ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀಮಠ ಸಮಸ್ತ ಭಕ್ತವೃಂದದ ಆಸ್ತಿ. ಭಕ್ತರ ಅಭಿಪ್ರಾಯ, ಅಭಿಲಾಷೆಯಂತೆ ಕಾರ್ಯಕ್ರಮಗಳು ಜರುಗಿಸುವುದು ನಿಮ್ಮಗಳ ಜವಾಬ್ದಾರಿ ಎಂದು ಜಡಿಮಠದ ಜಡಿಸಿದ್ಧೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಜಡಿಮಠದ ಆವರಣದಲ್ಲಿ ಭಾನುವಾರ ಜರುಗಿದ ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಠದ ಲೋಕಾರ್ಪಣೆ ಅಂಗವಾಗಿ ಮೇ ೨೨ ರಿಂದ ಜೂನ್ ೫ ರವರೆಗೆ ಪುರಾಣ ಕಾರ್ಯಕ್ರಮ ನಂತರ ಜಗದ್ಗುರುಗಳ ಅಡ್ಡಪಲ್ಲಕ್ಕಿ , ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ರೇಣುಕಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆಯಂತಹ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳು ಭಕ್ತರ ಆಶಯದಂತೆ ಅಚ್ಚುಕಟ್ಟಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಆದ್ದರಿಂದ ಪಟ್ಟಣದ ಸಕಲ ಸದ್ಭಕ್ತರು ಸಹಕಾರದಿಂದ ಜವಾಬ್ದಾರಿ ನಿರ್ವಹಿಸುವಂತೆ ಸಲಹೆ ನೀಡಿದರು.
ಸಾನಿಧ್ಯ ವಹಿಸಿದ ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀಗಳು ಆಶೀರ್ವಚನ ನೀಡಿ, ಭಕ್ತವೃಂದ ತನು,ಮನ, ಧನಗಳ ಮೂಲಕ ಉತ್ಸಾಹದಿಂದ ಕಾರ್ಯನಿರ್ವಹಿಸಿದ್ದೇ ಆದಲ್ಲಿ ಕಾರ್ಯಕ್ರಮ ಯಶಸ್ವಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಬಾಬುಗೌಡ ಪಾಟೀಲ(ಜಿಡ್ಡಿಮನಿ), ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಪಂಚಾಕ್ಷರಿ ಮಿಂಚನಾಳ, ಶಾಂತಗೌಡ ಬಿರಾದಾರ(ಯರನಾಳ), ಅಜ್ಜಯ್ಯ ಹಿರೇಮಠ, ಬಂಡೆಪ್ಪಗೌಡ ದಿಂಡವಾರ, ಶಂಕರಗೌಡ ಪಾಟೀಲ(ಯರನಾಳ), ಉಮಾಕಾಂತ ಸೊನ್ನದ, ರಾಮಗೊಂಡ ಅವುಟಿ, ಭೀಮರಾಯ ತೆಗನೂರ, ಸಿದ್ಧು ಆನಂದಿ, ಸಿದ್ದು ಮಸಬಿನಾಳ, ಕುಮಾರಸ್ವಾಮಿ ಹಿರೇಮಠ, ಸೋಮು ಹಿರೇಮಠ, ಕಾಶೀನಾಥ ಹಿರೇಮಠ, ಶಿವಪ್ಪ ವಸ್ತçದ, ನಿಂಬೆಣ್ಣಪ್ಪ ಧುತ್ತರಗಾಂವಿ ಸೇರಿದಂತೆ ಇತರರು ಇದ್ದರು.