ವಿಜಯಪುರ: ಜಿಲ್ಲೆಯಲ್ಲಿ ಆಚರಿಸುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾಲಕ್ಕೆ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಯ ದಿನವಾದ ಸೆ.೦೭ರ ಬೆಳಿಗ್ಗೆ ೬ ರಿಂದ ಸೆ.೦೮ರ ಬೆಳಿಗ್ಗೆ ೬ರವರೆಗೆ, ಐದನೇ ದಿವಸದ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೧ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೨ರ ಬೆಳಿಗ್ಗೆ ೬ ಗಂಟೆಯವರೆಗೆ, ಏಳನೇ ದಿವಸದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೩ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೪ರ ಬೆಳಿಗ್ಗೆ ೬ ಗಂಟೆಯವರೆಗೆ, ಒಂಭತ್ತನೇ ದಿವಸದ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೫ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೬ರ ಬೆಳಿಗ್ಗೆ ೬ ಗಂಟೆಯವರೆಗೆ ಹಾಗೂ ಹನ್ನೊಂದನೇ ದಿವಸದ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೭ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೮ರ ಬೆಳಿಗ್ಗೆ ೬ ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಆದೇಶಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
