ಮುದ್ದೇಬಿಹಾಳ: ನಿರಂತರ ಯೋಗದಿಂದ ರೋಗ ಸಮಾಪ್ತಿಯಾಗಲಿದೆ ಎಂದು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಬಿ.ವಾಯ್.ಕವಡಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿರುವ ವಿಶ್ವಯೋಗ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡಿದರು.
ಭಾರತೀಯ ಜ್ಞಾನ ಪರಂಪರೆಯಲ್ಲಿ ಯೋಗಕ್ಕೆ ಹೆಚ್ಚು ಮಹತ್ವ ನೀಡಿರುವುದು ಗಮನಿಸಬೇಕಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಅದರ ನಿರ್ವಹಣೆ ನಿರಂತರವಾಗಿ ನಡೆಯಬೇಕಾಗಿದೆ. ಪತಂಜಲಿ ಮಹರ್ಷಿಗಳು ಮನುಷ್ಯನ ಉದ್ಧಾರಕ್ಕಾಗಿಯೆ ಯೋಗವನ್ನು ನೀಡಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರಭು ಕಡಿ, ಸಂಸ್ಥೆಯ ಅಧ್ಯಕ್ಷ ಬಿ.ಪಿ,ಕುಲಕರ್ಣಿ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ ಮಾತನಾಡಿದರು.
ಪ್ರೌಢ ಶಾಲೆ ಮುಖ್ಯಗುರು ರಾಮಚಂದ್ರ ಹೆಗಡೆ ಅಗ್ನಿಹೋತ್ರ ನೆರವೇರಿಸಿ ಬಾರತೀಯ ಜ್ಞಾನ ಪರಂಪರೆಯ ಹಿನ್ನಲೆಯಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿ ಸೂರ್ಯ ನಮಸ್ಕಾರದೊಂದಿಗೆ ವಿವಿಧ ಆಸನಗಳನ್ನು ಮಾಡಿಸಿದರು. ಸಂಸ್ಥೆಯ ನಿರ್ದೇಶಕರಾದ ಸುಭಾಸ ಬಿದಿರಕುಂದಿ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಹೆಗಡೆ, ಉಪನ್ಯಾಸಕರಾದ ವಿ.ವಿ.ಪಾಟೀಲ್, ಎಸ್.ಬಿ.ಹೂಗಾರ, ಶಿಕ್ಷಕರಾದ ಮಂಜುನಾಥ ಪಡದಾಳಿ, ಶಾಹಿನ ನಾಲತವಾಡ, ಗುರುಬಾಯಿ ತಂಗಡಗಿ ಸೇರಿದಂತೆ ಇತರರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

