ಉದಯರಶ್ಮಿ ದಿನಪತ್ರಿಕೆ
ಇಂಡಿ: ನೂರು ದೇವಾಲಯ ಕಟ್ಟೊದಕ್ಕಿಂತ ಒಂದು ಶಾಲೆ ಕಟ್ಟೊದು ಸೂಕ್ತ, ಸಮಾಜದೊಳಗೆ ಏನಾದರೂ ಒಳ್ಳೆಯದು ಮಾಡಬೇಕಂದರೆ ಅವಮಾನ, ಅಪಮಾನ, ನಿಂದನೆ ಎಲ್ಲವೂ ಮೆಟ್ಟಿ ನಿಂತಾಗ ಸಾಧಕನಾಗಲು ಸಾಧ್ಯ ಎಂದು ಶಿರಶ್ಯಾಡ ಹಿರೇಮಠದ ಷ.ಬ್ರ.ಅಭಿನವ ಮುರಘೇಂದ್ರ ಶಿವಾಚಾರ್ಯರು ಮಂಗಳವಾರ ಹೇಳಿದರು.
ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 15 ನೇ ವಾರ್ಷಿಕೋತ್ಸವ ಹಾಗೂ ಬಿಳ್ಕೊಡುವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಾಹಿತಿ, ಶಿಕ್ಷಕ ದಶರಥ ಕೋರಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದಿನ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಬರೀ ಓದು, ಓದು,ಓದು ಎನ್ನುವ ಸ್ಪರ್ಧೆಗಿಂತ ಮಕ್ಕಳಿಗೆ ಸ್ವಾವಲಂಬನೆಯಿಂದ ಸಮಾಜದಲ್ಲಿ ಬದುಕಲು ಹಾಗೂ ಜೀವನದಲ್ಲಿ ಬರುವ ಹಲವಾರು ಕಠಿಣ ಸವಾಲುಗಳನ್ನು ಎದುರಿಸುವಲ್ಲಿ ಬೇಕಾದ ಕೌಶಲ್ಯಗಳನ್ನು ಕಲಿಸಬೇಕು ಎಂದರು.
ಪ್ರಸ್ತುತ ಭಾರತ ದೇಶದ ಜನಸಂಖ್ಯೆ 1. 40 ಕೋಟಿಗಿಂತ ಮಿತಿಮಿರಿದೆ ಇದರೊಂದಿಗೆ ಸಹಜವಾಗಿ ಕರ್ನಾಟಕದ ಜನಸಂಖ್ಯೆ ಕೂಡಾ ಕೋಟಿ, ಕೋಟಿ ಸಂಖ್ಯೆಯಲ್ಲಿ ಸಾಕಷ್ಟು ಮಿತಿಮಿರಿದೆ ಈ ನಿಟ್ಟಿನಲ್ಲಿ ಭಾರತದ ವರ್ತಮಾನದ
ಜನಸಂಖ್ಯೆ ವಿಸ್ಪೋಟದ ಒಂದು ಪರಿಣಾಮ ಇಂದು ಶಿಕ್ಷಣ ರಂಗದಲ್ಲಿ ಕಲಿಯುತ್ತಿರುವ ಮಕ್ಕಳ ಮೇಲಾಗಿದೆ. ಜನಸಂಖ್ಯೆಯ ವಿಪರೀತ ಹೆಚ್ಚಳದಿಂದ ಮಕ್ಕಳ ಶ್ರೇಯೋಭಿವೃದ್ಧಿಗೆ ಇದು ಕಂಟಕವಾಗಿ,ಕಳವಳಕಾರಿಯಾದ ಮತ್ತು ಆತಂಕಕಾರಿ ಸಂಗತಿಯಾಗಿದೆ ಎಂದರು.
ಬಿಜೆಪಿ ಮುಖಂಡ ಅನಿಲ ಜಮಾದಾರ, ರಮೇಶ್ ಬೆಲ್ಲದ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ರೂಗಿ,ಕಾಂಗ್ರೆಸ್ ಮುಖಂಡ ಧರ್ಮರಾಜ ವಾಲಿಕಾರ, ರೇವಣ್ಣಸಿದ್ದ ಪೂಜಾರಿ,ಪೈಗಂಬರ ಅಂಗಡಿ, ಸಂಗಮೇಶ ಬಿರಾದಾರ,ಮಾಳಪ್ಪ ನಿಂಬಾಳ, ಮೋದಿನಸಾಬ್ ಬಾಗವಾನ, ಜಟ್ಟಪ್ಪ ಸಾಲೋಟಗಿ, ಜಟ್ಟಪ್ಪ ಮರಡಿ, ಜಟ್ಟಪ್ಪ ಮೂಲಿಮನಿ, ಭೀಮರಾಯ ಜೇವೂರ,ಭೀಮರಾಯ ಉಪ್ಪಾರ, ಲಕ್ಷ್ಮಣ ಡಂಗಿ, ಬಾಬುರಾಯ್ ಮಾವಿನಹಳ್ಳಿ, ಗುರಪ್ಪ ಅಗಸರ, ಇಲಾಯಿ ಬಾಗವಾನ, ನಿಂಗಪ್ಪ ತಳವಾರ, ಸಂಜೀವ ರೂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಶಂಕರಲಿಂಗ ಜಮಾದಾರ ಸ್ವಾಗತಿಸಿದರೆ, ಶಿಕ್ಷಕ ಆನಂದ ವಾಲಿಕಾರ ನಿರೂಪಿಸಿ ವಂದಿಸಿದರು.