Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ

ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ

ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಿಂದೂಗಳ ವೈಭವದ ನಗರ ವಿಜಯಪುರ
(ರಾಜ್ಯ ) ಜಿಲ್ಲೆ

ಹಿಂದೂಗಳ ವೈಭವದ ನಗರ ವಿಜಯಪುರ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಹಿಂದೂಗಳ ಅತ್ಯಂತ ವೈಭವದ ನಗರ ವಿಜಯಪುರ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.


ಹನುಮಗಿರಿ ರಸ್ತೆಯ ಖಣಿ ಹತ್ತಿರದ ಮೋಹನ ನಗರದಲ್ಲಿ ಬುಧವಾರ ವೆಂಕಟೇಶ್ವರ ದೇವಸ್ಥಾನದ ಗೀತಾ ಭವನ ಹಾಗೂ ವಾನಪ್ರಸ್ಥಧಾಮ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದಲ್ಲಿ ಅನೇಕ ದೇವಸ್ಥಾನಗಳನ್ನು ದಾಳಿ ಮಾಡಿದ ಕಾಲದಲ್ಲಿ ನಾಶಪಡಿಸಲಾಗಿದೆ. ನಗರದಲ್ಲಿ ಎಲ್ಲಿಯೇ ಉತ್ಖನನ ಮಾಡಿದರೂ ಹಿಂದು ಕುರುಹು ಸಿಗುವ ನಗರ ವಿಜಯಪುರ ಎಂದರು.
ಆದಿಲ್ ಶಾಹಿ ಹೋಟೆಲ್ ಬಳಿಯ ಯಾದವರ ಕಾಲದಲ್ಲಿ ಸ್ವಯಂ ಶಂಭುಲಿಂಗ ಪ್ರತಿಷ್ಠಾಪನೆ ಆಗಿದೆ ಎನ್ನುವುದು ಈಚೆಗೆ ಭೇಟಿ ನೀಡಿದಾಗ ತಿಳಿಯಿತು. ಅದನ್ನು ಕೆಲವರು ಮಸೀದಿಯಾಗಿ ಪರಿವರ್ತಿಸಲು ಯತ್ನಿಸಿದ್ದರೂ ಸಫಲರಾಗಿಲ್ಲ. ಅಲ್ಲಿ ಅದರ ಉತ್ಖನನ ಮಾಡಲು ಎ.ಎಸ್.ಐ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ್ದು, ಶೀಘ್ರ ಉತ್ಖನನ ಮಾಡಿ, ಪೂಜೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದರ ಬಳಿಕ ಮಸೀದಿ ಅಂತ ಬ್ರಿಟಿಷರು ಡಿಕ್ಲೆರ್ ಮಾಡಿರುವ ನರಸಿಂಹ ದೇವಾಲಯ ನಮ್ಮ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಣ್ಣ ಸಂಸ್ಥೆಗಳಿಂದಲೇ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ವ್ಯಕ್ತಿಗತ ಯಾರು, ಏನನ್ನು ಮಾಡಲಾಗದು. ರಾಜಕಾರಣಿಗಳು ಅಧಿಕಾರ ಇರುವತನಕ ಅಭಿಮಾನಿಗಳ ಕಟ್ಟಿಕೊಂಡು ಏನರೇ ಮಾಡುತ್ತಾರೆ. ಮಾಜಿ ಆದ ಮೇಲೆ ಅವರು ಇರುವುದಿಲ್ಲ. ಸಂಘ ಇರುವುದಿಲ್ಲ.
ಆಚಾರ್ಯರು ವಾನಪ್ರಸ್ಥಧಾಮ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಅದರ ಅಭಿವೃದ್ಧಿಗಾಗಿ ರೂ.೧೦ ಲಕ್ಷ ನೀಡುವುದಾಗಿ ಹೇಳಿದರು.
ನಾವು ಸಿದ್ದೇಶ್ವರ ಸಂಸ್ಥೆ ಮೂಲಕ ಗೋಶಾಲೆ, ಶಾಲೆ, ಆಸ್ಪತ್ರೆ ಮತ್ತಿತರೆ ಸೇವಾ ಚಟುವಟಿಕೆ ಮಾಡುತ್ತಿದ್ದೇವೆ. ಸಿದ್ಧಸಿರಿ ಬ್ಯಾಂಕ್ ಎಥೆನಾಲ್ ಕಾರ್ಖಾನೆ, ಸಿದ್ದಸಿರಿ ಬ್ಯಾಂಕ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗಿದೆ. ನಮ್ಮ ಮೇಲಿನ ವಿಶ್ವಾಸದಿಂದ ಸಿದ್ದಸಿರಿ ಬ್ಯಾಂಕ್ ಗೆ ೨೫೦೦ ಕೋಟಿ ಠೇವಣಿ ಇಟ್ಟಿದ್ದಾರೆ. ನಮ್ಮದು ಉತ್ತರ ಕರ್ನಾಟಕದಲ್ಲೇ ನಂಬರ್ ಒನ್ ಸ್ಥಾನದಲ್ಲಿ ಇರುವುದು ಹೆಮ್ಮೆಯ ವಿಷಯ ಎಂದರು.
ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಸರ್ವಜ್ಞ ವಿಹಾರ ವಿದ್ಯಾ ಪೀಠದ ಕುಲಪತಿ ಪಂ.ಮೋಕಾಶಿ ಮದ್ವಾಚಾರ್ಯ, ಪಸು ಸಂಗೋಪನಾ ಇಲಾಖೆ ನಿವೃತ್ತ ಉಪನಿರ್ದೇಶಕ ಪ್ರಾಣೇಶ ಜಾಹಾಗಿರದಾರ, ಸಂಜೀವ ಆಚಾರ್ಯ ಮದಭಾವಿ ಮತ್ತಿತರರಿದ್ದರು.

basanagouda patil yatnal BIJAPUR NEWS public udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ

ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ

ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ

ಎಂಎಲ್ಸಿ ಸುನೀಲಗೌಡ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ
    In (ರಾಜ್ಯ ) ಜಿಲ್ಲೆ
  • ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ
    In (ರಾಜ್ಯ ) ಜಿಲ್ಲೆ
  • ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ
    In (ರಾಜ್ಯ ) ಜಿಲ್ಲೆ
  • ಎಂಎಲ್ಸಿ ಸುನೀಲಗೌಡ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧಾರ
    In (ರಾಜ್ಯ ) ಜಿಲ್ಲೆ
  • ದೇಶದ ಸಹಕಾರಿ ರಂಗದಲ್ಲೇ ಕರ್ನಾಟಕ ಬೆಸ್ಟ್ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ರೈತರು ಒಂದುಗೂಡಿ ಕಾರ್ಖಾನೆಯವರಿಗೆ ಪಾಠ ಕಲಿಸಬೇಕಿದೆ :ಹಗೇದಾಳ
    In (ರಾಜ್ಯ ) ಜಿಲ್ಲೆ
  • ಉಪ್ಪಾರ ಕುಲಶಾಸ್ತ್ರ ಅಧ್ಯಯನಕ್ಕೆ ಸಂಪುಟದಲ್ಲಿ ಚರ್ಚೆ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ವಿಜಯಪುರದಿಂದ ಪಣಜಿಗೆ ಬಸ್ ಸೇವೆ ಆರಂಭ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಜಾಗೃತಿ ಅಭಿಯಾನ
    In (ರಾಜ್ಯ ) ಜಿಲ್ಲೆ
  • ನ್ಯಾಯಾಲಯದ ಆದೇಶ ಉಲ್ಲಂಘನೆ: ಯುಕೆಪಿ ಜೀಪ್, ಕಂಪ್ಯೂಟರ್ ಜಪ್ತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.