ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ದಿ ಕೋ ಅಪ್ ಬ್ಯಾಂಕ್ ಇದು ಹಿರಿಯರು ಕಟ್ಟಿದ ಬ್ಯಾಂಕು. ಅವರು ಹಾಕಿದ ಮಾರ್ಗದಲ್ಲಿ ನಡೆದು ಹೆಚ್ಚೆಚ್ಚು ಬ್ರಾಂಚುಗಳನ್ನು ಸ್ಥಾಪಿಸುವಂತಾಗಲಿ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ತಾಲೂಕಿನ ಯರಝರಿ ರಸ್ತೆಯಲ್ಲಿರುವ ತಮ್ಮ ತೋಟದಲ್ಲಿ ಬ್ಯಾಂಕ್ ಗೆ ನೂತನವಾಗಿ ಆಯ್ಕೆಯಾದ ಆಡಳಿತ ವರ್ಗಕ್ಕೆ ಮತ್ತು ಜೆಓಸಿಸಿ ಬ್ಯಾಂಕ್ ಗೆ ಆಯ್ಕೆಯಾದ ಅರವಿಂದ್ ಹೂಗಾರ ಮತ್ತು ಆನಂದ ಬಿರಾದಾರ ಇವರನ್ನು ಅಸ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.
ಸಧ್ಯ ಕರ್ನಾಟಕ ಬ್ಯಾಂಕು ಉತ್ತಮವಾಗಿ ಸಾಗುತ್ತಿದೆ. ಎಲ್ಲ ರೈತರಿಗೆ, ವ್ಯಾಪಾರಸ್ಥರಿಗೆ ಇನ್ನಷ್ಟು ಸೇವೆ ನೀಡಿ ಹೆಚ್ಚೆಚ್ಚು ಬ್ರಾಂಚುಗಳನ್ನು ಸ್ಥಾಪಿಸುವಂತಾಗಲಿ ಎಂದು ಹರಸಿದರು.
ಜೆಓಸಿಸಿ ಬ್ಯಾಂಕಿಗೆ ನಮ್ಮ ಆತ್ಮೀಯರು ಆಯ್ಕೆಯಾಗಿದ್ದು ಖುಷಿ ತಂದಿದೆ. ಈಗಾಗಲೇ ಈ ಇಬ್ಬರು ಸಾಕಷ್ಟು ಹೆಸರು ಮಾಡಿದ್ದು ಬರುವ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮತ್ತು ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ ಶೇರುದಾರರು ನಿಮ್ಮೆಲ್ಲರ ಮೇಲೆ ವಿಶ್ವಾಸವನ್ನಿಟ್ಟು ಜವಾಬ್ದಾರಿ ನೀಡಿದ್ದಾರೆ. ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುವ ಮೂಲಕ ವಿಶ್ವಾಸವನ್ನು ಉಳಿಸಿಕೊಳ್ಳುವ ಭರವಸೆ ನಮಗಿದೆ. ಸ್ವಾರ್ಥ ಮನೋಭಾವದಿಂದ ದೂರವಾಗಿ ಗ್ರಾಹಕರಿಗೆ ಸುಲಭವಾದ ಒಳ್ಳೆಯ ಸೇವೆ ನೀಡುವ ಮೂಲಕ ವಿಶ್ವಾಸಕ್ಕೆ ಪಾತ್ರರಾಗಿರಿ ಎಂದರು.
ಈ ವೇಳೆ ಎಂ.ಎಸ್.ನಾವದಗಿ ವಕೀಲರು, ಬಾಲಾಜಿ ಶುಗರ್ಸ್ ನ ವ್ಯವಸ್ಥಾಕ ನಿರ್ದೇಶಕ ರಾಹುಲಗೌಡ ಪಾಟೀಲ, ಪ್ರಮುಖರಾದ ದೆವೇಂದ್ರ ವಾಲೀಕಾರ, ಸತೀಶ ಕುಲಕರ್ಣಿ, ಗಣೇಶ ಅನ್ನಗೌನಿ, ಅರವಿಂದ ಕಾಶಿನಕುಂಟಿ ಸೇರಿದಂತೆ ಮತ್ತೀತರರು ಇದ್ದರು.

