ಸಿಂದಗಿ: ನಗರದ ಜೆಡಿಎಸ್ ಪಕ್ಷದ ತಾಲೂಕು ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡ ಬಸವ ಜಯಂತಿಯ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಂತೋಷ ಹರನಾಳ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಸಮಾನತೆಯ ಹರಿಕಾರ ಬಸವಣ್ಣ ನಮಗೆಲ್ಲ ಇಂದು ಮಾದರಿಯಾಗಿದ್ದಾರೆ. ೧೨ನೇ ಶತಮಾನದಲ್ಲಿ ಅನಿಷ್ಟ ಪದ್ದತಿಯ ವಿರುದ್ಧ ಹೋರಾಟ ಮಾಡಿ ಸಮಾಜಕ್ಕೆ ಒಂದು ಸಮಾನತೆಯನ್ನು ಸಾರಿದ್ದು ಬಸವಣ್ಣ, ಅವರ ಒಂದು ಕ್ರಾಂತಿ ಇಂದಿನ ಪ್ರಜಾಪ್ರಭುತ್ವಕ್ಕೆ ನಾಂದಿ. ಅವರು ಇಂದು ಎಂದೆAದಿಗೂ ಶಾಶ್ವತವಾಗಿ ನಮ್ಮೊಂದಿಗಿದ್ದಾರೆ ಎಂದರು.
ಈ ವೇಳೆ ರಕ್ಷೀತ ಪಾಟೀಲ, ಹಿಂದುಳಿದ ವರ್ಗದ ಅಧ್ಯಕ್ಷ ಸಿದ್ದು ತಮದೊಡ್ಡಿ, ಇಮಾಮ್ ನಧಾಪ್, ಮಹಾಂತೇಶ ಪರಗೊಂಡ, ಶೈಲಜಾ ಸ್ಥಾವರಮಠ, ಬಿ.ಎನ್.ಪಾಟೀಲ, ಮಲ್ಲನಗೌಡ ಪಾಟೀಲ, ಭೀಮನಗೌಡ ಬಿರಾದಾರ ಸೇರಿದಂತೆ ಹಲವರು ಇದ್ದರು.
Related Posts
Add A Comment