ಸಿಂದಗಿ: ಬಸವೇಶ್ವರರು ಎಲ್ಲಾ ಸಮಾಜದವರನ್ನೂ ಅನುಭವ ಮಂಟಪದ ಪ್ರಜಾಪ್ರಭುತ್ವದ ವೇದಿಕೆಗೆ ತಂದು ಅಭಿವ್ಯಕ್ತಿ ಸ್ವಾತಂತ್ರ‍್ಯದ ಚರ್ಚಾ ವೇದಿಕೆಯಾಗಿ ಬೆಳೆಸಿದರು ಎಂದು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಭಾನುವಾರದಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ತಾಲೂಕು ದಂಡಾಧಿಕಾರಿ ನಿಂಗಪ್ಪ ಬಿರಾದಾರ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.
ಈ ವೇಳೆ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ, ಗುರು ತಾರಾಪೂರ, ಸಿದ್ದಬಸಪ್ಪ ಕುಂಬಾರ, ಜಗದೀಶ ಕಲಬುರ್ಗಿ, ಡಾ.ಅರವಿಂದ ಮನಗೂಳಿ, ಮಂಜುನಾಥ್ ಭೂಸನೂರ, ಗಂಗಾಧರ ಸೋಮನಾಯಕ್, ರಾಜಕುಮಾರ ನರಗೋದಿ, ಆರ್.ಆರ್.ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment