ಮೋರಟಗಿ: ದಿನನಿತ್ಯ ಯೋಗಾಭ್ಯಾಸ ಮಾಡುವದರಿಂದ ಮಾನಸಿಕ ಶಾಂತಿ ಮತ್ತು ಆರೋಗ್ಯಕರ ಬದುಕು ರೂಡಿಸಿಕೊಳ್ಳಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಸಿದ್ದರಾಮ ಅಂಕಲಗಿ ಹೇಳಿದರು.
ಅಂತಾರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ಗ್ರಾಮದ ಶ್ರೀ ಕೆರೆಸಿದ್ದೇಶ್ವರ ಅಮೃತ ಸರೋವರದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೫ ಸಾವಿರ ವರ್ಷಗಳ ಸುದೀರ್ಘ ಇತಿಹಾಸದ ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಹಿರಿಮೆ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ ಯುವ ಪೀಳಿಗೆಗೆ ಯೋಗದ ಮಹತ್ವ ತಿಳಿಸುವುದು ಅವಶ್ಯವಿದೆ ಯುವಕರು ಕೆಟ್ಟ ವ್ಯಸನಗಳನ್ನು ಬಿಟ್ಟು ಯೋಗಕ್ಕೆ ಮುಂದಾಗಬೇಕು ಎಂದರು.
ನಂತರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ ಮಾತನಾಡಿ, ಜಂಜಾಟದ ಬದುಕಿನಲ್ಲಿ ಒತ್ತಡದ ಜೀವನ ನಡೆಸುತ್ತಿರುವ ನಮ್ಮೆಲರಿಗೂ ಯೋಗ ಸಹಕಾರಿಯಾಗಿದ್ದು, ಯೋಗದಿಂದ ಏಕಾಗ್ರತೆ, ಆತ್ಮವಿಶ್ವಾಸ,ರೋಗ ನಿರೋದಕ ಶಕ್ತಿ ವೃದ್ಧಿಸುವ ಜೊತೆಗೆ ಮಾನಸಿಕ ಖಿನ್ನತೆ ಮತ್ತು ದುಶ್ಚಟಗಳಿಂದ ದೂರವಿರಬಹುದು ಪ್ರತಿಯೊಬ್ಬ ಪಾಲಕರು ಯೋಗವನ್ನು ಅರಿತು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಜ್ಜಾಗಬೇಕು ಎಂದರು.
ನಂತರ ತಾಲೂಕು ನರೇಗಾ ಐ ಈ ಸಿ ಸಂಯೋಜಕ ಬಸವರಾಜ ಹುಣಸಗಿ ಸುಮಾರು ೪೫ ನಿಮಿಷಗಳ ಕಾಲ ವಿವಿಧ ರಿತಿಯ ಯೋಗಭ್ಯಾಸವನ್ನು ಮಾಡಿಸಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ, ನರೇಗಾ ಸಹಾಯಕ ನಿರ್ದೇಶಕ ಸಿದ್ದರಾಮ ಅಂಕಲಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ,ಗ್ರಾಮ ಪಂ ಅಧ್ಯಕ್ಷರ ಪ್ರತಿನಿಧಿ ರವಿಕಾಂತ್ ನಡುವಿನಕೇರಿ, ತಾಂತ್ರಿಕ ಸಂಯೋಜಕ ಪುಂಡಲೀಕ ಬಿಸ್ಸೆ, ತಾಲೂಕು ಐಈಸಿ ಸಂಯೋಜಕ ಬಸವರಾಜ ಹುಣಸಗಿ, ತಾಲೂಕು ಎಂಐಎಸ್ ಸಂಯೋಜಕಿ ಪೂಜಾ ಆಸಂಗಿಹಾಳ,ಗ್ರಂಥಾಲಯ ಮೇಲ್ವಿಚಾರಕ ಎಲ್ ಎಸ್ ಪತ್ತಾರ, ಕಾರ್ಯದರ್ಶಿ ಸುಭಾಸ್ ಮಿಲಿಟರಿ, ಡಿಈಓ ಮಲ್ಲು ದುದ್ದಗಿ, ಶ್ರೀ ಸಿದ್ದಾರಾಮೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಸರ್ವ ಸದಸ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

