ವಿಜಯಪುರ: ನಗರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆಯ ಕುತಂತ್ರಕ್ಕೆ ಬುದ್ದಿ ಕಲಿಸಲು, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಮೋತಿರಾಮ ಧರ್ಮು ಚವ್ಹಾಣ ಅವರು, ಸ್ವಯಂ ಪ್ರೆರೀತವಾಗಿ ಚುನಾವಣೆ ಕಣದಿಂದ ಹಿಂದೆ ಸರಿದು, ಬಿಜೆಪಿ ಅಭ್ಯರ್ಥಿಯಾದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಂಬಲಿಸುವುದಾಗಿ, ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರಿಗೆ ಭಾನುವಾರ ಘೋಷಣಾ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ಮೋತಿರಾಮ ಚವ್ಹಾಣ, ನಗರದ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕುತಂತ್ರ ಮಾಡಿ ಒಂದಾಗಿದನ್ನು ಖಂಡಿಸಿ ಹಾಗೂ ನಾನು ಒಬ್ಬ ಹಿಂದೂವಾಗಿ, ಹಿಂದೂ ನಾಯಕರು, ಅಭಿವೃದ್ಧಿ ಹರಿಕಾರರಾದ ಬಸನಗೌಡರಿಗೆ ಮುಖ್ಯಮಂತ್ರಿ ಆಗುವ ಅವಕಾಶವಿದೆ. ಹೀಗಾಗಿ ಅವರ ಗೆಲುವಿನಲ್ಲಿ ನನ್ನದು ಒಂದಿಷ್ಟು ಕಾಣಿಕೆ ಇರಲೆಂದು, ಸ್ವಯಂ ಪ್ರೇರಿತನಾಗಿ ಬೆಂಬಲ ನೀಡುತ್ತಿದ್ದೇನೆ. ನನ್ನ ಜೊತೆಗೆ ಅಪಾರ ಬೆಂಬಲಿಗರು ಸಾಥ ನೀಡಿದ್ದು, ನಾವೆಲ್ಲರೂ ಸೇರಿ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.