Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಸಾಹಿತ್ಯ ನಿರಂತರ ಹರಿವ ನದಿ ಇದ್ದಂತೆ

ಚಡಚಣ ತಾಲೂಕು ಕಾ.ನಿ.ಪನೂತನ ಪದಾಧಿಕಾರಿಗಳಿಗೆ ಸನ್ಮಾನ

ಕದಂಬ ಸೈನ್ಯ ಜಿಲ್ಲಾಧ್ಯಕ್ಷರಾಗಿ ಹಿರೇಮಠ ನೇಮಕ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ
ವಿಶೇಷ ಲೇಖನ

ಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜು
ಹಿರೇಬಾಗೇವಾಡಿ
ತಾ: ಜಿ: ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಜೀವನದ ಜಂಜಾಟದೊಳಗೆ ಬಿದ್ದು ತಲೆ ಚಿಟ್ ಹಿಡಿದು ಹೋಗಿದೆ. ಬದುಕಿನ ತಾಪತ್ರಯಗಳನ್ನು ಕಂಡು ಮನಸ್ಸು ರೋಸಿ ಹೋಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಅನ್ನೋದು ನಮ್ಮಲ್ಲಿ ಅನೇಕರ ಗೊಣಗಾಟ. ಈ ಸಮಸ್ಯೆಗಳಿಂದ ಅದ್ಯಾವಾಗ ಮುಕ್ತಿ ಸಿಗುತ್ತೋ ಎಂಬ ವಿಚಾರದೊಳಗೆ ಮುಳುಗಿರುವದೇ ಜೀವನ ಆಗಿಬಿಟ್ಟಿದೆ.
ಹೀಗೆ ನಮ್ಮ ತಲೆ ಪ್ರತಿಕ್ಷಣ ಏನಾದರೂ ಒಂದನ್ನು ಯೋಚಿಸುತ್ತಲೇ ಇರುತ್ತದೆ. ಮಲಗಿಕೊಂಡಾಗಲೂ ಅದಕ್ಕೆ ವಿಶ್ರಾಂತಿ ಇಲ್ಲ. ಬಹಳಷ್ಟು ಸಾರಿ ಸಣ್ಣ ಸಣ್ಣ ವಿಚಾರಕ್ಕೂ ಅತಿಯಾಗಿ ಯೋಚಿಸಿ ಇತರರು ಅಪಹಾಸ್ಯ ಮಡುವಂತಹ ಪ್ರಸಂಗಗಳು ನಡೆಯುತ್ತವೆ. ಹೀಗೆ ಅಪಹಾಸ್ಯಕೊಳಗಾಗಬಾರದೆಂದು ಮತ್ತೆ ಮತ್ತೆ ವಿಚಾರ ಮಾಡುವದು ಸರಿಯೆನಿಸಿದರೂ ಇದು ಅನೇಕ ಬಾರಿ ಆತಂಕಕ್ಕೆ ತಳ್ಳುತ್ತದೆ. ಕೆಲವು ಬಾರಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೂ ಎಲ್ಲಿ ಕೆಲಸ ಅರ್ಧಕ್ಕೆ ನಿಂತು ಬಿಡುತ್ತೇನೋ, ಕೆಟ್ಟು ಬಿಡುತ್ತೆನೋ ಎಲ್ಲಿ ಮುಖಭಂಗಕ್ಕೆ ಒಳಗಾಗಬೇಕಾಗುತ್ತೆನೊ? ಎಂದು ಅತಿಯಾದ ಯೋಚನೆಗಳಿರುವ ಗೊಂದಲದ ಹೊಂಡದಲ್ಲಿ ಮುಳುಗಿ ನೋವು ಅನುಭವಿಸುತ್ತೇವೆ.
ಕೆಲಸ ಸುಲಲಿತವಾಗಿ ನಡೆಯುತ್ತಿರವಾಗಲೂ ಅದರ ಬಗ್ಗೆ ಅನುಮಾನ ಪಡುವದು ಅಯ್ಯೋ! ಈ ಕೆಲಸ ಇಷ್ಟು ಸುಗಮವಾಗಿ ನಡೆಯುತ್ತೆ ಅಂತ ಅನಿಸಿರಲೇ ಇಲ್ಲ. ಸರಳವಾಗಿ ನಡೆತಿರೋದನ್ನು ನನ್ನ ಕೈಲಿ ನಂಬೋಕೆ ಆಗ್ತಿಲ್ಲ. ಅಂತ ಹಲವರು ಹಲಬುತ್ತಾರೆ. ಹೀಗೆ ಅತಿಯಾದ ಯೋಚನೆ ಶುಭ್ರವಾದ ಸರೋವರದಂತಿರುವ ಮನಸ್ಸನ್ನು ಕೆಸರಿನ ಹೊಂಡವನ್ನಾಗಿಸಿ ಬಿಡುತ್ತದೆ. ಇದರಿಂದ ಸಣ್ಣ ಸಣ್ಣ ಕೆಲಸಗಳು ದೊಡ್ಡ ಗುಡ್ಡವನ್ನು ಕಡಿದಂತೆ ಶ್ರಮದಾಯಕವೆನಿಸುತ್ತವೆ. ಆತಂಕ ಹೆಚ್ಚಾಗಿ ಖಿನ್ನತೆಗೆ ದಾರಿ ಮಾಡಿಕೊಡುತ್ತವೆ. ಖಿನ್ನತೆಯಿಂದ ಉತ್ಸಾಹ ಉಲ್ಲಾಸ ಎಲ್ಲವೂ ಮಾಯವಾಗುತ್ತದೆ.


ನಿಜವಾಗಲೂ ನಾವು ಇಷ್ಟೆಲ್ಲ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇದೆಯಾ? ದೈಹಿಕವಾಗಿ ಮತ್ತು ಮಾನಸಿಕವಾಗಿ ನಮಗೆ ನಾವೇ ತೊಂದರೆ ಕೊಟ್ಟುಕೊಳ್ಳೋದು ಎಷ್ಟೊಂದು ಸರಿ? ಸತ್ಯವೇನೆಂದರೆ ಅತಿಯಾಗಿ ಯೋಚಿಸುವದು ಒಂದು ಕೆಟ್ಟ ಚಟ ಅಂತ ನಾವು ಅಂದುಕೊಳ್ಳೊದೇ ಇಲ್ಲ. ಭಯದ ರೂಪದಲ್ಲಿರುವ ಈ ಅತಿಯಾದ ಯೋಚಿಸುವಿಕೆ ನಮ್ಮ ಸಂತೋಷವನ್ನು ಕೊಲ್ಲುತ್ತದೆಂದು ಬಲ್ಲವರು ಹೇಳಿದ್ದನ್ನು ಕೇಳಿದಾಗಷ್ಟು ಗೋಣು ಅಲ್ಲಾಡಿಸಿ ನಂತರ ಉದಾಸೀನತೆ ತೋರುವ ಚಟವನ್ನು ರೂಡಿಯಾಗಿಸಿಕೊಂಡು, ನಾವು ತೋಡಿದ ತಗ್ಗಿನಲ್ಲಿ ನಾವೇ ಬಿದ್ದು ನರಳುತ್ತಿದ್ದೇವೆ. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತ ಅನುಭವ.
ಜಾಣರು ಅಕಸ್ಮಾತ್ತಾಗಿ ತಗ್ಗಿನಲ್ಲಿ ಬಿದ್ದರೆ ಬಲಿಯಲ್ಲಿ ಸಿಕ್ಕ ಬಿದ್ದ ಇಲಿಯಂತೆ ಒದ್ದಾಡಿ ಸಾಯದೆ, ತಾವು ಓದಿದ, ಅನುಭವಿಸಿ ಕಲಿತ ತಂತ್ರಗಳನ್ನುಪಯೋಗಿಸಿ ಹೊರ ಬರುತ್ತಾರೆ. ಗಿಳಿಮರಿಯೊಂದು ಬೇಟೆಗಾರನ ಕೈಯಲ್ಲಿ ಸಿಕ್ಕು ನೋವನ್ನು ಅನುಭವಿಸುತ್ತಿತ್ತು.. ಒಂದು ದಿನ ಬೇಟೆಗಾರ ಗಿಳಿಯ ಬಳಗವನ್ನು ಕಂಡು ಬಂದು, ನಿನ್ನನ್ನು ಕಳೆದುಕೊಂಡ ನಿನ್ನ ಬಳಗ ತೀರಾ ದುಃಖದಲ್ಲಿದೆ. ನೀನು ನನ್ನ ಪಂಜರದಲ್ಲಿರುವ ಸುದ್ದಿಯನ್ನು ಕೇಳುತ್ತಲೇ ನಿನ್ನ ತಂದೆ ತಾಯಿ ಸತ್ತು ಬಿದ್ದರು.. ಎಂದನು. ಇದನ್ನು ಕೇಳಿದ ಗಿಳಿ ಮರಿ ವಿಲ ವಿಲ ಒದ್ದಾಡಿ ಸತ್ತಿತು. ಅಯ್ಯೋ! ಈ ಗಿಳಿ ಮರಿಯೂ ಸತ್ತು ಹೋಯಿತೆಂದು ಬೇಟೆಗಾರ ಗಿಳಿಮರಿಯನ್ನು ಪಂಜರದಿಂದ ಹೊರತೆಗೆದ. ತಕ್ಷಣವೆ ಗಿಳಿಮರಿಯು ಪರ‍್ರನೆ ಹಾರತೊಡಗಿತು. ಅಯ್ಯೋ! ನೀನು ಸತ್ತಿದ್ದಿಯಾ ಎಂದು ಹೊರತೆಗೆದೆ ಅಂದ. ಅದಕ್ಕೆ ಗಿಳಿಮರಿ “ನನ್ನ ತಂದೆ ತಾಯಿಯೂ ಸತ್ತಿಲ್ಲ ಅವರು ಕೊಟ್ಟ ಐಡಿಯಾದಿಂದನೇ ನಾನು ಬಚಾವಾದೆ ಎನ್ನುತ್ತ ಹಾರಿಹೋಯಿತು.
ಸರಿಯಾದ ದಿಕ್ಕಿನಲ್ಲಿ ಯೋಚಿಸಿ ಪರಿಹಾರೋಪಾಯ ಕಂಡುಕೊಳ್ಳುವದು ಮುಖ್ಯ. ಅತಿಯಾಗಿ ಯೋಚಿಸಿ ಲಾಭವಿಲ್ಲ ಎನ್ನುವ ಸಂಗತಿ ಈ ದೃಷ್ಟಾಂತದಿಂದ ತಿಳಿದು ಬರುತ್ತದೆ.


ಈಜಲು ಬಾರದವನು ನೀರಲ್ಲಿ ಬಿದ್ದರೆ ಕೈ ಕಾಲು ಬಡಿಯುತ್ತಾನೆ. ನನ್ನನ್ನು ಕಾಪಾಡಿ ಎಂದು ಜೋರಾಗಿ ಚೀರುತ್ತಾನೆ. ಸನಿಹದಲ್ಲಿದ್ದವರು ಬಿದ್ದವನನ್ನು ರಕ್ಷಿಸಲು ದಾವಿಸುತ್ತಾರೆ ಹೊರತು ಯೋಚಿಸುತ್ತಾ ಕುಳಿತುಕೊಳ್ಳುವದಿಲ್ಲ. ಮನೆಗೆ ಬೆಂಕಿ ಬಿದ್ದಾಗಲೂ ಅದು ಇದು ಎಂದು ಯೋಚಿಸದೆ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಅವರು ಬರುವವರಿಗೂ ಕಾಯದೆ, ಬಕೆಟ್ಟಿನಿಂದ ಬೆಂಕಿಗೆ ನೀರು ಗೊಜ್ಜುತ್ತಲೇ ಇರುತ್ತೇವೆ. ನಾರ್ಮನ್ ವಿನ್ಸಂಟ್ ಪೀಲೆ ಹೇಳಿದಂತೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಂಡರೆ ಇಡೀ ಜಗತ್ತೆ ಬದಲಾಗುವದು ಖರೆ. ಎಂಬ ಮಾತು ಸತ್ಯವೆನಿಸತೊಡುಗುತ್ತದೆ.
ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಣಿಸುತ್ತಿರುವಾಗ ನಮ್ಮ ಕಣ್ಣ ಮುಂದೆ ದಾಟಿ ಹೋಗುವಂತೆ ಕಾಣುವ ಗಿಡ ಮರ ಹಳ್ಳ ಹೊಳೆ ತೊರೆ ನದಿ ಗುಡ್ಡಗಳನ್ನು ಯಾವುದೇ ಭಾವನೆಗಳಲ್ಲಿದೇ ನೊಡಿ ಆಸ್ವಾದಿಸುವ ಹಾಗೆ. ಸಮುದ್ರಗಳ ಅಲೆಗಳಂತೆ ನಿರಂತರವಾಗಿ ಹುಟ್ಟುವ ಆಲೋಚನೆಗಳಿಗೆ ಇಂಬುಕೊಟ್ಟು ಅದರ ಕುರಿತೇ ಅತಿಯಾಗಿ ಯೋಚಿಸುವದಕ್ಕಿಂತ ಆಲೋಚನೆಗೆ ತಕ್ಕಂತೆ ಪ್ರತಿಕ್ರಿಯಿಸುವದು ಒಳಿತು. ಅತಿಯಾದ ಯೋಚನೆಗೆ ಪೂರ್ಣ ವಿರಾಮ ಹಾಕಿ ಸಂಪೂರ್ಣವಾಗಿ ಆರಾಮವಾಗಿರಬೇಕೆಂದರೆ ಆತ್ಮವಿಶ್ವಾಸ, ಜೀವನ ಪ್ರೀತಿ ಹೆಚ್ಚಿಸುವ ಧ್ಯಾನ ಮತ್ತು ದೈವಿಕ ಭಕ್ತಿಯೂ ಅತ್ಯಗತ್ಯ. ಎನ್ನುವದರಲ್ಲಿ ಎರಡು ಮಾತಿಲ್ಲ. ಓಗ್ ಮಂಡಿನೊ ಹೇಳಿದಂತೆ ಸದಾ ಒಳಿತನ್ನು ಯೋಚಿಸಿ ಒಳಿತನ್ನು ಮಾಡಿ. ಒಳಿತಿನ ಫಲ ತಡವಾಗಿ ದಕ್ಕಬಹುದು ಆದರೆ ದಕ್ಕುವದು ನಿಶ್ಚಿತ..

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳ ಸಾಹಿತ್ಯ ನಿರಂತರ ಹರಿವ ನದಿ ಇದ್ದಂತೆ

ಚಡಚಣ ತಾಲೂಕು ಕಾ.ನಿ.ಪನೂತನ ಪದಾಧಿಕಾರಿಗಳಿಗೆ ಸನ್ಮಾನ

ಕದಂಬ ಸೈನ್ಯ ಜಿಲ್ಲಾಧ್ಯಕ್ಷರಾಗಿ ಹಿರೇಮಠ ನೇಮಕ

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಾಲಿ ಚನ್ನಪ್ಪ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳ ಸಾಹಿತ್ಯ ನಿರಂತರ ಹರಿವ ನದಿ ಇದ್ದಂತೆ
    In (ರಾಜ್ಯ ) ಜಿಲ್ಲೆ
  • ಚಡಚಣ ತಾಲೂಕು ಕಾ.ನಿ.ಪನೂತನ ಪದಾಧಿಕಾರಿಗಳಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಕದಂಬ ಸೈನ್ಯ ಜಿಲ್ಲಾಧ್ಯಕ್ಷರಾಗಿ ಹಿರೇಮಠ ನೇಮಕ
    In (ರಾಜ್ಯ ) ಜಿಲ್ಲೆ
  • ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಾಲಿ ಚನ್ನಪ್ಪ
    In ವಿಶೇಷ ಲೇಖನ
  • ಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ
    In ವಿಶೇಷ ಲೇಖನ
  • ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ
    In (ರಾಜ್ಯ ) ಜಿಲ್ಲೆ
  • ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ
    In (ರಾಜ್ಯ ) ಜಿಲ್ಲೆ
  • ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ
    In (ರಾಜ್ಯ ) ಜಿಲ್ಲೆ
  • ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ
    In (ರಾಜ್ಯ ) ಜಿಲ್ಲೆ
  • ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.