ಮುದ್ದೇಬಿಹಾಳ: ಈ ನಾಡನ್ನು ಸೌಹಾರ್ಧಯುತವಾಗಿ ಉಳಿಸಿಕೊಳ್ಳಲು ವಿಧಾನಸಭೆಯ ಚುನಾವಣೆಯಲ್ಲಿ ಎಲ್ಲ ದಲಿತ ಬಾಂಧವರು ಕೋಮುವಾದದ ವಿರೋಧವಿರುವ ಸಮರ್ಥ ಅಭ್ಯರ್ಥಿಗೆ ಮತ ನೀಡಬೇಕು ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.
ಪಟ್ಟಣದ ಸಾಂಘವಿ ಹೋಟೆಲಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಧ್ಯ ಸಂವಿಧಾನವನ್ನೇ ಬದಲಿಸಲು ಹೊರಟಿರುವ, ಕನ್ನಡದ ಹಿತಾಸಕ್ತಿಗೆ ವಿರುದ್ಧವಾದ, ಕನ್ನಡದ ಅಸ್ಮಿತೆಗೆ ವಿರುದ್ಧವಾದ, ದಲಿತ ವಿರೋಧಿ, ರೈತ ವಿರೋಧಿ, ಮಹಿಳಾ ವಿರೋಧಿಯಾಗಿರುವ ರಾಜಕೀಯ ಪಕ್ಷ ನಮ್ಮ ನಡುವೆ ಇದೆ. ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ, ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿ ಕಟ್ಟಿ, ಒಗ್ಗೂಡಿಕೊಂಡು ಬಂದ ಪರಂಪರೆಯನ್ನು ನಾಶ ಮಾಡುತ್ತಿದೆ. ಹಾಗಾಗಿ ಎಲ್ಲ ದಲಿತ ಬಾಂಧವರು ಕೋಮುವಾದಿ ಪಕ್ಷಕ್ಕೆ ಮತ ನೀಡದೇ ದ್ವೇಷದ ರಾಜಕಾರಣದ ವಿರುದ್ಧ ಮತಚಲಾಯಿಸುವಂತೆ ತಿಳಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ ಮಾತನಾಡಿ, ಸಧ್ಯದ ಆಡಳಿತದಲ್ಲಿ ದಲಿತರ ಮೇಲೆ, ರೈತರ ಮೇಲೆ ಹಲ್ಲೆಗಳಾದ ಸಾಕಷ್ಟು ಉದಾಹರಣೆಗಳಿವೆ. ದಲಿತರ ಕಲ್ಯಾಣಕ್ಕಾಗಿ ಇರುವ ಸಾಕಷ್ಟು ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ೨೧ ಪಂಗಡಗಳನ್ನೊಳಗೊAಡ ಎಲ್ಲ ದಲಿತ ಸಮುದಾಯಗಳು, ಸಂಘಟನೆಗಳು ಸೇರಿ ರಾಜ್ಯದಾದ್ಯಂತ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಬಿಜೆಪಿಯ ದುರಾಡಳಿತ ಕೊನೆಗೊಳಿಸುವಲ್ಲಿ ಎಲ್ಲರೂ ಶ್ರಮಿಸುತ್ತಿದ್ದೇವೆ. ಹಾಗಾಗಿ ಜಿಲ್ಲೆಯ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ತಿರುಗಾಡಿ ದಲಿತ ಸಮುದಾಯದವನ್ನು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುವAತೆ ಮನವಿ ಮಾಡುತ್ತಿದ್ದೇವೆ ಎಂದರು.
ಈ ವೇಳೆ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ, ಸಿದ್ದು ಕಟ್ಟಿಮನಿ, ವಿರೇಶ ಭಜಂತ್ರಿ, ದುರ್ಗಪ್ಪ ಲೊಟಗೇರಿ, ಪ್ರಕಾಶ ಸರೂರ, ಸಂಗು ಚಲವಾದಿ, ಮಂಜುನಾಥ ಕಟ್ಟಿಮನಿ, ಯಲ್ಲಪ್ಪ ಚಲವಾದಿ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment