ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ರವರ ನೇತೃತ್ವದಲ್ಲಿ ಮಕ್ಕಳಿಗೆ ಯೋಗ ಅಭ್ಯಾಸವನ್ನು ಮಾಡಿಸಲಾಯಿತು. ತಡಾಸನ, ಉತ್ಕಟಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ವೀರಭದ್ರಾಸನ, ವಜ್ರಾಸನ, ಪದ್ಮಾಸನ, ಭುಜಂಗಾಸನ, ಉಷ್ಟ್ರಾಸನ, ಧನುರಾಸನ, ಹಾಲಾಸನ, ಬದ್ಧಕೋನಾಸನ, ಸೂರ್ಯ ನಮಸ್ಕಾರ ಆಸನಗಳನ್ನು ಮಾಡಿಸಿದರು.
ಈ ವೇಳೆ ಶಾಲೆಯ ಮುಖ್ಯಗುರು ಎಸ್.ವಿ .ಹಿರೇಮಠ, ಕೆ.ಎಸ್.ಚೆಟ್ಟಿ, ರೇಣುಕವ್ವ ಎಸ್.ಬಿ. ತಬ್ಬಸುಮ್ ಕಾಜಿ, ತಬಸುಮ್ ನಾಗರಬಾವಡಿ, ಸಂತೋಷ್ ಬಿದರಿ, ಮಹಾನಂದ ಹತ್ತರಿಕಿಹಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

