ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಅತ್ಯಂತ ಅವಶ್ಯವಾಗಿದೆ. ಅಧ್ಯಯನ ನಮ್ಮನ್ನು ಕ್ರೀಯಾಶೀಲರನ್ನಾಗಿ ಮಾಡುತ್ತದೆ ಎಂದು ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕ ಪಿ.ವ್ಹಿ.ಮಹಲಿನಮಠ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ವಿಜಯಪುರದ ಗೆಜ್ಜಿ ಕರಿಯರ್ ಅಕಾಡಮಿಯಿಂದ ಹಮ್ಮಿಕೊಂಡ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆಗಳಿಗೆ ಮಾರ್ಗದರ್ಶನ ಅತ್ಯಂತ ಮುಖ್ಯವಾಗಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ನೀವು ಯಾವ ಅಧ್ಯಯನ ಸಾಮಗ್ರಿಯನ್ನು ಬಳಸುತ್ತಿರಿ ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು. ಬಹಳಷ್ಟು ಪುಸ್ತಕಗಳನ್ನು ಓದುವುದು ನಿಮ್ಮ ಸಿದ್ದತೆಗಳಿಗೆ ಅಡ್ಡಿಯಾಗಬಹುದು ನಿರ್ದಿಷ್ಟ ಪರೀಕ್ಷೆಯ ತಯಾರಿಗಾಗಿ ಮೂಲ ಮತ್ತು ಪ್ರಮಾಣಿತ ಪುಸ್ತಕಗಳನ್ನು ಅಧ್ಯಯನ ಮಾಡಲು ಖಚಿತ ಪಡಿಸಿಕೊಳ್ಳಿ. ವೇಳಾ ಪಟ್ಟಿಗೆ ಅನುಗುಣವಾಗಿ ಓದಿನ ರೂಡಿ ಮಾಡಿಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಸಿ.ನಂದಿಕೋಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ವಿಜಯಪುರದ ಗೆಜ್ಜಿ ಕರಿಯರ್ ಅಕಾಡಮಿಯ ರಮೇಶ ಹಾದಿಮನಿ, ಬಿ.ಎಸ್.ಪೂಜಾರಿ, ಅನೀಲ ಬೆಳಗಲಿ ಹಾಗೂ ಸಿಇಟಿ ಮತ್ತು ಟಿಇಟಿ ಕಾರ್ಯಗಾರದ ಸಂಯೋಜಕ ಸುಧಾಕರ ಚವ್ಹಾಣ ಇದ್ದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.
ಜೋಗೂರ, ಎನ್.ಬಿ.ಪೂಜಾರಿ, ದಾನಯ್ಯ ಮಠಪತಿ, ಪಿ.ಸಿ.ಕುಲಕರ್ಣಿ, ಆರ್.ಎ.ಹಾಲಕೇರಿ, ವಿದ್ಯಾ ಮೊಗಲಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.

