ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ವೈ.ಬಿ.ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಡಾ.ಮಂಜುನಾಥ ಮಠ ಪುನರಾಯ್ಕೆಯಾಗಿದ್ದಾರೆ.
ಪಟ್ಟಣದ ಬ್ಯಾಂಕ್‌ನಲ್ಲಿ ಶುಕ್ರವಾರ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಆಯ್ಕೆಗಾಗಿ ಜರುಗಿದ ಸಭೆ ಸಭೆಯಲ್ಲಿ ಎಲ್ಲ ನಿರ್ದೇಶಕರು ಒಮ್ಮತದಿಂದ ಡಾ.ವೈ.ಬಿ.ಪಾಟೀಲರನ್ನು ಎರಡನೆಯ ಬಾರಿಗೆ ಅಧ್ಯಕ್ಷರನ್ನಾಗಿ ಹಾಗೂ ಹಿಂದಿನ ಉಪಾಧ್ಯಕ್ಷ ಮಂಜುನಾಥ ಮಠ ಅವರನ್ನೇ ಪುನಃ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ೨೦೨೫-೩೦ರ ಅವಧಿಗಾಗಿ ಆಯ್ಕೆ ಮಾಡಿದರು. ನಂತರ ನಿರ್ದೇಶಕ ಮಂಡಳಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮಾತನಾಡಿ, ಮುಂದಿನ ದಿನಗಳಲ್ಲಿ ಬ್ಯಾಂಕ್ ಗ್ರಾಹಕರ ಸಹಕಾರದೊಂದಿಗೆ ಹೊಸ ಹೊಸ ಯೋಜನೆಗಳ ಮೂಲಕ ಹೆಚ್ಚಿನ ಪ್ರಗತಿ ಸಾಧಿಸಲು ಕ್ರಮ ವಹಿಸುತ್ತದೆ ಎಂದು ಹೇಳುತ್ತಾ. ನಮ್ಮ ಆಯ್ಕೆ ಎಲ್ಲ ನಿರ್ದೆಶಕ ಮಂಡಳಿ ಹಾಗೂ ಸರ್ವಸದಸ್ಯರ ನಂಬಿಕೆ, ಭರವಸೆಯ ಪ್ರತೀಕವಾಗಿದೆ ಎಂದರು.
ನಿರ್ದೇಶಕರಾದ ಬಿ.ಜಿ.ಪಾಟೀಲ, ಪಿ.ವ್ಹಿ.ದೇಶಪಾಂಡೆ, ಎಸ್.ಕೆ.ಸಜ್ಜನ, ಡಿ.ಡಿ.ಲಮಾಣಿ ಬಿ.ಎಮ್.ಪಾಟೀಲ, ಎಸ್.ಎಸ್.ಉತ್ನಾಳ, ವಿ.ಜಿ.ಪಾಟೀಲ, ಸಿ.ಕೆ.ಮಸಳಿ ಆಯ್.ಸಿ.ಕುದರಿ, ವ್ಹಿ. .ಎಸ್.ಪಾಟೀಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

