ಸಿಂದಗಿ: ವಿರೋಧ ಪಕ್ಷದವರು ದಾಖಲೆಗಳ ಸಹಿತ ಮಾತನಾಡಬೇಕು. ಸಿಂದಗಿ ಪಟ್ಟಣದ ಕ್ರೀಡಾಂಗಣ ನಿರ್ಮಾಣ ನನ್ನ ಅಧಿಕಾರಾವಧಿಯಲ್ಲಿ ಅನುಮೋದನೆಗೊಂಡ ಅಧಿಕೃತ ದಾಖಲೆಗಳಿವೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಹೇಳಿದರು.
ಪಟ್ಟಣದಲ್ಲಿ ಸೋಮವಾರದಂದು ಬಿಜೆಪಿ ಕಾರ್ಯಾಲಯ ಉದ್ಘಾಟನೆ ಹಾಗೂ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕ್ಷೇತ್ರದ ಜನ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟರೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ನಿಷ್ಠೆಯಿಂದ ಈಡೇರಿಸುವೆ ಎಂದರು.
ಸಿಂದಗಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಕುರಿತು ಈಗಾಗಲೇ ೮ಕೋಟಿ ರೂ ಯೋಜನೆಯನ್ನು ಅನುಮೋದನೆಗೆ ಕಳುಹಿಸಲಾಗಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರೈತರ ಬೇಡಿಕೆಗಳನ್ನು ಈಡೇರಿಸುವೆ. ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಕ್ಕೆ ಸೇರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಲಿಂಬೆ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಪ್ರಣಾಳಿಕೆ ಅಂಶಗಳನ್ನು ವಾಚಿಸಿದರು.
ಈ ವೇಳೆ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬಿ.ಹೆಚ್.ಬಿರಾದಾರ, ರಾಜಶೇಖರ ಪೂಜಾರಿ, ಜಿ.ಪಂ ಸದಸ್ಯ ಬಿ ಆರ್ ಯಂಟಮಾನ, ನಾಗಪ್ಪ ಶಿವೂರ, ಸಿದ್ದು ಬುಳ್ಳಾ, ವೀರಭದ್ರ ಕತ್ತಿ, ಬಸವರಾಜ ಹೂಗಾರ, ಡಾ.ಅನೀಲ ನಾಯಕ, ರಾಜೂ ಪೂಜಾರಿ, ಶ್ರೀಶೈಲಗೌಡ ಬಿರಾದಾರ, ಶ್ರೀಮಂತ ನಾಗೂರ, ಮಹಾನಂದ ಸಾಲಕ್ಕಿ, ನೀಲಮ್ಮ ಯಡ್ರಾಮಿ, ಅರವಿಂದ ಕನ್ನೂರ, ಯಶವಂತರಾಯಗೌಡ ರೂಗಿ, ಅನಂತ ದೇವರಡ್ಡಿ, ಶಿವಕುಮಾರ ಬಿರಾದಾರ ಇದ್ದರು.
Related Posts
Add A Comment