ದೇವರಹಿಪ್ಪರಗಿ: ಪಟ್ಟಣಕ್ಕೆ ಇಂದು(ಮAಗಳವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಪರಿಶೀಲನೆ ನಡೆಸಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣಕ್ಕೆ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಮಧ್ಯಾನ್ಹ ೧ ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಹೆಲಿಪ್ಯಾಡ್ ನಿರ್ಮಾಣದ ಕಾರ್ಯ ಹಾಗೂ ಬಂದೋಬಸ್ತಿ ಜೊತೆಗೆ ಸುಮಾರು ಒಂದುವರೆ ಗಂಟೆಯವರೆಗಿನ ಜಿರೋ ಟ್ರಾಫಿಕ್ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು. ಜೊತೆಗೆ ಸಾರ್ವಜನಿಕರ ನಿಯಂತ್ರಣ, ಜನದಟ್ಟಣೆ ನಿಯಂತ್ರಣ, ಸ್ಥಳದ ಸ್ವಚ್ಛತೆ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಸ್.ಎಮ್.ಮಾರಿಹಾಳ, ವಿಜಯಪುರ ಗ್ರಾಮಾಂತರ ಉಪವಿಭಾಗದ ಡಿಎಸ್ಪಿ ಗಿರಿಮಲ್ಲ ತಳಕಟ್ಟಿ, ಸಿಪಿಐ ಆನಂದರಾವ್ ಎಸ್.ಎನ್, ಪಿಎಸ್‌ಐ ಆರ್.ವೈ.ಬೀಳಗಿ ಸೇರಿದಂತೆ ದೇವರಹಿಪ್ಪರಗಿ ಮತಕ್ಷೇತ್ರದ ಉಸ್ತುವಾರಿ ಅನೀಲ ಜಮಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಸುರೇಶಗೌಡ ಪಾಟೀಲ(ಸಾಸನೂರ) ಸೋಮಶೇಖರ ಹಿರೇಮಠ, ರಮೇಶ ಮ್ಯಾಕೇರಿ, ಕಾಶೀನಾಥ ತಳಕೇರಿ, ರಾಘವೇಂದ್ರ ಗುಡಿಮನಿ ಸೇರಿದಂತೆ ಇತರರು ಇದ್ದರು
Related Posts
Add A Comment