ವಿಜಯಪುರ: ಜಾನಪದ ಸಾಹಿತ್ಯ ಬದುಕಲು ಸನ್ಮಾಗ೯ ತೋರಿಸಿಕೊಟ್ಟಿದೆ.
ಮಾನವೀಯ ಮೌಲ್ಯಗಳನ್ನು ಕಾಪಾಡಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ ಎಂದು ವಿಜಯಪುರ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ರಮೇಶ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಜಾನಪದ ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಜಾನಪದ ಗೀತೆಗಳು ಬದುಕು ಪರಿವತ೯ನೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ, ಜಾನಪದ ಸಾಹಿತ್ಯ ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಡಾ.ಸಂಗಮೇಶ ಮೇತ್ರಿ ಮಾತನಾಡಿ, ಮಕ್ಕಳಲ್ಲಿ ಜಾನಪದ ಸಾಹಿತ್ಯ ಅಭಿರುಚಿ ಬೆಳೆಸುವ ಅವಶ್ಯವಿದೆ. ಜಾನಪದ ಸಾಹಿತ್ಯಕ್ಕೆ ಪೂರ್ವಜರ ಕೊಡುಗೆ ಅಪಾರವಾಗಿದೆ. ರೈತರು ಹಾಗು ಮಹಿಳೆಯರು ದಿನನಿತ್ಯ ಕಾಯಕದಲ್ಲಿ ತೊಡಗಿರುವಾಗ ಹಾಡುಗಳನ್ನು ರಚಿಸಿ ಹಾಡಿದ್ದಾರೆ. ಎಂದರು.
ಜಾನಪದ ವಿದ್ವಾಂಸ, ಬಸವನ ಬಾಗೇವಾಡಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಅನೇಕ ಗೋಷ್ಠಿಯನ್ನು ಹಾಗು ದತ್ತಿ ನಿಧಿ ಕಾರ್ಯಕ್ರಮ ಮಾಡುವದರ ಮೂಲಕ ಜಾನಪದ ಸಾಹಿತ್ಯ ಉಳಿಸುವ ಹಾಗು ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು.
ತಾಳಿಕೋಟೆಯ ಜಾನಪದ ವಿದ್ವಾಂಸೆ ಶಿವಲೀಲಾ ಮುರಾಳ ಮಾತನಾಡಿ, ಗರತಿಯ ಜೀವನ ಹಾಡುಗಳಲ್ಲಿ ಹಾಡಿ ಜಾನಪದ ಸಾಹಿತ್ಯದ ಮೌಲ್ಯಗಳನ್ನು ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದರು.
ತತ್ವ ಪದ ವಿದ್ವಾಂಸ ಮಹೆತಾಬ ಕಾಗವಾಡ ಹಾಡಿ ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಜಾನಪದ ಸಾಹಿತ್ಯ ನಮ್ಮೆಲ್ಲರ ಜೀವನದ ಮೌಲ್ಯಯುತ ಸಂದೇಶವಾಗಿದೆ ಎಂದರು.
ವೇದಿಕೆಯಲ್ಲಿ ಉಪ-ಪ್ರಾಚಾಯ೯ ಪ್ರವೀಣ ಕುಮಾರ ಮಸೂತಿ, ಡಿ ಜಿ ಅಳ್ಳಿಕಟ್ಟಿ, ರವಿ ಖೇಡಗಿ ಉಪಸ್ಥಿತರಿದ್ದರು.
ಶಶಿಕಲಾ ನಾಯ್ಕೋಡಿ ಪ್ರಾಥಿ೯ಸಿದರು, ಬಿ ಎನ್ ಬಿರಾದಾರ ಸ್ವಾಗತಿಸಿದರು, ಸಿ ಎಸ್ ಹಿರೇಮಠ ನಿರೂಪಿಸಿದರು, ಜಿ ಎಸ್ ಸಜ್ಜನ ವಂದಿಸಿದರು.
ಕಾರ್ಯಕ್ರಮದಲ್ಲಿ ಸುವಣಾ೯ ಕತ್ನಳ್ಳಿ, ರೇಷ್ಮಾ ಪೀಸೆ, ಭಾಗ್ಯಜ್ಯೋತಿ, ಅಂಜುಮ್ಆರಾ ಇನಾಮದಾರ, ಸುನಿತಾ ಮಠಪತಿ, ಮಂಜುಳಾ ಕಾಳಗಿ, ಅನುರಾಧ ಪೀರಗೊಂಡ, ಪೂಜಾ ಹೀರೆಮನಿ, ಬಿ ವಾಯ ಧನಗೊಂಡ, ವಾಯ ಪಿ ತಳವಾರ, ಬಿ ಬಿ ಮಾಳಿ, ಶಿವಾನಂದ ಬಜಂತ್ರಿ, ಮಹಾಂತೇಶ ಬಜಂತ್ರಿ, ಎಂ ವಿ ತಾವರಖೇಡ, ಡಿ ಎಮ್ ಮ್ಯಾಗೇರಿ, ವಾಯ ಎಂ ಇಂಡಿಕರ, ಎ ಬಿ ನದಾಪ, ಸಿ ಎ ಪಾಟೀಲ, ಸಿ ಎಸ್ ಸಿಡ್ಯಾಳ, ಎಮ್ ಬಿ ಕೌಲಗಿ, ಸಂಜೀವ ಕುಮಾರ ಸರಸಂಬಿ, ರೀಯಾಜ ರೋಣ, ಎ ಎಮ್ ಲೋಣಿ, ಜಿ ಬಿ ದೇವರಮನಿ, ಸುರೇಶ ಕಲಘಟಗಿ, ಬೀರು ಕರಂಡೆ, ವಿಶಾಲ ಮೋಗಲಿ, ಜಾಕೀರ ಪಟೇಲ, ಅಮೀತ ಹಾಲಳ್ಳಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

