ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಮಹಾಂತೇಶ ನಗರದ ನಿವಾಸಿ ಕವಿತಾ ಲಮಾಣಿ ತನ್ನ ೭ವರ್ಷದ ಮಗನೊಂದಿಗೆ ಕಾಣೆಯಾಗಿರುವದಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ತಾಲೂಕಿನ ಗೆದ್ದಲಮರಿ ಗ್ರಾಮದ ನಿವಾಸಿಗಳಾಗಿದ್ದ ಇವರು ಕಳೆದ ಕೆಲವು ದಿನಗಳಿಂದ ಪಟ್ಟಣದ ಮಹಾಂತೇಶ ನಗರದಲ್ಲಿ ವಾಸವಾಗಿದ್ದರು. ಸೆ.೧೯ ರಂದು ಬೆಳಿಗ್ಗೆ ೧೧:೩೦ ಗಂಟೆಯ ಸುಮಾರು ಶಾಲೆಯಲ್ಲಿದ್ದ ತನ್ನ ಮಗುವನ್ನು ಕರೆದುಕೊಂಡು ಬರಲು ಹೋದವಳು ಮನೆಗೆ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದಾರೆ ಎಂದು ಕವಿತಾಳ ಪತಿ ವಿಷ್ಣು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
