ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತೊಗರಿ ಕಾಳಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಭಾರತೀಯ ಜನತಾ ಪಕ್ಷದ ಕೇಂದ್ರ ಸರಕಾರಕ್ಕೆ ಆಗ್ರಹ ಮಾಡಬೇಕೆಂದು ಎಂದು ಭುಯ್ಯಾರ ಗ್ರಾಮದ ಕೃಷಿಕ ಕೃಷ್ಣ ಆದ್ಯ ಜಿಲ್ಲಾ ಬಿಜೆಪಿ ಘಟಕಕ್ಕೆ ಅಗ್ರಹಿಸಿದ್ದಾರೆ.
ಪ್ರತಿಕೂಲ ಹವಾಮಾನದ ಫಲವಾಗಿ ತೊಗರಿ ಬೆಳೆ ಸಂಪೂರ್ಣ ಹಾಳವಾಗಿ ಪ್ರತಿಶತ ೨೫% ಮಾತ್ರ ಫಸಲು ಬಂದಿದ್ದು ರೈತರು ಕಂಗಾಲಾಗಿದ್ದಾರೆ ಇಂತಹ ಸಮಯದಲ್ಲಿ ರೈತರ ನೆರವಿಗೆ ಬಿಜೆಪಿ ಪಕ್ಷ ಬರಬೇಕಿದೆ ತೊಗರಿಗೆ ಕನಿಷ್ಠ ಬೆಲೆ ೯೦೦೦ ರೂಪಾಯಿ ರಾಜ್ಯ ಸರ್ಕಾರ ಕೊಡಬೇಕು ಜೊತೆಗೆ ಕೇಂದ್ರ ಸರ್ಕಾರ ೧೫೦೦ ರುಪಾಯಿ ಕೊಟ್ಟು ರೈತರ ನೆರವಿಗೆ ಬರಬೇಕು ರಾಜ್ಯ ಸರ್ಕಾರ ಕೇವಲ ಪ್ರತಿ ಕ್ವಿಂಟಾಲ್‌ಗೆ ೭೬೦೦ ರುಪಾಯಿ ನಿಗದಿ ಮಾಡಿದ್ದು ತುಂಬಾ ಕಡಿಮೆ ಆಗುತ್ತದೆ ಎಂದು ಹೇಳಿದ ಅವರು ಬರಿ ಪಕ್ಷದ ಆಂತರಿಕ ಕಚ್ಚಾಟ ಬಿಟ್ಟು ಬೇಗನೆ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.
