Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದುರ್ವಾಸನೆಯುಕ್ತ ಶಾಲಾ ಪರಿಸರ | ಡೆಂಗ್ಯೂ-ಮಲೇರಿಯಾ ಭೀತಿ | ಮೂಲಸೌಕರ್ಯಗಳ ಕೊರತೆ | ಸ್ಪಂದಿಸದ ಅಧಿಕಾರಿಗಳು – ಇಂದುಶೇಖರ ಮಣೂರವಿಜಯಪುರ: ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಸೌಲಭ್ಯ ಉಂಟು, ಆದರೆ ಕುಡಿಯಲು – ತೊಳೆಯಲು ನೀರಿಲ್ಲ. ವಿಶಾಲ ಮೈದಾನವುಂಟು, ತಡೆಗೋಡೆ (ಕಂಪೌಂಡ್) ಇಲ್ಲ. ಶೌಚಾಲಯ ಉಂಟು, ಬಳಕೆಯಲ್ಲಿಲ್ಲ. ಇನ್ನು ಶಾಲಾ ಆವರಣದ ಪರಿಸರದಲ್ಲಿ ಸ್ವಚ್ಛತೆಯಂತೂ ಇಲ್ಲ.. ಇಲ್ಲ.. ಇಲ್ಲ. ಹೀಗೆ ’ಇಲ್ಲ’ಗಳ ಸಾಮ್ರಾಜ್ಯದಲ್ಲಿ ನರಳುತ್ತಿರುವ ಶಾಲೆಯೊಂದು ಜಿಲ್ಲೆಯ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿರುವುದು ಮಾತ್ರ ’ಹೌದು’.ಓತಿಹಾಳ ಗ್ರಾಮದ ಸರಕಾರಿ ಪ್ರೌಡಶಾಲೆ ಸುಮಾರು ೮ ಎಕರೆ ಪ್ರದೇಶವನ್ನು ಹೊಂದಿದೆ. ಬಹುಶಃ ಜಿಲ್ಲೆಯಲ್ಲಿ ಇಷ್ಟೊಂದು ವಿಶಾಲವಾದ ವಿಸ್ತೀರ್ಣ ಹೊಂದಿದ ಶಾಲೆ ಬೇರೊಂದು ಇರಲಿಕ್ಕಿಲ್ಲ. ಇದೊಂದೇ ಈ ಶಾಲೆಗಿರುವ ಹೆಗ್ಗಳಿಕೆ. ಉಳಿದಂತೆ ಈ ಶಾಲಾ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳೂ ಸಹ ವಿಶಾಲವಾಗಿವೆ.ಓತಿಹಾಳ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ೮, ೯ ಮತ್ತು ೧೦ ನೇ ತರಗತಿಗಳ ಕಲಿಕೆಗೆ ಅವಕಾಶವಿದೆ.…
-ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಪ್ರತಿಷ್ಠಿತ ಬಗಾನ್ ಫುಟ್‌ಬಾಲ್ ತಂಡದಲ್ಲಿ ಹೃದಯ್ ಎನ್ನುವ ಯುವಕನೊಬ್ಬ ಹೆಚ್ಚುವರಿ ಆಟಗಾರನಾಗಿ ಇದ್ದ. ಹೃದಯ್‌ನನ್ನು ತಂಡದ ಆಡಳಿತ ಮಂಡಳಿಯು ಅಭ್ಯಾಸ ಪಂದ್ಯಗಳಲ್ಲಿ ಆಡಿಸುತ್ತಿತ್ತೇ ವಿನಃ ಎಂದಿಗೂ ಪ್ರಮುಖ ಪಂದ್ಯಗಳ ಹನ್ನೊಂದು ಮಂದಿಯ ತಂಡದಲ್ಲಿ ಆಟವಾಡಿಸುತ್ತಾ ಇರಲಿಲ್ಲ, ಹೃದಯ್ ಎಂದಿಗೂ ತಾನು ಕೇವಲ ಮೀಸಲು ಆಟಗಾರ ಮತ್ತು ಅಭ್ಯಾಸ ಪಂದ್ಯಗಳ ಆಟಗಾರ ಎನ್ನುವ ಬೇಸರವಿಲ್ಲದೆ ಪ್ರತಿನಿತ್ಯವೂ ತಪ್ಪಿಸದೇ ಅಭ್ಯಾಸಕ್ಕೆ ಆಗಮಿಸುತ್ತಿದ್ದ. ಹೃದಯ್‌ನ ಆಟವನ್ನು ಅಭ್ಯಾಸದ ಸಂದರ್ಭದಲ್ಲಿ ಆತನ ತಂದೆಯು ಮೈದಾನದ ಮೂಲೆಯಲ್ಲಿ ಕುಳಿತು ವೀಕ್ಷಿಸುತ್ತಾ ಇದ್ದರು. ಅದೊಂದು ದಿನ ಪ್ರಮುಖ ಪಂದ್ಯಾವಳಿ ಪ್ರಾರಂಭವಾಗಿ ಬಗಾನ್ ತಂಡವು ಎಲ್ಲಾ ಹಂತಗಳನ್ನೂ ದಾಟಿ ಉಪಾಂತ್ಯವನ್ನು ತಲುಪಿದಾಗಲೂ ಹೃದಯ್ ಆಡುವ ಬಳಗದಲ್ಲಿ ಎಲ್ಲೂ ಕಾಣಲೇ ಇಲ್ಲ. ಆದರೆ ತಂಡವು ಫೈನಲ್ ತಲುಪಿ ಪಂದ್ಯ ಇನ್ನೇನು ಪ್ರಾರಂಭ ಆಗಬೇಕು ಎನ್ನುವಾಗ ಹೃದಯ್ ಹಠಾತ್ತನೆ ತಂಡದ ತರಬೇತುದಾರನ ಬಳಿ ತೆರಳಿ, ಇದುವರೆಗೂ ‘ನೀವು…
ದೇವರಹಿಪ್ಪರಗಿ: ಇದೇ ದಿ:೧೩ ರಂದು ಶನಿವಾರ ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಸ್ಮರಣಾರ್ಥ ಬೆಂಗಳೂರಿನಲ್ಲಿ ಭವನ ಮತ್ತು ಸಂಶೋಧನೆ, ತರಬೇತಿ ಕೇಂದ್ರ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ ಬಿಸನಾಳ ತಿಳಿಸಿದ್ದಾರೆ.ಪಟ್ಟಣದಲ್ಲಿ ಗುರುವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ಶೋಷಿತರ ಬಾಳಿನಲ್ಲಿ ಬೆಳಕು ಹರಿಸಿದ ಮುತ್ಸದ್ದಿ ಬಾಬು ಜಗಜೀವನರಾಮ್ ಸ್ಮರಣಾರ್ಥ ನಿರ್ಮಿಸಲಾಗಿರುವ ಭವನದ ಉದ್ಘಾಟನೆ ಬೆಂಗಳೂರಿನ ಮಾಗಡಿ ರಸ್ತೆಯ ಸುಮನಹಳ್ಳಿ ಸರ್ಕಲ್‌ನಲ್ಲಿಯ ನಿರಾಶ್ರೀತರ ಪರಿಹಾರ ಕೇಂದ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಮಧ್ಯಾನ್ಹ ೩ ಗಂಟೆಗೆ ನೆರವೇರಲಿದೆ. ಈ ಸಂದರ್ಭದಲ್ಲಿ ಲೋಕಸಭೆಯ ಮಾಜಿ ಸ್ಪೀಕರ್ ಮೀರಾಕುಮಾರ, ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಭಾಗವಹಿಸಲು ಅನುಕೂಲವಾಗುವಂತೆ ಸಮಾಜಕಲ್ಯಾಣ ಇಲಾಖೆಯಿಂದ ೨ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ೧೦ ಜನರಿಗೆ ಭಾಗವಹಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಕಾಂಗ್ರೆಸ್ ಮುಖಂಡ ಸುಭಾಸ್ ಯಡಹಳ್ಳಿ, ರಮೇಶ ಗುಬ್ಬೇವಾಡ, ಸಂಜು ಕಲ್ಯಾಣಿ, ಸದಾಶಿವ ಪೂಜಾರಿ,…
ದೇವರಹಿಪ್ಪರಗಿ: ಮಣ್ಣೂರ ಗ್ರಾಮದ ತಾಂಡಾದ ಎಲ್.ಟಿ ೧ರಲ್ಲಿನ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಜಾಗದ ಅಳತೆಯನ್ನು ಹದ್ದುಬಸ್ತು ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪ್ರವಾಸಿಮಂದಿರಕ್ಕೆ ಗುರುವಾರ ಆಗಮಿಸಿದ ಮಣೂರ ತಾಂಡಾದ ಸಾರ್ವಜನಿಕರು ತಹಶೀಲ್ದಾರರನ್ನು ಕಂಡು ಮಾತನಾಡಿ, ಶಾಲೆಗೆ ಕಂಪೌಂಡ್ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಎನ್.ಆರ್.ಇ.ಜಿಯಡಿ ಸುಮಾರು ೬ ಲಕ್ಷ.ರೂಗಳ ಕ್ರೀಯಾಯೋಜನೆ ಸಿದ್ಧಪಡಿಸಲಗಿದೆ. ಶಾಲೆಯ ಜಾಗೆಯ ಆಸ್ತಿ ನಂ ೯೭೪ ಇದ್ದು, ಚಕಬಂದಿ ಪ್ರಕಾರ ೧೨೫ ಅಡಿ ಉದ್ದ, ೧೨೫ ಅಡಿ ಅಗಲ ಅಳತೆ ಹೊಂದಿದೆ. ಈಗ ಇದನ್ನು ಸಾರ್ವಜನಿಕರು ಅತೀಕ್ರಮಣ ಮಾಡದಂತೆ ತಡೆಯಲು ಸುತ್ತಲೂ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ ಈಗಾಗಲೇ ಸುತ್ತಮುತ್ತಲಿನವರು ತಮ್ಮ ಮನೆಗಳ ಜೊತೆಗೆ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಈಗ ಕಂಪೌಂಡ್ ನಿರ್ಮಿಸಲು ಅಡಚಣೆ ಉಂಟು ಮಾಡುತ್ತಿದ್ದಾರೆ.ಅಡಚಣೆ ಕುರಿತು ಗ್ರಾಮ ಪಂಚಾಯಿತಿ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷರು, ಶಾಲೆಯ ಮುಖ್ಯಶಿಕ್ಷಕರು ಈಗಾಗಲೇ ಸಾಕಷ್ಟು ತಿಳಿಹೇಳಿದ್ದರು ಅನಗತ್ಯ ತಕರಾರು ಮಾಡುತ್ತಿದ್ದಾರೆ. ಶಾಲೆಯ…
ದೇವರಹಿಪ್ಪರಗಿ: ಡೆಂಗ್ಯೂ, ಚಿಕನ್‌ಗುನ್ಯಾ ರೋಗಗಳು ಸೊಳ್ಳೆಗಳಿಂದ ಹರಡುವ ರೋಗಗಳಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ತಾಲ್ಲೂಕು ಹಾಗೂ ಸ್ಥಳೀಯ ಆಡಳಿತ ಅಗತ್ಯವಾದ ಕ್ರಮವಹಿಸಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಜರುಗಿದ ಡೆಂಗ್ಯೂ, ಚಿಕನ್‌ಗುನ್ಯಾ ಸೇರಿದಂತೆ ಮಳೆಗಾಲದಲ್ಲಿ ಹರಡುವ ರೋಗಗಳ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಎಲ್ಲ ವಾರ್ಡಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಈಗಾಗಲೇ ಫಾಗಿಂಗ್ ಆರಂಭಿಸಲಾಗಿದೆ. ಜೊತೆಗೆ ಮಳೆನೀರು ಒಂದೆಡೇ ಸಂಗ್ರಹವಾಗದಂತೆ ಕ್ರಮವಹಿಸಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೆ ಈ ರೋಗಗಳ ಕುರಿತು ಸೂಕ್ತ ಮಾಹಿತಿ ಒದಗಿಸಿ ಎಚ್ಚರಿಕೆ ವಹಿಸಲು ಮುಂದಾಗುವಂತೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಿಬ್ಬಂದಿಗೆ ಸೂಚಿಸಿದರು.ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ್ ರೇವೂರಕರ್, ಸಿಎಚ್‌ಓ ಸಚೀನ ಪಾಟೀಲ ಮಾತನಾಡಿ, ಡೆಂಗ್ಯೂ, ಚಿಕನ್‌ಗುನ್ಯಾ ಹರಡುವ ಬಗೆ, ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳು, ಬಳಕೆಯಿಲ್ಲದ ಟಾಯರ್, ತೆಂಗಿನಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು. ರೋಗಗಳಿಗೆ ದೊರೆಯುವ…
ವಿಜಯಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಹಾಗೂ ವಿವಿಧ ನರ್ಸಿಂಗ್ ಕಾಲೇಜಗಳು ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಏರ್ಪಡಿಸಿದ ಜಿಲ್ಲಾಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆಯ ಜನಜಾಗೃತಿ ರ‍್ಯಾಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉತ್ತರ ಕರ್ನಾಟಕ ಉಪನಿರ್ದೇಶಕ ಡಾ|| ಚನ್ನಮ್ಮ ಕಟ್ಟಿ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಬಸವರಾಜ ಹುಬ್ಬಳಿ ರವರು ಜಂಟಿಯಾಗಿ ಹಸಿರು ನಿಶಾನೆ ತೋರಿಸಿ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉತ್ತರ ಕರ್ನಾಟಕ ಉಪನಿರ್ದೇಶಕ ಡಾ|| ಚನ್ನಮ್ಮ ಕಟ್ಟಿ ಅವರು ಮಾತನಾಡಿ ಮಿತಿಮೀರಿದ ಜನಸಂಖ್ಯೆ ದೇಶದ ಅಭಿವೃದ್ದಿಗೆ ಮಾರಕವಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರಲ್ಲೂ ತಿಳುವಳಿಕೆ ಮೂಡಬೇಕು ಅಂದಾಗ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಬಸವರಾಜ…
ವಿಜಯಪುರ: ಪ್ರಸಕ್ತ ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಗೆ ದ್ರಾಕ್ಷಿ ಬೆಳೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (ಖWಃಅIS) ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ. ಬೆಳೆ ಸಾಲ ಪಡೆದ ರೈತರುಹಾಗೂ ಬೆಳೆ ಸಾಲ ಪಡೆಯದೆ ಇರುವ ರೈತರು ತಮ್ಮ ಆಧಾರ ಕಾರ್ಡ ಝರಾಕ್ಸ, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕುಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್‌ಸಿ ಸೆಂಟರ್‌ಗಳಲ್ಲಿ ವಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಲು ಕೋರಿದೆ.ದ್ರಾಕ್ಷಿ ಬೆಳೆಗೆ ವಿಮೆ ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ: ೧೫-೦೭-೨೦೨೪, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ರೂ. ೧೪,೦೦೦ ರೂ.ಗಳಾಗಿರುತ್ತದೆ. ರೈತರು ಕಡ್ಡಾಯವಾಗಿ ಎಫ್‌ಐಡಿ, ಹಾಗೂ ಎನ್‌ಪಿಸಿಐ ಸಿಡಿಂಗ್ ಮಾಡಿಸಿರಬೇಕು.ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹಾಗೂ ಹತ್ತಿರದ ಬ್ಯಾಂಕ್ ಶಾಖೆ, ಅಗ್ರಿಕಲ್ಚರ ಇನ್ಸುರನ್ಸ ಕಂಪನಿ ವಿಮಾ ಸಂಸ್ಥೆಯ ಪ್ರತಿನಿಧಿ ಮೊಬೈಲ್ ನಂ: ೮೮೯೯೮೮೭೮೭೩, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ವಿಜಯಪುರ – ೯೫೩೫೧೮೫೯೯೯,…
ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು ವಿಜಯಪುರ: ರೈತರಿಂದ ಕಬ್ಬನ್ನು ಪಡೆದುಕೊಂಡು ಕಬ್ಬಿನ ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಬಬಲೇಶ್ವರ ತಾಲೂಕಿನ ಕಾರಜೋಳ ಬಸವೇಶ್ವರ ಶುಗರ್ಶ್ ಸಕ್ಕರೆ ಕಾರ್ಖಾನೆಯ ಚರ-ಸ್ಥಿರಾಸ್ಥಿಗಳನ್ನು ಹರಾಜು ಹಾಕಿ ರೈತರ ಬಾಕಿ ಹಣ ಪಾವತಿ ಮಾಡಲು ಸಕ್ಕರೆ ಕಾರ್ಖಾನೆಯನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಲು ವಿಜಯಪುರ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ೧೦ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಬಬಲೇಶ್ವರ ತಾಲೂಕಿನ ಬಸವೇಶ್ವರ ಶುಗರ್ಸ್ ಕಾರಜೋಳ ಸಕ್ಕರೆ ಕಾರ್ಖಾನೆಯವರು ಕಳೆದ ಸಾಲಿನ ೨೦೨೩-೨೪ನೇ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಂದ ಕಬ್ಬನ್ನು ಪಡೆದು, ನುರಿಸಿ ಇನ್ನೂ ೪೮.೦೦ ಕೋಟಿ ರೂ. ಹಣವನ್ನು ರೈತರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದರಿಂದ ಸಕ್ಕರೆ (ನಿಯಂತ್ರಣ) ಆದೇಶ ೧೯೬೬ರ ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಪ್ರಕಾರ ಜಿಲ್ಲಾಧಿಕಾರಿಗಳ ವರದಿ ಮೇರೆಗೆ ಬಾಕಿ ವಸೂಲಾತಿ ಮಾಡಲು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಆದೇಶ…
ವಿಜಯಪುರ: ಲಸಿಕೆಯಿಂದ ಯಾವುದೇ ಮಕ್ಕಳು ವಂಚಿತವಾಗದಂತೆ ನೋಡಿಕೊಂಡು ಶಾಲೆಯಿಂದ ಹೊರಗುಳಿದ, ಅಂಗನವಾಡಿ ಕೇಂದ್ರದ ಮಕ್ಕಳು ಸೇರಿದಂತೆ ಪ್ರತಿ ಮನೆ-ಮನೆಗಳ ಮಾಹಿತಿ ಸಂಗ್ರಹಿಸಿ ಯಶಸ್ವಿಯಾಗಿ ಲಸಿಕಾಕರಣ ಹಾಗೂ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಮಹಾನಗರ ಪಾಲಿಕೆ ಮಹಾಪೌರೆ ಶ್ರೀಮತಿ ಮಹೇಜಬಿನ್ ಹೊರ್ತಿ ಅವರು ಸೂಚಿಸಿದರು.ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮುಂಜಾಗೃತಾ ಕ್ರಮವಾಗಿ ವಿವಿಧ ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಯನ್ನು ಪಾಲಿಸಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಲಸಿಕಾಕರಣ ಮತ್ತು ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಸೂಚಿಸಿದರು.ಪಾಲಿಕೆ ವ್ಯಾಪ್ತಿಯ ೩೫ ವಾರ್ಡಗಳಲ್ಲಿ ಜವಾಬ್ದಾರಿಯುತವಾಗಿ ತಮ್ಮ ವ್ಯಾಪ್ತಿಯ ಸ್ಥಿತಿಗತಿ, ಮಕ್ಕಳ ಜನಸಂಖ್ಯೆ, ಅಂಗನವಾಡಿ ಕೇಂದ್ರಗಳು, ಶಾಲೆಗಳನ್ನು ಗುರುತಿಸಿ ಯಾವುದೇ ಮಕ್ಕಳು ಲಸಿಕಾಕರಣದಿಂದ ಹೊರಗುಳಿಯದಂತೆ ಲಸಿಕೆ ನೀಡಲು ಪ್ರಚಾರ ಹಾಗೂ ಪ್ರತಿ ಮನೆಗಳ ಮಾಹಿತಿಯನ್ನು ಸಂಗ್ರಹಿಸಿ ಆರೋಗ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ…
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಚರ್ಚಿಸಿದ ಶಾಸಕ ಯತ್ನಾಳ ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬುಧವಾರ ನವ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಬಗ್ಗೆ ಸ್ವತಃ ರಾಜ್ಯ ಸರ್ಕಾರದ ವಿತ್ತ ಇಲಾಖೆ ಎಚ್ಚರಿಸಿದರೂ ಸಹ ಈ ರೀತಿಯಾದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದರಿಂದ ರಾಜ್ಯ ದಿವಾಳಿ ಆಗುವುದರ ಬಗ್ಗೆ ವಿತ್ತ ಸಚಿವರಿಗೆ ತಿಳಿಸಿ, ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಬಳಸಿ ಕೂಡಲೇ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್ಮೆಂಟ್ ಆಕ್ಟ್ ಕಾಯ್ದೆಯಡಿ ರಾಜ್ಯ ಸರ್ಕಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಯಿತು.ಇದಲ್ಲದೆ, ಅಕ್ಕಿ ವಿತರಣೆಯಲ್ಲೂ ರಾಜ್ಯ ತಪ್ಪು ಹೆಜ್ಜೆ ಇಡುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಆದರೆ, ಎಷ್ಟು ಬೋಗಸ್ ಕಾರ್ಡ್ ಗಳು ವಿತರಣೆಯಾಗಿದೆ ಎಂಬ…
