ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಂದಾಯ ಆಯುಕ್ತಾಲಯ ಬೆಂಗಳೂರು ಹಾಗೂ ಜಿಲ್ಲಾಧಿಕಾರಿಗಳ ವಿಜಯಪುರ ಇವರ ನಿರ್ದೇಶನದಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಳೆಯ ಭೂ ದಾಖಲೆಗಳ ಗಣಕೀಕರಣದಿಂದ ಸಾರ್ವಜನಿಕ ದಾಖಲೆಗಳ ಸುರಕ್ಷೆ ಮತ್ತು ಸುಲಭ ಲಭ್ಯತೆಯ ಗ್ಯಾರಂಟಿ ಯೋಜನೆಯಾದ ಭೂ ಸುರಕ್ಷ ಯೋಜನೆಯಡಿ ಅಭಿಲೇಖಾಲಯದ ದಾಖಲೆಗಳನ್ನು ಗಣಕೀಕರಣ ಕಾರ್ಯ ಕೈಗೊಳ್ಳುವ ಕುರಿತಂತೆ ಬಬಲೇಶ್ವರ ಮತ್ತು ತಿಕೋಟಾ ತಹಶೀಲದಾರರ ಕಾರ್ಯಾಲಯದ ಅಭಿಲೇಖಾಲಯದ ದಾಖಲೆಗಳನ್ನು ಭೂಸುರಕ್ಷಾ ಯೋಜನೆಯಡಿ ಗಣಕೀಕರಣಗೊಳಿಸುವ ಕಾರ್ಯವನ್ನು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ್ ಅವರು ವಿಜಯಪುರದ ಹಳೆ ತಹಶೀಲ್ಧಾರ ಕಾರ್ಯಾಲಯದಲ್ಲಿ ಜನವರಿ ೧೧ರಂದು ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಕೋಟಾ ಹಾಗೂ ಬಬಲೇಶ್ವರ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
