ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೨೦/೧೧೦/೧೧ ಕೆ.ವಿ ಬಸವನ ಬಾಗೇವಾಡಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ೨೨೦ ಕೆ.ವಿ ಐಸೋಲೇಟರ್‌ಗಳ ನಿರ್ವಹಣೆ ಕೈಗೊಂಡಿರುವುದರಿಂದ ೧೧೦ ಕೆ.ವಿ ಮಾರ್ಗಗಳಲ್ಲಿ ಬರುವ ೧೧೦/೧೧ ಕೆ.ವಿ ಮಟ್ಟಿಹಾಳ, ಮಲಘಾಣ, ರೋಣಿಹಾಳ, ಮುದ್ದೇಬಿಹಾಳ, ಹಿರೇಮುರಾಳ, ಕೋಳೂರು, ಉಕ್ಕಲಿ ಹಾಗೂ ನಂದಿಹಾಳ ಉಪಕೇಂದ್ರಗಳಲ್ಲಿಯೂ ಸಹ ಎರಡನೇ ತ್ರೈಮಾಸಿಕ ನಿರ್ವಹಣಾ ಕಾರ್ಯಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಈ ವಿದ್ಯುತ್ ಉಪಕೇಂದ್ರಗಳಿಂದ ಸರಬರಾಜಾಗುವ ೧೧ಕೆವಿ ಮಾರ್ಗಗಳಲ್ಲಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ, ಹಾಗೂ ಕೃಷಿ ನೀರಾವರಿ ಮಾರ್ಗಗಳಿಗೆ ಸೆಪ್ಟೆಂಬರ್ ೨೫ರಂದು ಬೆಳಿಗ್ಗೆ ೯ರಿಂದ ಸಾಯಂಕಾಲ ೫ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಬಸವನ ಬಾಗೇವಾಡಿಯ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
