ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಾಗಲೋಟದಲ್ಲಿ ಬೆಳೆಯುತ್ತಿರುವ ವಿಜ್ಞಾನದ ಮಧ್ಯದಲ್ಲಿ ನಮ್ಮ ಮಕ್ಕಳು ಬೆಳೆಯಬೇಕಾದರೆ ಅವರಿಗೆ ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯ, ತಂತ್ರಜ್ಞಾನ, ಅನೇಕ ಚಟುವಟಿಕೆಗಳನ್ನು ಕಲಿಸುವುದು ಅನಿವಾರ್ಯವಾಗಿದೆ ಎಂದು ಎಚ್.ಜಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.
ಪಟ್ಟಣದ ಬಂದಾಳ ರಸ್ತೆಯ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ಯೂತ್ ಫೆಸ್ಟಿವಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಕರಿಗಿಂತ ಹೆಚ್ಚು ಸಮಯವನ್ನು ಕಳೆಯುವುದು ಪಾಲಕರ ಬಳಿ. ಶಿಕ್ಷಕರಷ್ಟೇ ಜವಾಬ್ದಾರಿಯನ್ನ ಪಾಲಕರು ಮಕ್ಕಳ ಮೇಲೆ ಇಡಬೇಕು. ವಿಜ್ಞಾನದ ಭರಾಟೆಯಲ್ಲಿ ಮಕ್ಕಳಲ್ಲಿ ಮಾನವೀಯ ಸಂಬಂಧಗಳು, ವಿವೇಚನಾ ಶಕ್ತಿ, ಸೃಜನಶೀಲ ಚಟುವಟಿಕೆಗಳು ಕುಸಿತಗೊಳ್ಳುತ್ತಿವೆ ಇದರ ಬಗ್ಗೆ ಹೆಚ್ಚು ಪಾಲಕರು ಮತ್ತು ಶಿಕ್ಷಕರು ಗಮನಹರಿಸಬೇಕು ಎಂದರು.
ಸಂಸ್ಥೆಯ ಮಾರ್ಗದರ್ಶಕ ಎಚ್‌ಜಿ ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿದರು.
ಶಾಲೆಯ ಪ್ರಾಚಾರ್ಯ ಶಾನಿಮೋಲ್ ರಾಬಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಕ್ಕಳು ನೀಡಿದ ವಿವಿಧ ರೀತಿಯ ಚಟುವಟಿಕೆಗಳ ನಿರ್ಣಾಯಕರಾಗಿ ಶಿಕ್ಷಕಿ ಬಂಗಾರಿ ಕುಲಕರ್ಣಿ ಆಗಮಿಸಿದ್ದರು.
ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೆಗ್ಗಣದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಟೇನಿ ರಾಬಿನ್ ಶಿಕ್ಷಕಿ ಪ್ರಿಯದರ್ಶಿನಿ ಅವರು ನಿರೂಪಿಸಿದರು.
ಈ ವೇಳೆ ಮಕ್ಕಳಿಂದ ಪಠ್ಯೇತರ ಚಟುವಟಿಕೆಗಳಾದ ಆಶುಭಾಷಣ, ರಂಗೋಲಿ, ಚದ್ಮವೇಶ, ಕಸದಿಂದ ರಸ ಸೇರಿದಂತೆ ವಿವಿಧ ಚಟುವಟಿಕೆಗಳು ಮಕ್ಕಳಿಂದ ಮೂಡಲ್ಪಟ್ಟವು.
ಈ ಸಂದರ್ಭದಲ್ಲಿ ಪಾಲಕರು ಮತ್ತು ಶಿಕ್ಷಕ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

