ವಿಜಯಪುರ: ಅತೀ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯ ನಾಗಠಾಣ ಮೀಸಲು (ಎಸ್.ಸಿ) ಮತಕ್ಷೇತ್ರವು ಮಾತ್ರ ಅಭಿವೃದ್ದಿಯಿಂದ ವಂಚಿತಗೊAಡಿದ್ದು, ಇಲ್ಲಿಯವರೆಗೆ ಈ ಕ್ಷೇತ್ರಕ್ಕೆ ಆರಿಸಿ ಬಂದಿರುವ ಯಾವೊಬ್ಬ ಶಾಸಕರು ಅಭಿವೃದ್ದಿ ಕೆಲಸವನ್ನು ಮಾಡಿಲ್ಲ. ಈ ಬಾರಿಯಾದರೂ ಸಹ ನಾಗಠಾಣ ಮತಕ್ಷೇತ್ರಕ್ಕೆ ಒಬ್ಬ ಪ್ರಜ್ಞಾವಂತ ಜನಪ್ರತಿನಿಧಿಯನ್ನು ಆರಿಸುವ ಜವಾಬ್ದಾರಿ ಎಲ್ಲ ನಾಗಠಾಣ ಮತಕ್ಷೇತ್ರದ ಮತದಾರರ ಮೇಲೆ ಇದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಕೃಷಿಗೆ ಒತ್ತು ನೀಡಬೇಕು. ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಬೇಕು. ಇಲ್ಲಿ ವಿದ್ಯಾವಂತ ನಿರುದ್ಯೋಗ ಯುವಕರು ಬಹಳಷ್ಟಿದ್ದು, ಅವರಿಗೆ ಉದ್ಯೋಗ ಒದಗಿಸುವಂತಾಗಬೇಕು. ಇಲ್ಲಿಯವರೆಗೆ ಈ ಮತಕ್ಷೇತ್ರಕ್ಕೆ ಸ್ಪರ್ಧೆ ಬಯಸಿದ ಜನಪ್ರತಿನಿಧಿಗಳು ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆಯೇ ಹೊರತು ಮತಕ್ಷೇತ್ರದ ಜನರ ಅಭಿವೃದ್ದಿ ಕಡೆಗೆ ಕಿಂಚಿತ್ತು ಜವಾಬ್ದಾರಿಯುತ ಕೆಲಸವನ್ನು ಮಾಡಿರುವದಿಲ್ಲ.
ಆದ್ದರಿAದ ಈ ಬಾರಿಯ ಚುನಾವಣೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಯುವಕರ ಪರವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಮತದಾರರು ಆರಿಸಿ ಕ್ಷೇತ್ರವು ಅಭಿವೃದ್ದಿಗೊಳ್ಳುವಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ಹಾಗೂ ಮತದಾನದ ವೇಳೆಯಲ್ಲಿ, ಹಣ, ಬಟ್ಟೆ, ಸಾರಾಯಿಗಳಿಗೆ ಬಲಿಯಾಗದೇ ತಮ್ಮ ಮತವನ್ನು ಚಲಾಯಿಸಬೇಕೆಂದು ಕರ್ನಾಟಕ ರಣಧೀರ ಪಡೆಯ ವಿಜಯಪುರ ತಾಲೂಕಾ ಅಧ್ಯಕ್ಷ ರಾಕೇಶ ಕುಮಟಗಿ ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
ಆಮಿಷಗಳಿಗೆ ಬಲಿಯಾಗದೇ ಯೋಗ್ಯ ವ್ಯಕ್ತಿಗೆ ಮತ ಚಲಾಯಿಸಿ :ರಾಕೇಶ
Related Posts
Add A Comment