ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ಪಾಲಿಕೆ ವಾರ್ಡ್ ನಂ.7 ರಲ್ಲಿ ಬರುವ ಶಿವಾಜಿ ಪೆಟ್ ಧೋಬಳೆ ಗಲ್ಲಿಯಲ್ಲಿ ಸೋಮವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಚಾಲನೆ ನೀಡಿದರು.
ಮನೆ ಮನೆಗೆ ತೆರಳಿ ಸದಸ್ಯತ್ವ ನಡೆಸಿ, ಸದಸ್ಯತ್ವ ಪಡೆದವರಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ಮಳುಗೌಡ ಪಾಟೀಲ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ, ಸಂಜು ಮೋರೆ, ಕಿರಣ ಮೋರೆ, ಅಕ್ಷಯ ಸೊನಾವನೆ, ಸಾಗರ ಮೋರೆ, ತೇನಜಿ ಜಾಧವ, ವಿಕಾಶ ಚವ್ಹಾಣ, ಸುಹಾಸ್ ವಲ್ಯಾಪುರ, ಅಪ್ಪು ಮಸ್ಕೆ, ದೀಪಕ ಬೊರಡೆ ಸೇರಿದಂತೆ ಮತ್ತಿತರರು ಇದ್ದರು.

