಗಳೂರಿನಲ್ಲಿ ನಡೆಯುವಂತಹ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾನೆ. ವಿಜಯಪುರ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೆ.10 ರಂದು ವಿಜಯಪೂರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ (ರಿ) ವತಿಯಿಂದ ನಡೆದ ರಾಜ್ಯಮಟ್ಟದ ಆಯ್ಕೆ ಸ್ಪರ್ಧೆಯಲ್ಲಿ ಸಾಯಿ ಸಮರ್ಥ್ ಹೆಗಡೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿ ಸಾಧನೆಗೆ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ. ಎಸ್. ಹೀರೆಮಠ, ನಾಮಿನಿ ಚೇರಮನ್ ಸಂಗನಗೌಡ.ಎಚ್.ನಾಡಗೌಡ, ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಖಜಾಂಚಿ ಬಸವರಾಜ ಸುಗೂರ, ಶಾಲಾ ಆಡಳಿತಾಧಿಕಾರಿ ಡಾ. ಎಚ್.ವೆಂಕಟೇಶ, ಶಾಲಾ ಮುಖ್ಯೋಪಾದ್ಯಾಯಿನಿ ವಿಜಯಲಕ್ಷ್ಮೀ ಪಟ್ಟೆದ, ಉಪ ಮುಖ್ಯೋಪದ್ಯಯಿನಿ ಶ್ರೀದೇವಿ ಕನ್ನಾಳ, ತರಬೇತಿದಾರರಾದ ಸಂತೋಷ ಶಿವಣಗಿ, ದೈಹಿಕ ಶಿಕ್ಷಕರಾದ ಚನ್ನಬಸು ಬನಜಗೆರ, ಅರುಣಾ ಮಹಾಲಿಂಗಾಪುರ, ಕವಿತಾ ಸಿಂದಗಿ, ಮುತ್ತು ಮಾದರ, ಪ್ರವೀಣ ವಠಾರ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

