ಸಿಂದಗಿ: ರಾಜ್ಯ ರಾಜಕಾರಣ ಮತ್ತು ವಿಧಾನ ಸಭಾಕ್ಷೇತ್ರಗಳಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಅದರಂತೆ ಮೇ.೧೦ರಂದು ಮತದಾರರು ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಬಸವನ ಬಾಗೇವಾಡಿಯ ಶಾಸಕ ಹಾಲಿ ಅಭ್ಯರ್ಥಿ ಶಿವಾನಂದ ಪಾಟೀಲ ಹೇಳಿದರು.
ನಗರದ ಮಾಂಗಲ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಾಗಿ ಗೆಲ್ಲಬೇಕಾಗಿತ್ತು. ಆದರೆ ಕೆಲವು ವೈಮನಸ್ಸಿನಿಂದ ಸಾಧ್ಯವಾಗಲಿಲ್ಲ. ಮತ್ತು ಆಗಿನ ಬಿಜೆಪಿ ಸರಕಾರ ದುಡ್ಡಿನ ಮಳೆಯನ್ನು ಹರಿಸಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಕಾರಣ ಆ ಗೆಲುವು ನಿರಂತರವಲ್ಲ. ಈ ಬಾರಿ ಸಿಂದಗಿ ಕಾಂಗ್ರೆಸ್ ಮತಕ್ಷೇತ್ರದ ಅಭ್ಯರ್ಥಿಯಾದ ಅಶೋಕ ಮನಗೂಳಿ ಗೆದ್ದರೆ ಅದು ಇಡೀ ರಾಜ್ಯದ ಗೆಲುವಾಗುತ್ತದೆ ಎಂದರು.
ಈ ವೇಳೆ ಇಂಡಿ ಶಾಸಕ ಹಾಲಿ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮಾತನಾಡಿ, ಕಳೆದ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಸರಕಾರ ಹಣವನ್ನು ನೀರು ಹರಿದ ಹಾಗೆ ದುಡ್ಡಿನ ಸುರಿಮಳೆಯಲ್ಲಿ ಸುರಿಸುವುದರ ಜೊತೆಗೆ ಲಕ್ಷö್ಮಣ ಸವದಿ ಅವರ ಪರಿಶ್ರಮದಿಂದ ಗೆಲುವಾಗಿತ್ತು. ಅದೇ ರೀತಿ ಸವದಿಯವರ ಮೂಲಕವೇ ಮತ್ತೇ ಸಿಂದಗಿಯಲ್ಲಿ ಈ ಸಲ ಕಾಂಗ್ರೆಸ್ ಗೆಲುವು ಆಗಲಿದೆ. ರಾಜ್ಯದಲ್ಲಿ ಒಳ್ಳೆಯ ಸರಕಾರ ಬರಬೇಕು, ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಮತದಾರರು ತೀರ್ಮಾನ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಮತ ನೀಡುವ ಮೂಲಕ ನಾವು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಇವರ ಕೈ ಬಲಪಡಿಸುವ ಮೂಲಕ ಪ್ರತಿಯೊಬ್ಬ ಕಾರ್ಯಕರ್ತರೂ ಮನೆ ಮನೆಗೆ ತೆರಳಿ ಸರಕಾರದ ಗ್ಯಾರಂಟಿ ಭರವಸೆಯ ಯೋಜನೆ, ಸಾಧನೆಗಳನ್ನು ಕ್ರಮ ಸಂಖ್ಯೆ ಒಂದಕ್ಕೆ ನಿಮ್ಮ ಮತ ಹಾಕಿ ಎಂದು ಮನವರಿಕೆ ಮಾಡಿ ಕೊಡಿ ಎಂದರು.
ಇದೇ ಸಂದರ್ಭದಲ್ಲಿ ಬಬಲೇಶ್ವರ ಕ್ಷೇತ್ರದ ಶಾಸಕ, ಹಾಲಿ ಅಭ್ಯರ್ಥಿ ಎಂ.ಬಿ.ಪಾಟೀಲ ಮಾತನಾಡಿ, ಕಾಂಗ್ರೆಸ್ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕಾಂಗೆಸ್ ಸರಕಾರವಿದ್ದರೆ ಮಾತ್ರ ಜನ ನೆಮ್ಮದಿಯಿಂದ ಬದುಕಲು ಸಾಧ್ಯ. ಮಹಿಳೆಯರಿಗೆ, ನಿರುದ್ಯೋಗಿಗಳಿಗೆ, ಬಡವರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿದೆ. ನಾಳೆಯ ನೆಮ್ಮದಿಗಾಗಿ ಪತ್ರಿಯೊಬ್ಬರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮುಖಾಂತರ ಕ್ಷೇತ್ರದ ಅಭಿವೃದ್ಧಿಗಾಗಿ ಆಶೀರ್ವಾದ ಮಾಡಿ. ನಮ್ಮ ಸರಕಾರ ಈಗಾಗಲೇ ಕೊಟ್ಟ ಮಾತಿನಂತೆ ಹಲವಾರು ಯೋಜನೆಯ ನೀಡಿ ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿ ಸರಕಾರ ೨೦೧೮ರಲ್ಲಿ ೬೦೦ ಭರವಸೆಗಳನ್ನು ನೀಡಿತ್ತು, ಅದರಲ್ಲಿ ಸುಮಾರು ೪೮ರಷ್ಟು ಮಾತ್ರ ಈಡೇರಿಸಿದೆ ಎಂದು ಟೀಕಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ರಾಜು ಆಲಗೂರ, ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಠ್ಠಲ ಕೋಳೂರ, ಮಲ್ಲಣ್ಣ ಸಾಲಿ, ಎಂ.ಆರ್.ತಾAಬೋಳ್ಳಿ, ಶರಣಪ್ಪ ವಾರದ, ಗುರಣ್ಣಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಬಸನಗೌಡ ಪಾಟೀಲ, ಚನ್ನು ವಾರದ, ರಾಕೇಶ ಕಲ್ಲೂರ, ಮಹಾನಂದ ಬಮ್ಮಣ್ಣಿ, ಸುನಂದಾ ಯಂಪುರೆ, ಸಿದ್ದಣ್ಣ ಹಿರೆಕುರುಬರ, ರಾಜಶೇಖರ ಕೂಚಬಾಳ, ಸೇರಿದಂತೆ ಕಾರ್ಯಕರ್ತರು ಇದ್ದರು.
Related Posts
Add A Comment