ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಸಾಮೂಹಿಕ ವಿವಾಹ ಮಾಡಿಸಿ ಬಡಕುಟುಂಬಗಳಿಗೆ ದಾರಿದೀಪವಾದ ಹೆಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು – ಸೌಮ್ಯ ಅನಿಲ್ ದಂಪತಿ. ಇಂದಿನ ದಿನಗಳಲ್ಲಿ ಮದುವೆ ಎನ್ನುವುದು ಅತ್ಯಂತ ದುಬಾರಿ ಆಚರಣೆಯಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಸಾಮಾಜಿಕ ಕಳಕಳಿಯನ್ನು ಮೆರೆಯುವ ‘ಸಾಮೂಹಿಕ ಸರಳ ವಿವಾಹ’ಗಳು ಮಾದರಿಯಾಗುತ್ತಿವೆ. ಇಂತಹ ಮಹತ್ಕಾರ್ಯಕ್ಕೆ ಮುಂದಾಗಿ ನಾಲ್ಕು ಜೋಡಿ ಸಾಮೂಹಿಕ ಸರಳ ವಿವಾಹ ನೆರವೇರಿಸುವ ಮೂಲಕ ಶಾಸಕ ಅನಿಲ್ ಚಿಕ್ಕಮಾದು ಮಾದರಿಯಾಗಿದ್ದಾರೆ.
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯು ಈ ಯೋಜನೆಯಡಿ ವಧುವಿಗೆ ಚಿನ್ನದ ತಾಳಿ, ವರನಿಗೆ ಧೋತಿ-ಶರ್ಟ್ ಮತ್ತು ದಂಪತಿಗಳಿಗೆ ಒಟ್ಟು ₹55,000 ವರೆಗಿನ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಆದರೆ ನಂಜಗೂಡಿನಲ್ಲಿ ನಡೆದ ಈ ಸಾಮೂಹಿಕ ವಿವಾಹಕ್ಕೆ ಸರ್ಕಾರದಿಂದ ಒಂದೇ ಒಂದು ರೂಪಾಯಿ ಹಣ ಪಡೆಯದೆ ತಾಳಿ ಬಟ್ಟೆ, ಬಂದಂತಹ ಪ್ರತಿಯೊಬ್ಬರಿಗೂ ಊಟ ತಿಂಡಿ ವ್ಯವಸ್ಥೆ ಮಾಡುವ ಮೂಲಕ ಸಂಪೂರ್ಣ ವೆಚ್ಚವನ್ನು ಶಾಸಕ ಅನಿಲ್ ಚಿಕ್ಕಮಾದು ದಂಪತಿ ವಹಿಸಿಕೊಂಡಿದ್ದು ಮಾತ್ರವಲ್ಲದೆ ತಾವೇ ಮುಂದೆ ನಿಂತು ವಿವಾಹ ಮಾಡಿಸಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ,

