ಸಿಂದಗಿ:
ತಾಲೂಕಿನ ಮಲಘಾಣ ಗ್ರಾಮದಲ್ಲಿರುವ ಶ್ರೀ ಶ.ವಿ.ವ ಸಂಸ್ಥೆಯ ಶ್ರೀ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗ
ಪೂಜಾ ಚಾಂದಕವಠೆ 600 ಅಂಕಗಳಿಗೆ 572 (ಶೇ.95.33) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಪಾರ್ವತಿ ಪೂಜಾರಿ 558 (ಶೇ.93) ಅಂಕ ಪಡೆದು ದ್ವಿತೀಯ ಸ್ಥಾನ, ಹಾಗೂ ಪಾರ್ವತಿ ಬಿರಾದಾರ 556 (ಶೇ.92.66) ರೂಪಾ ಹಿರೇಮಠ 556 (ಶೇ.92.66) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗ
ಸಂತೋಷ ಹಿರೇಮಠ 600 ಅಂಕಗಳಿಗೆ 561 (ಶೇ.93.5), ಪೂಜಾ ಬಿರಾದಾರ 551 (ಶೇ.91.83), ಪ್ರಿಯಾಂಕಾ ಮ್ಯಾಕೇರಿ 551 (ಶೇ.91.83) ರಾಕೇಶ ಕಾಂಬಳೆ 545 (ಶೇ.90.83) ಅಂಕ ಪಡೆದುಕೊಂಡಿದ್ದಾರೆ.
ಒಟ್ಟು 211 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 111 ವಿದ್ಯಾರ್ಥಿಗಳು ಪ್ರಥಮ, 29 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 08 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಜಾಧವ ಹಾಗೂ ನಿರ್ದೇಶಕ ಮಂಡಳಿ ಮತ್ತು ಪ್ರಾಚಾರ್ಯ ಸುನೀಲ ಜಾಧವ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.