ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕ್ಚೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ವಿಜಯಪುರ ಹಾಗೂ ಸರ್ಕಾರಿ ಪ್ರೌಢಶಾಲೆ ಅರಕೇರಿ ಇವರ ತರಗತಿಯ ಮಕ್ಕಳಿಗೆ ಸಂಯೋಗದಲ್ಲಿ ಸನ್ 2024-25ನೇ ಸಾಲಿನಲ್ಲಿ ಓದುತ್ತಿರುವ ಹತ್ತನೆಯ ಟಾರ್ಗೆಟ್-625 ಎಂಬ ಕಾರ್ಯಕ್ರಮವನ್ನು ಶನಿವಾರ ಸರ್ಕಾರಿ ಪ್ರೌಢಶಾಲೆ ಅರಕೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢ ಶಾಲೆ, ಅಮೋಘ ಸಿದ್ಧ ಪ್ರೌಢಶಾಲೆ ಜಾಲಗೇರಿ, ಜ್ಞಾನಜ್ಯೋತಿ ಪ್ರೌಢಶಾಲೆ ಅರಕೇರಿ, ಸರ್ಕಾರಿ ಪ್ರೌಢಶಾಲೆ ಯತ್ನಾಳ, ಶ್ರೀ ಸದ್ಗುರು ಭೀಮದಾಸ ಮಹಾರಾಜ್ ಪ್ರೌಢಶಾಲೆ ಶಿರನಾಳ, ಸರ್ಕಾರಿ ಪ್ರೌಢಶಾಲೆ ಇಟ್ಟಂಗಿಹಾಳ, ನೊಬೆಲ್ ವಿಷನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇಟ್ಟಂಗಿಹಾಳ ದೊಡ್ಡಿ, ರಾಜೇಶ್ವರ ಪ್ರೌಢಶಾಲೆ ತಲಾ ಐದೈದು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಜಿ.ಟಿ
ಕಾಗವಾಡ (ಇಸಿಒ) ರವರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿರುವ ಶಾಲೆಯ ಮಾನ್ಯ ಮುಖ್ಯೋಪಾಧ್ಯಾಯರಾಗಂಟೆಯವಿ. ಮುಲ್ಲಾ ರವರು ಮಾತನಾಡುತ್ತಾ” ಈ ಒಂದು ಕಾರ್ಯಕ್ರಮದ ಸದ್ಬಳಕೆಯನ್ನು ಬಂದಿರುವ ತಾವೆಲ್ಲರೂ ಬಳಸಿಕೊಳ್ಳಬೇಕು. ಈ ಸಲ 625ಕ್ಕೆ 625 ಅಂಕಗಳನ್ನು ನೀವೆಲ್ಲರೂ ಖಂಡಿತ ಗೆದುಕೊಳ್ಳುವಂತಹ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು.
ಪರೀಕ್ಷಾ ಸಮಯ ಸಮೀಪ ಬಂದಿರುವುದರಿಂದ ಸಮಯ ಹಾಳು ಮಾಡದೆ ತಿಳಿಯದ ವಿಷಯವನ್ನು ಸಂಬಂಧಪಟ್ಟ ಶಿಕ್ಷಕರಿಂದ ತಿಳಿಸಿ ಕೊಳ್ಳಬೇಕು ಎಂದು ಕರೆಕೊಟ್ಟರು. 9 ಶಾಲೆಯಿಂದ ಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಲ್ಲಿ ಕನ್ನಡ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಕ್ಲಿಷ್ಟತೆಯ ಅಂಶಗಳನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು.
ಕನ್ನಡ ವಿಷಯಕ್ಕೆ ಸಂಬಂಪಟ್ಟಂತಹ ಲಕ್ಲಿಷ್ಟತೆಯ ಅಂಶಗಳನ್ನು, ನೀಲ ನಕ್ಷೆ, ಉತ್ತರ ಬಿಡಿಸುವಾಗ ಮಕ್ಕಳಿಗೆ ಆಗುವ ಸಮಸ್ಯೆಗಳ ಕುರಿತು, ಮಾದರಿ ಉತ್ತರ ಪತ್ರಿಕೆಯ ಸಮೇತ ಸಂಪನ್ಮೂಲ ವ್ಯಕ್ತಿಗಳಾದ ಎಲ್. ಕುಡಚಿ ಸುದೀರ್ಘವಾಗಿ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಮಧ್ಯಾಹ್ನ ಊಟದ ನಂತರ ವಿಜ್ಞಾನ ವಿಷಯದ ಕ್ಲಿಷ್ಟತೆಯ ಅಂಶಗಳನ್ನು, ಬೆಳಕು ಎಂಬ ಪಾಠದ ಮುಖ್ಯಾಂಶಗಳನ್ನು, ಪ್ರಶ್ನೆ ಪತ್ರಿಕೆಯ ವಿನ್ಯಾಸವನ್ನು, ಸೂತ್ರಗಳನ್ನು, ಸಹ ವಿವರವಾಗಿ ಸಂಪನ್ಮೂಲ ವ್ಯಕ್ತಿಗಳಾದ ಸಂದೀಪ್ ದೇಶಪಾಂಡೆ ರವರು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮವು ಮಕ್ಕಳಿಗೆ ತುಂಬಾ ಸ್ಪೂರ್ತಿದಾಯಕ ವಾಗಿ ಮೂಡಿ ಬಂತು.
ಕಳೆದ ಬಾರಿ 625ಕ್ಕೆ 625 ಅಂಕ ತೆಗೆದುಕೊಂಡ ಬಾಗಲಕೋಟೆಯ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಅಂಕಿತ ಕೊನ್ನೂರ ರವರು ಮಾತನಾಡಿರುವ ವಿಡಿಯೋ ಕ್ಲಿಪ್ ಗಳನ್ನು ಮಕ್ಕಳಿಗೆ ತೋರಿಸಲಾಯಿತು. ಕನ್ನಡ ವಿಷಯದ ನೂರಕ್ಕೆ ನೂರು ಅಂಕು ತೆಗೆದುಕೊಂಡ ವಿದ್ಯಾರ್ಥಿಗಳ ಮಾದರಿ ಉತ್ತರ ಪತ್ರಿಕೆಗಳನ್ನು ಮಕ್ಕಳಿಗೆ ತೋರಿಸಲಾಯಿತು ಹಾಗೆ ಕನ್ನಡ ಮತ್ತು ಗಣಿತ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದಿಷ್ಟು ಅಧ್ಯಯನ ವಿತರಿಸಲಾಯಿತು.
ಸಾಹಿತ್ಯವನ್ನು ಮಕ್ಕಳಿಗೆ ಉಚಿತವಾಗಿ ಈ ಒಂದು ಆರಂಭದ ಕಾರ್ಯಕ್ರಮದಲ್ಲಿ ಶಾಲೆಯ ವಿಜ್ಞಾನ ವಿಷಯದ ಶಿಕ್ಷಕರಾದ ಶ್ರೀ ರವೀಂದ್ರ ಜಳಕಿ ರವರು ಈ ಒಂದು ಕಾರ್ಯಕ್ರಮದ ಗೊತ್ತು ಗುರಿಗಳನ್ನು ಕುರಿತು ಸುದೀರ್ಘವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು, ಶ್ರೀ ವಿನಾಯಕ ಕಾಖಂಡಕಿ ರವರು ನಿರೂಪಿಸಿದರು. ಶಾಲೆಯ ಎಲ್ಲಾ ಗುರುಗಳು ಹಾಗೂ ಗುರು ಮಾತೆಯರು ಈ ಒಂದು ಸ್ಪೂರ್ತಿದಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಕೊನೆಗೆ ವಿಜ್ಞಾನ ವಿಷಯದ ಗುರುಗಳಾದ ರವೀಂದ್ರ ಬೇಣ್ಣೂರ ರವರು ವಂದಿಸಿದರು.