ರಾಜ್ಯ ಮಟ್ಟದ ನಾಥ್ ಹಾಗೂ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯು ಸೂಫಿ ಸಂತ ಶರಣರ ನಾಡಾಗಿದೆ. ಎಲ್ಲರನ್ನೂ ಸರಿಸಮಾನರಾಗಿ ಕಾಣುವ ಮಾತೃ ಸ್ವರೂಪಿ ಜಿಲ್ಲೆಯಾಗಿದ್ದರ ಹಿನ್ನಲೆ ಇಂದು ವಿಜಯಪುರ ಜಿಲ್ಲೆ ಐತಿಹಾಸಿಕ ಪಾರಂಪರಿಕವಾಗಿ ಗುರುತಿಸಿಕೊಂಡು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಅವರು ನಗರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಮೊಹಮೀದಿಯ ನಾಥ್ ಕಮೀಟಿಯ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ನಾಥ್ ಹಾಗೂ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶ ಕಟ್ಟುವುದಕ್ಕೆ ಮಕ್ಕಳ ಪಾತ್ರ ಬಹು ಮುಖ್ಯವಾಗಿದ್ದರಿಂದ ಕಳೆದ ೪೦ ವರ್ಷದಿಂದ ಇಂತಹ ಚಟುವಟಿಕೆ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಮಕ್ಕಳ ಉತ್ತಮ ಬೆಳವಣಿಗೆಗೆ ರಸಪ್ರಶ್ನೆ ಕಾರ್ಯಕ್ರಮ ಅವಶ್ಯಕವಾಗಿದೆ. ಸಂಸ್ಥೆಯು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸುಗಮ ದಾರಿಯಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಮಕ್ಬುಲ್ ಭಾಗವಾನ, ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಗಯಾಸ ಪಾಶಾ ಜಾಹಗೀರದಾರ ಅಧ್ಯಕ್ಷತೆಯನ್ನು ವಹಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಸಿರಾಜ ಜಮಖಂಡಿ, ಪ್ರಧಾನ ಕಾರ್ಯದರ್ಶಿ ಜಾಹಂಗೀರ ಹಿಪ್ಪರಗಿ, ಖಜಾಂಚಿ ಸೈಯದರಸುಲ ಕೋಲಾರ, ಹಿರಿಯ ಸದಸ್ಯರಾದ ಅಬ್ದುಲ್‌ರಜಾಕ ಕೋಲಾರ, ಜಾಕೀರಹುಸೇನ ಸುರಕಿ, ಫಯಾಜ ಕಲಾದಗಿ, ಎಮ್.ಎಸ್. ಪಾಟೀಲ ಗಣಿಯಾರ, ಅಬುಬಕರ ಅಂಬರಕಾನೆ, ಹಸನ ನದಾಫ್, ಅಲ್ತಾಪ್ ಭಾಗವಾನ, ಮಹಾದೇವ ರಾವಜಿ, ಮುಜಾಮಿಲ್ ಮುಲ್ಲಾ, ಸಾಹೇಬ ಅವಟಿ ಮುಂತಾದವರು ವೇದಿಕೆಯ ಮೇಲೆ ಇದ್ದರು.
ಈ ಸಂದರ್ಭದಲಿ ಅಸ್ಪಾಕ ಕೋಲಾರ, ಇಲಿಯಾಸ ನಾಯಕ, ಬಾಬಾಜಾನ ಪುಣೆಕಾರ, ನಸ್ಸೀಂ ರೋಜಿನದಾರ, ಸಾಧಿಕ ಜಾನ್ವೆಕರ, ಹಸ್ಸೀಂ ಕಲಾದಗಿ, ಇಸಾಕ ಚಟ್ಟರಕಿ, ಆಸೀಪ್ ಬಾಂಗಿ, ಶೇಹಬಾಜ ಭಕ್ಷಿ, ಬಿ.ಎಮ್. ಸಾಲೋಟಗಿ, ಜಾಕೀರ ಜುನಾಘಡ, ಇಲಿಯಾಸ ಬುಕಾರಿ, ಇರ್ಫಾನ್ ತಾಳಿಕೋಟ, ಶ್ರೀಮತಿ ಇಶ್ರತ್‌ಜಹಾ ಪಠಾನ, ಅಲ್ಲಾಭಕ್ಷಿ ಮನಿಯಾರ, ನಬಿಲಾಲ ಮಕಾಂದಾರ, ಯೂಸಫ್ ಖಾಜಿ, ಮಹಮ್ಮದ್ದ್ಆರೀಫ್ ಜೈನಾಪೂರ ಉಪಸ್ಥಿತರಿದ್ದರು.
ಅಬ್ದುಲ್‌ನಬಿ ಜಮಾದಾರ ನಿರೂಪಿಸಿದರು. ಇಕ್ಬಾಲ್ ಕೋಲಾರ ವಂದಿಸಿದರು.

