ಸಿಂದಗಿ: ಸೈನಿಕನ ಹೆಂಡತಿ ನಾನು ಡೀಲ್ ಆಗುವ ಮಾತೇ ಇಲ್ಲ ಎಂದು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಹೇಳಿದರು.
ಸಿಂದಗಿ ತಾಲೂಕಿನ ಖೈನೂರ ಗ್ರಾಮದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು ಕೈಲಾಗದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ದೇಶಕ್ಕಾಗಿ ದುಡಿದ ಸೈನಿಕನ ಪತ್ನಿ ನಾನು ನನಗೆ ದುಡ್ಡಿನ ಅವಶ್ಯಕತೆಯಿಲ್ಲ ನನ್ನ ಪತಿ ಶಿವಾನಂದ ಪಾಟೀಲ ಅಧಿಕಾರವಿಲ್ಲದೇ ಹಲವಾರು ಜನಪರ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ. ಡೀಲ್ ಆಗೋ ಇರಾದೆ ನನಗಿಲ್ಲ ಹಾಗೇನಾದರೂ ಇದ್ದರೆ ಇಂತಹ ಬಿರು ಬಿಸಿಲಿನಲ್ಲಿ ಪ್ರಚಾರ ಮಾಡುತ್ತಿರಲಿಲ್ಲ ಸಿಂದಗಿ ತಾಲೂಕಿನ ಜನತೆ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಕ್ಷೇತ್ರದ ಜನತೆ ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ನಾನು ಇದ್ದರೂ ಜೆಡಿಎಸ್ ಪಕ್ಷದಲ್ಲೇ ಸತ್ತರೂ ಜೆಡಿಎಸ್ ಪಕ್ಷದಲ್ಲೇ ಎಂದು ಹೇಳಿದರು.
ಈ ವೇಳೆ ಮಲ್ಲು ಹಡಪದ, ಶೈಲಜಾ ಸ್ಥಾವರಮಠ, ಎ.ಡಿ.ಕೋರವಾರ, ನಾಗೇಶ ಪೂಜಾರಿ, ರಕ್ಷೀತ ಪಾಟೀಲ, ಮಾಂತು ಪರಗೊಂಡ, ಅಪ್ಪುಗೌಡ ಪಾಟೀಲ, ರವಿರಾಜ ರೆಡ್ಡಿ ಯಾಳವಾರ, ಸಿದ್ದು ತಮದೊಡ್ಡಿ ಇದ್ದರು.
ಸಾಮಾಜಿಕ ಜಾಲತಾಣ ಹಾಗೂ ಸಿಂದಗಿ ಸಾರ್ವಜನಿಕ ವಲಯದಲ್ಲಿ ಜೆಡಿಎಸ್ ಅಭ್ಯರ್ಥಿ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ, ಡೀಲ್ ಆಗಿದ್ದಾರೆ ಎಂಬ ಮಾತು ಹಲವು ದಿನಗಳಿಂದ ಹರಿದಾಡುತ್ತಿದ್ದವು. ಈ ಕುರಿತು ಖೈನೂರ ಗ್ರಾಮದಲ್ಲಿ ನಡೆದ ಪ್ರಚಾರದ ವೇಳೆ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಸ್ಪಷ್ಟೀಕರಣ ನೀಡಿದ್ದಾರೆ.
ಎರಡೂ ರಾಷ್ಟಿçÃಯ ಪಕ್ಷಗಳಿಗೆ ಜೆಡಿಎಸ್ ಪಕ್ಷದ ಸಂಘಟನೆ ಮತ್ತು ಓಟ ನೋಡಿ ನಡುಕ ಉಂಟಾಗಿದ್ದು, ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯಾಗಲಿ, ನಮ್ಮ ಪದಾಧಿಕಾರಿಗಳಾಗಲಿ, ಕಾರ್ಯಕರ್ತರಾಗಲಿ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ವಿರೋಧಿಗಳ ಅಪಪ್ರಚಾರದ ನಡುವೆ ನಾವು ಗೆದ್ದೇ ಗೆಲ್ಲುತ್ತೇವೆ.
-ಸಂತೋಷ ಹರನಾಳ, ಜೆಡಿಎಸ್ ತಾಲೂಕು ಅಧ್ಯಕ್ಷರು.