ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ನೂತನ ಅಧ್ಯಕ್ಷರನ್ನಾಗಿ ಮಾಜಿ ತಾಪಂ ಸದಸ್ಯ ಬಸವರಾಜ ತೆಲ್ಲೂರ ಆಯ್ಕೆಯಾದರು.
ಸಿಂದಗಿ ಶಾಸಕ ಅಶೋಕ್ ಮನಗೂಳಿ ನಿರ್ದೇಶನದ ಮೇರೆಗೆ ಎರಡನೇ ಅವಧಿಗೆ ಬಸವರಾಜ ತೆಲ್ಲೂರ ಅವರನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಮೊದಲ ಅವಧಿಯ ಅಧ್ಯಕ್ಷರಾಗಿ ಪ.ಪಂ.ಸದಸ್ಯ ಅಶೋಕ ಕೊಳಾರಿ ಅವರಿದ್ದರು.
ಇದರ ಜೊತೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾಗಿದ್ದ ವಾಹಬ ಸುಂಬಡ ಅವರ ನಿಧನದಿಂದ ಆ ಸ್ಥಾನಕ್ಕೆ ಅವರ ಮಗನಾದ ಅನಸ ಸುಂಬಡ ಅವರನ್ನು ನೇಮಕ ಮಾಡಿದರು. ಶುಕ್ರವಾರ ಗ್ಯಾರೆಂಟಿ ಸಮಿತಿ ಕಾರ್ಯಾಲಯದಲ್ಲಿ ಅಧಿಕಾರ ಪದಗ್ರಹಣ ನಡೆಯಿತು.
ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಸಾಧಿಕ ಸುಂಬಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ತೆಲ್ಲೂರ, ಗ್ಯಾರೆಂಟಿ ಸಮಿತಿ ಸದಸ್ಯ ಪ್ರಶಾಂತ್ ನಾಶಿ, ಸೋಮು ಮೇಲಿನಮನಿ, ಮುಖಂಡರಾದ ಭೀಮ ಬಮ್ಮನಹಳ್ಳಿ, ಅಪ್ಪುಗೌಡ ಪಾಟೀಲ ಮುಂತಾದವರು ಇದ್ದರು.

