ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯದ ದಿಕ್ಷಾಬದ್ಧ ಕನ್ನಡ ಸಂಘಟನೆಯಾದ ಕದಂಬ ಸೈನ್ಯ ಸಂಘಟನೆ ವಿಜಯಪುರ ಜಿಲ್ಲಾ ಘಟಕಕ್ಕೆ ರಾಜ್ಯ ಉಪಾಧ್ಯಕ್ಷರಾದ ಎನ್ ಸಿ ಕಾಂಬಳೆ ಹಾಗೂ ರಾಜ್ಯ ಕಾರ್ಯದರ್ಶಿಯಾದ ವಿನಾಯಕ್ ಸೊಂಡೂರ್ ಅವರ ಶಿಪಾರಸ್ಸು ಮೇರೆಗೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಆಯುಷ್ಮಾನ್ ರಮೇಶ್ ಬೇಕ್ರಿಯವರು ಈರಯ್ಯ ಶಾಂತಯ್ಯ ಹಿರೇಮಠರನ್ನು ಜಿಲ್ಲಾಧ್ಯಕ್ಷರನ್ನಾಗಿ ಹಾಗೂ ಸಾಯಬಣ್ಣ ಬಸಪ್ಪ ಹಳ್ಳಿ ಇವರನ್ನು ಜಿಲ್ಲಾ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಿದ್ದಾರೆ.
ಕರ್ನಾಟಕದ ನೆಲ ಜಲ ಭಾಷೆಗಾಗಿ ಹೋರಾಡುವುದು ನಾಡಿನ ಭಾಷೆಯ ಅಭಿಮಾನವನ್ನು ಬೆಳೆಸಿಕೊಂಡು ಶ್ರಮಿಸಲು ಸೂಚಿಸಿ ಸಂಘಟನೆಯ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಶ್ರಮಿಸಲು ಸೂಚಿಸಿ ಆದೇಶಿಸಿದ್ದಾರೆ.

