ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯದಡಿ ಕುರುಬ ಸಮುದಾಯಕ್ಕೆ ಟಿಕೇಟ್ ನೀಡುವ ಅವಕಾಶವಿದ್ದಾಗಲೂ ಅದನ್ನು ನೀಡದೇ ಇರುವ ಪಕ್ಷದ ಕ್ರಮದ ಕುರಿತು ಮತಕ್ಷೇತ್ರದ ಕಾಂಗ್ರೆಸ್ ಧುರೀಣೆ ಗೌರಮ್ಮ ಮುತ್ತತ್ತಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಜಿಲ್ಲೆಯ ಕುರುಬ ಸಮುದಾಯದ ಸಮಾಧಿಯ ಮೇಲೆ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮ್ಮ ಸೌಧ ನಿರ್ಮಿಸಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಇಡೀ ಜಿಲ್ಲೆಯಲ್ಲಿ ಯಾವೋಬ್ಬ ಕುರುಬ ಸಮುದಾಯದ ವ್ಯಕ್ತಿ ಅಥವಾ ಮಹಿಳೆಗೆ ಅವಕಾಶ ನೀಡದೇ ನಿರಾಶೆಗೊಳಿಸಿದೆ. ಅದಾಗ್ಯೂ ಪಕ್ಷಕ್ಕೆ ಸಮುದಾಯದ ಮತಗಳು ಬೇಕು ಆದರೆ ಅವಕಾಶ ಮಾತ್ರ ಬೇಡ ಎನ್ನುವಂತಾಗಿದೆ. ಹಿಂದೆ ಸಮುದಾಯದಿಂದ ಯಾರು ಟಿಕೇಟ್ ಕೇಳುತ್ತಿರಲಿಲ್ಲ. ಆದರೆ ಈಗ ಅರ್ಹರು ಅವಕಾಶ ಕೇಳುತ್ತಿದ್ದರು ಸ್ಪರ್ಧಿಸಲು ಅವರಿಗೆ ಸ್ಥಾನ ನೀಡುತ್ತಿಲ್ಲ. ಜೊತೆಗೆ ಮಹಿಳಾ ಮೀಸಲಾತಿ ಅಡಿಯಲ್ಲಿ ಕ್ಷೇತ್ರದಲ್ಲಿ ಸಮುದಾಯದ ಮಹಿಳೆಯರು ಅರ್ಹತೆ ಹೊಂದಿದ್ದರೂ ಅವರಿಗೂ ಸಹ ಅವಕಾಶ ನೀಡಿಲ್ಲ.
ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಅವಕಾಶಗಳ ತತ್ವ ಪ್ರತಿಪಾದನೆ ಮಾಡುವ ಕಾಂಗ್ರೆಸ್ ಪಕ್ಷದ ನಡೆ ಈ ಬಾರಿ ಇಡೀ ಜಿಲ್ಲೆಯ ಕುರುಬ ಸಮುದಾಯ ಹಾಗೂ ಮಹಿಳಾ ಆಕಾಂಕ್ಷಿಗಳಿಗೆ ತೀವೃ ನಿರಾಶೆಯನ್ನುಂಟು ಮಾಡಿದೆ ಎಂದು ತಮ್ಮ ನಿರಾಶೆ ವ್ಯಕ್ತಪಡಿಸಿದರು. ಅದಾಗ್ಯೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಲಾಗುವುದು ಎಂದಿದ್ದಾರೆ.
Subscribe to Updates
Get the latest creative news from FooBar about art, design and business.
ಕುರುಬರ ಸಮಾಧಿಯ ಮೇಲೆ ಕಾಂಗ್ರೆಸ್ ನಾಯಕರ ಸೌಧ ನಿರ್ಮಾಣ :ಗೌರಮ್ಮ ಮುತ್ತತ್ತಿ
Related Posts
Add A Comment