ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷೆ ಪ್ರಾಧ್ಯಾಪಕರಾಗಿರುವ ಎಸ್. ಎಸ್. ಖಾದ್ರಿಯವರು ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಂತೋಷ ಜಿ.ಕೆ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ” ಇಕೋ ಎಸ್ಥಟಿಕ್ಸ್ ಅಂಡ್ ಕಾನ್ಶಿಯಸ್ನೆಸ್ ಆಫ್ ನೇಚರ್ ಇನ್ ದ ಸೆಲೆಕ್ಟ್ ವರ್ಕ್ಸ್ ಆಫ್ ಪೂರ್ಣಚಂದ್ರ ತೇಜಸ್ವಿ ಅಂಡ್ ಶ್ರೀ ಕೃಷ್ಣ ಆಲನಹಳ್ಳಿ” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು ಪಿ.ಎಚ್.ಡಿ ಪದವಿ ಪ್ರಧಾನ ಮಾಡಿರುತ್ತಾರೆ.
ಕನ್ನಡ ಸಾಹಿತಿಗಳಾದ ಕೃಷ್ಣ ಆಲನಹಳ್ಳಿ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಕುರಿತು ಆಂಗ್ಲ ಭಾಷೆಯಲ್ಲಿ ಇದು ಪ್ರಥಮ ಮಹಾ ಪ್ರಬಂಧವಾಗಿರುತ್ತದೆ.
ಇವರ ಸಾಧನೆಯನ್ನು ಮೆಚ್ಚಿ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಅತಿಥಿ ಉಪನ್ಯಾಸಕರು, ಸ್ನೇಹಿತ ಬಳಗದವರು ಹಾಗೂ ಅವರ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿರುತ್ತಾರೆ.

