ಇಂಡಿ: ನಿರಂತರ ಯೋಗ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುವ ಜತೆಗೆ, ದೇಹದಲ್ಲಿ ಉಲ್ಭಣಿಸುವ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು ಎಂದು ವಿಶ್ವ ಭಾರತಿ ವಿದ್ಯಾ ಕೇಂದ್ರದ ಶಿಕ್ಷಣ ಸಮೂಹದ ಅಧ್ಯಕ್ಷ ವಿ.ಜಿ.ಕಲ್ಮನಿ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇಬೇವನೂರು ಗ್ರಾಮದ ವಿಶ್ವ ಭಾರತಿ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯೋಗಾಸಾನ ಮಾಡುವುದರಿಂದ ಹಲವು ಲಾಭಗಳಿವೆ. ಮನಸ್ಸು ನಮ್ಮ ಹತೋಟಿಗೆ ಬರುತ್ತದೆ. ನಾವು ಇಚ್ಛಿಸುವ ಉತ್ತಮ ಕರ‍್ಯಗಳು ಫಲಿಸುತ್ತದೆ. ಹಿಂದೆ ಋಷಿ ಮುನಿಗಳು ಯೋಗ ಹಾಗೂ ತಪಸ್ಸಿನ ಶಕ್ತಿಯನ್ನು ಪಡೆದು ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತಿದ್ದರು. ದೇಹವನ್ನು ದಂಡಿಸುವ ಮೂಲಕ ಆರೋಗ್ಯವನ್ನು ಪಡೆದುಕೊಳ್ಳುತ್ತಿದ್ದರು. ಯೋಗಭ್ಯಾಸ ನಮ್ಮ ದೇಶದ ಸಂಸ್ಕೃತಿಯಾಗಿದೆ. ಇತ್ತಿಚಿನ ದಿನಗಳಲ್ಲಿ ಪಾಶ್ಚಿಮಾತ್ಯರು ಯೋಗ ಹಾಗೂ ಪ್ರಕೃತಿ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಿ ಅರೋಗ್ಯವಂತ ಜೀವನ ನಡೆಸಲು ಮುಂದಾಗಿದ್ದಾರೆ ಎಂದರು.
ಮುಂಜಾನೆ ಯೋಗಾಭ್ಯಾಸ ಮಾಡುವುದರಿಂದ ದೈನಂದಿನ ಚಟುವಟಿಕೆಗಳಿಗೆ ಉಲ್ಲಾಸ ಸಿಗುತ್ತದೆ. ಯೋಗದ ವಿವಿಧ ಆಸನಗಳನ್ನು ಹಾಕುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದಿಂದ ದೇಹದ ಸೌಂದರ್ಯ ಕಾಪಾಡಿಕೊಳ್ಳುವ ಜತೆಗೆ, ಬೊಜ್ಜನ್ನು ಕರಗಿಸಿ ಆರೋಗ್ಯವಂತರಾಗಬಹುದು ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ದೈಹಿಕ ಶಿಕ್ಷಕ ಹಸನ್ ಚಿಕ್ಕಹಳ್ಳಿ, ಟಿ.ಎಚ್. ಚವ್ಹಾಣ, ಸಚೀನ್ ಅಡಿಗುಂಡಿ, ರಾಮ್ ಚವ್ಹಾಣ, ಜಾನ್, ಥಾಮ¸,ï ಎಸ್.ಬಿ. ಕಲ್ಮನಿ, ಪಿ.ಎಮ್. ಕಲ್ಮನಿ, ಎಸ್.ಆರ್. ಪಾಟೀಲ್, ವಸಂತ್ ನಾಯ್ಕ ಮನೋಹರ ನಾಯ್ಕ್, ರಮೇಶ್ ಬಡೆಕರ, ಜೆ.ಎ. ಬಿರಾದಾರ, ಎಸ್.ಎಮ್. ಭಾಸಗಿ, ಬಿ.ಕೆ. ಉಕ್ಕಲಿ, ಅನಿತಾ ಗೌಡ, ರಾಜೇಶ್ವರಿ ಗೌಡ, ವಿಜಯಲಕ್ಷ್ಮಿ ಸಾಸಟ್ಟಿ, ಸಂಗೀತಾ ಮಾನೆ, ಎಸ್.ಬಿ. ವಳಸಂಗ, ರಾಜಶ್ರೀ ಸಂಗಮ್, ಗಿರಿಜಾ ಬಾಗೆವಾಡಿ, ಸಾರಾ ಎನ್, ಜಿನ್ನತ್ ಶೇಖ, ಅಶ್ವಿನಿ ಚವ್ಹಾಣ್, ಮಧು ಎಂ, ಸುಜಾತಾ ಬಿರಾದಾರ, ಆಯಿಶಾ ಶೇಖ್, ಮಂಜುಳಾ ಹಾವೇರಿ, ಶಿವಲಿಲಾ ಚಲವಾದಿ, ಮಲ್ಲಮ್ಮ ರೊಳ್ಳಿ, ಜಿಸಾ ಕೆ, ಸೇರಿದಂತೆ ಗುರುಗಳು, ಗುರು ಮಾತೆಯರು, ವಿದ್ಯಾರ್ಥಿಗಳೊಂದಿಗೆ ಯೋಗಭ್ಯಾಸವನ್ನು ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

