ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕೆ. ಬಿ. ಎಸ್ ನಂಬರ 28 ಟ್ರೇಝರಿ ಕಾಲನಿ ಶಾಲೆಯಲ್ಲಿ ಮಂಗಳವಾರ ನೂತನ ಎಸ್.ಡಿ. ಎಂ.ಸಿ ರಚನೆ ಮಾಡಲಾಯಿತು.
ಎಸ್. ಡಿ.ಎಂ. ಸಿ ಅಧ್ಯಕ್ಷರಾಗಿ ಬಸವರಾಜ ಬಡಿಗೇರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಉಮಾ ಕಾಂಬಳೆ ಅವರು ಆಯ್ಕೆಯಾದರು. ಈ ಸಂದರ್ಭದಲ್ಲಿ ವಾರ್ಡ್ ನಂಬರ 35ರ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಶೇಖರ ಕುರಿ, ಶಿಕ್ಷಣ ಸಂಯೋಜಕ ಎ. ಕೆ.ದಳವಾಯಿ, ಸಿ. ಆರ್. ಪಿ ಬಸವರಾಜ ಪಡಗಾನೂರ, ಹಿಂದಿನ ಎಸ್. ಡಿ. ಎಂ. ಸಿ ಸದಸ್ಯರು, ಎಲ್ಲ ಮಕ್ಕಳ ಪಾಲಕ ಪೋಷಕರು ಭಾಗವಹಿಸಿದ್ದರು.
ನೂತನವಾಗಿ ಆಯ್ಕೆಯಾದ ಎಸ್. ಡಿ. ಎಂ. ಸಿ ಅಧ್ಯಕ್ಷರಿಗೂ ಉಪಾಧ್ಯಕ್ಷರು ನಮ್ಮ ಶಾಲೆಯ ಪರವಾಗಿ ಅಭಿನಂದಿಸಲಾಯಿತು.

