ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಅವಿನಾಶ ತಳಕೇರಿ ದಕ್ಷಿಣ ವಲಯ ೧೮ ವರ್ಷದೊಳಗಿನ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಚಕ್ರ ಎಸೆತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ ಅವಿನಾಶ ಆಂಧ್ರಪ್ರದೇಶದ ಗುಂಟೂರು ನಾಗಾರ್ಜುನ ಕ್ರೀಡಾಂಗಣದಲ್ಲಿ ಜರುಗಿದ ಏಳು ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಂಡ ದಕ್ಷಿಣ ವಲಯ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಚಕ್ರ ಎಸೆತ ವಿಭಾಗದಲ್ಲಿ ಭಾಗವಹಿಸಿ ೫೦.೪೧ ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದಿದ್ದಾನೆ.
ಸಾಧಕ ವಿದ್ಯಾರ್ಥಿ ಅವಿನಾಶ ಇವನು ಪಡಗಾನೂರ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ಮಲ್ಲಿಕಾರ್ಜುನ ತಳಕೇರಿ ಇವರ ಪುತ್ರನಾಗಿದ್ದು, ವಿದ್ಯಾರ್ಥಿಯ ಅತ್ಯುತ್ತಮ ಸಾಧನೆಗೆ ತಾಲ್ಲೂಕಿನ ಶಿಕ್ಷಕರ ಬಳಗ ಹರ್ಷ ವ್ಯಕ್ತಪಡಿಸಿದೆ.

