ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎನ್ನುವ ದೃಷ್ಟಿಯಿಂದ ಪ್ರತಿ ಮಗು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರಕಾರ ಹಾಗೂ ಸಂಘ ಸಂಸ್ಥೆಗಳು ಹಲವಾರು ಯೋಜನೆಗಳ ಮೂಲಕ ಸಹಾಯ ಹಸ್ತ ನೀಡುತ್ತಿವೆ ಎಂದು ಮುಂಬೈನ ಸೇಠ ಟಾಪಿದಾಸ ಹಾಗೂ ತುಳಸಿದಾಸ ವೈಜಿದಾಸ ಚಾರಿಟೇಬಲ್ ಟ್ರಸ್ಟಿನ ಸಂಚಾಲಕ ವಿಶ್ವನಾಥ ಸಿಂದಗಿ ಹೇಳಿದರು.
ಅವರು ತಾಲೂಕಿನ ಹೊಳೆಸಂಖ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಬೋರ್ಡ್ ದೇಣಿಗೆ ನೀಡಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದ ಮಕ್ಕಳಿಗೆ ಶೈಕ್ಷಣಿಕವಾಗಿ ಏನನ್ನಾದರು ನೀಡಬೇಕೆಂಬುದು ನನ್ನ ಕನಸಿತ್ತು.ದೊರೆತ ಅಧಿಕಾರದ ಅವಕಾಶ ಬಳಸಿಕೊಂಡು ಈ ಸೇವೆ ಮಾಡಿದ್ದೇನೆ.ಇದನ್ನು ಶಿಕ್ಷಕರು ಬಳಸಿಕೊಂಡು ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದು ಹೇಳಿದರು.
ಶಿಕ್ಷಕ ವಿಜಯಕುಮಾರ ಖವೇಕರ ಸ್ವಾಗತಿಸಿ ನಿರೂಪಿಸಿದರು.ಶಿಕ್ಷಕ ಶಶಿಧರ ಕಾಂಬಳೆ ವಂದಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ಡೊಳ್ಳಿ, ಉಪಾಧ್ಯಕ್ಷರಾದ ಜಗದೇವ ಕ್ಷತ್ರಿ, ಹಿರಿಯರಾದ ಭೈರಪ್ಪ ಮಡಸನಾಳ,ಸತೀಶ ಜತ್ತಿ,ಎಸ್ ಬಿ ಮಡಸನಾಳ,ಶಿಕ್ಷಣ ಸಂಯೋಜಕ ಸಂಗಮೇಶ ಸೂರಜ, ಸಮೂಹ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ತೇಲಿ,ಪರಮೇಶ್ವರಗೌಡ ಪಾಟೀಲ, ಶಾಲಾ ಮುಖ್ಯ ಶಿಕ್ಷಕ ಸಂಗಪ್ಪ ಬಾಲಗಾಂವ ಹಾಗೂ ಸಹಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

