ಕಾದಿಹೆನು ನಲ್ಲ.. ನಿನಗಾಗಿ ಹಾದಿಗೆ ಹೂವ ಚೆಲ್ಲಿ…
ಬೇಧಿಸಿ ಬಾ ಅಡೆತಡೆದಳ ನನ್ನೆಡೆಗೆ ನಗುವ ಚೆಲ್ಲಿ…
ಕನಸು ಮನಸಲೂ ನಿನ ಹೊರತು ಬೇರಾರೂ ಇಲ್ಲ…
ಮನಸು ಹಾರುತಿದೆ ಹಕ್ಕಿಯೊಲು ನಿನ್ನದೇ ಗುಂಗಲ್ಲಿ..
ತನು ನಿನ್ನದು ಮನ ನಿನ್ನದು,ಈ ಜೀವವೂ ನಿನ್ನದು…
ಕ್ಷಣಕ್ಣಣವೂ ಕಾತರಿಸಿದೆ ನಿನ್ನ ಕಾಣಲು ಕಣ್ಣಿದು…
ಅಣಿಯಾಗಿಹೆ ನಾ ಸ್ವಾಗತಿಸಲು ಸಿಂಗಾರಗೊಂಡು..
ಹಣೆಬೆವರಿದೆ ಮೈನಡುಗಿದೆ ನಿನ್ನದೇ ಗುಂಗಲ್ಲಿ ನೋಡು
ಬರಬಾರದೇ ಇನಿಯ ಬೇಗನೆ ರಾಧೆಯ ಶ್ಯಾಮನಂತೆ..
ಇರಬಾರದೇ ಎನ್ನ ಸನಿಹ ಜಾನಕಿಯ ರಾಮನಂತೆ…
ತೋರಬಾರದೇ ಒಲವ ನನ್ನೆಡೆಗೆ ಗಿರಿಜಾರಮಣನಂತೆ.
ಅರಿಯದೇ ಕಾದಿಹೆ ನಿನ್ನದೇ ಗುಂಗಿನಲ್ಲಿ ವಿರಹಿಯಂತೆ.