Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ-ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಓ ರಿಷಿ ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷೆಯ ೫ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಅರ್ಹ ಎಲ್ಲ ಫಲಾನುಭವಿಗಳಿಗೆ ದೊರಕಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಗೃಹ ಲಕ್ಷ್ಮಿ ಯೋಜನೆಯು ಶೇ.೯೬ರಷ್ಟು ಪ್ರಗತಿ ಸಾಧಿಸಿದೆ. ಅನ್ನಭಾಗ್ಯ ಯೋಜನೆಯಡಿ ನಿಗದಿತ ಪ್ರಮಾಣದಲ್ಲಿ ಹಾಗೂ ಸಮಯಕ್ಕೆ ಸರಿಯಾಗಿ ಅಕ್ಕಿ ವಿತರಣೆ ಮಾಡಬೇಕು. ವಿತರಣೆಯಲ್ಲಿ ಲೋಪವೆಸಗುವ ಗ್ರಾಹಕರ ನ್ಯಾಯ ಬೆಲೆ ಅಂಗಡಿಗಳನ್ನು ಗುರುತಿಸಿ ಕಟ್ಟುನಿಟ್ಟಿನ ಸೂಚನೆ ನೀಡಿ, ಯಾವುದೇ ವ್ಯತ್ಯಯವಾಗದಂತೆ ಸಮರ್ಪಕವಾಗಿ ವಿತರಣೆ ಮಾಡಬೇಕು. ತಾಲೂಕಾ ಮಟ್ಟದಲ್ಲಿ ನಿಯಮಿತವಾಗಿ ಸಭೆಗಳನ್ನು ಮಾಡಿ ವ್ಯವಸ್ಥಿತವಾಗಿ ಯೋಜನೆ ಜಾರಿಗೊಳಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ಸಮಸ್ಯೆಗಳಿದ್ದಲ್ಲಿ ತುರ್ತಾಗಿ ಗಮನಕ್ಕೆ ತರುವಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಮೇಷನ್ ಕಿಟ್, ರೋಡ ನಿರ್ಮಾಣ ಕಿಟ್ ಹಾಗೂ ಟೈಲ್ಸ್ ಲೇಯರ್ ಟೂಲ್ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹರು ಅಕ್ಟೋಬರ್ ೭ ರಿಂದ ೧೬ರೊಳಗೆ ಅರ್ಜಿಯನ್ನು ಕಾರ್ಮಿಕ ನಿರೀಕ್ಷಕರ ಕಚೇರಿ ೧ನೇ ವೃತ್ತ ಮತ್ತು ಕಾರ್ಮಿಕ ನಿರೀಕ್ಷಕರ ಕಚೇರಿ ೨ನೇ ವೃತ್ತ, ವಿಜಯಪುರ ಕಲ್ಯಾಣ ಸಮುದಾಯ ಭವನ, ಸಿಂದಗಿ ನಾಕಾ, ಅಲ್ಲಾಪೂರ ಓಣಿ, ವಿಜಯಪುರ ಕಚೇರಿಗೆ ಸಲ್ಲಿಸುವಂತೆ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ಬಬಲೇಶ್ವರ, ತಿಕೋಟಾ ಹಾಗೂ ದೇವರಹಿಪ್ಪರಗಿ ತಾಲೂಕಿನ ರೈತರಿಗೆ ಅಕ್ಟೋಬರ್ ೧೫, ೧೬ ಹಾಗೂ ೧೮ ರಂದು ಕ್ರಮವಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವಿಜಯಪುರದಲ್ಲಿ ವಿವಿಧ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಉಪಯೋಗಗಳು, ಅಳವಡಿಕೆ ಮತ್ತು ನಿರ್ವಹಣೆ ವಿಷಯದ ಕುರಿತು ತರಬೇತಿ ಆಯೋಜಿಸಲಾಗಿದೆ.ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸಕ್ತ ೨೦೨೪-೨೫ಜನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು https://swdservice.karnataka.gov.in/ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು https://twd.karnataka.gov.in/index.aspxವೆಬ್‌ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್, ಜಿಲ್ಲಾ, ತಾಲೂಕಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸರ್ಕಾರದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ.ಜೆಡ್.ಜಮೀರ್‌ಅಹ್ಮದ ಖಾನ್ ಅವರು ಅ.೭ ಹಾಗೂ ೮ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಕ್ಟೋಬರ್.೭ರಂದು ವಿಜಯಪುರಕ್ಕೆ ಆಗಮಿಸಿ, ಬೆಳಿಗ್ಗೆ ೧೧ ರಿಂದ ೨-೩೦ರವರೆಗೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲೆಯ ಮುತ್ತವಲ್ಲಿಗಳ ಸಮ್ಮೇಳನ ಹಾಗೂ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಅಕ್ಟೋಬರ್ ೮ ರಂದು ಬೆಳಿಗ್ಗೆ ೧೧ ರಿಮದ ಮಧ್ಯಾಹ್ನ ೧-೩೦ರವರೆಗೆ ಜಿಲ್ಲೆಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಅದಾಲತ್‌ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ ೪ ಗಂಟೆಗೆ ವಿಜಯಪುರದಿಂದ ರಸ್ತೆ ಮಾರ್ಗವಾಗಿ ಹೊಸಪೇಟೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕ್ಯಾನವಾಸ್ ಆರ್ಟ್ ಫೌಂಡೇಷನ್ ಹಾಗೂ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ಆಯೋಜಿಸುತ್ತಿರುವ ರಾಜ್ಯಮಟ್ಟದ ಕಲಾಶಿಬಿರ ಇತ್ತೀಚಿಗೆ ನಿಧನರಾದ ಜಮಖಂಡಿಯ ವರ್ಣಶಿಲ್ಪಿ ಕೆ. ವೆಂಕಟಪ್ಪ ಪ್ರಶಸ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ನಾಡಿನ ಹೆಸರಾಂತ ಹಿರಿಯ ಕಲಾವಿದರಾಗಿದ್ದ ದಿ. ಶ್ರೀ. ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ ಹಾಗೂ ದಿ. ಶ್ರೀ ವಿಜಯ ಸಿಂಧೂರ ಅವರ ಮೂಲ ಕಲಾಕೃತಿಗಳ ಪ್ರದರ್ಶನ” ವನ್ನು ರವಿವಾರ ಅ.06 ರಂದು ಬೆಳಿಗ್ಗೆ 10-00 ಗಂಟೆಗೆ ವಿಜಯಪುರದ ಪ್ರವಾಸೋದ್ಯಮ ಇಲಾಖೆಯ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ 10 ಗಂಟೆಗೆ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿಷ್ಣು ಎಂ. ಶಿಂದೆ ನಡೆಸಿಕೊಡಲಿದ್ದಾರೆ.ನಂತರ ರಾಜ್ಯ ಮಟ್ಟದ ಕಲಾ ಶಿಬಿರದಲ್ಲಿ 20 ಜನ ಕಲಾವಿದರುಗಳಾದ ವಿಜಯಪುರದ ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ, ರಮೇಶ ಚವ್ಹಾಣ, ಬಿ.ಎಸ್.ಪಾಟೀಲ, ಎ.ಜಿ.ನೆಲ್ಲಗಿ, ಶಿವಣ್ಣ ಗೊಳಸಂಗಿ, ರಾಘವೇಂದ್ರ ಪಾಟೀಲ, ಶಿವಾನಂಧ ಅಥಣಿ, ಶ್ರೀಕಾಂತ ರಜಪೂತ, ಹಂಪಿಯ ಕೆ. ಕೆ.…
ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ಅವರ ಸಾಮಾಜಿಕ ಸ್ಥಿತಿ. ಈ ಮೂರೂ ಸುಸ್ಥಿಯಲ್ಲಿ ಇದ್ದರೆ ಮನುಷ್ಯನು ಆರೋಗ್ಯವಾಗಿ ಇರುತ್ತಾನೆ. ಮನುಷ್ಯ ಆರೋಗ್ಯವಾಗಿ ಇರಲು ಉತ್ತಮ ಆಹಾರ ಶುದ್ಧವಾದ ಗಾಳಿ ಮತ್ತು ಶುದ್ಧವಾದ ನೀರು ಸೇವನೆ ಮಾಡಬೇಕು. ಒಂದು ಜೀವಿಯ ದೇಹ ಮತ್ತು ಮನಸ್ಸು ಸಂಪೂರ್ಣ ಸಮತೋಲನದಲ್ಲಿ ಇರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು. ವಿಶ್ವ ಆರೋಗ್ಯಸಂಸ್ಥೆಯ ಪ್ರಕಾರ ‘ಆರೋಗ್ಯ ಎಂದರೆ ಮನುಷ್ಯನ ದೇಹದ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯೇ’ ಆಗಿದೆ.ಆರೋಗ್ಯಕರ ಜೀವನವೆಂದರೆ ಉತ್ತಮ ಆರೋಗ್ಯ ಮತ್ತು ವಿವೇಕಯುತ ಮನಸ್ಸು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಮನಸ್ಸು ಮತ್ತು ದೇಹಕ್ಕೆ ಸೂಕ್ತ ಆಗಿರುವುದನ್ನು ಮಾತ್ರ ಮಾಡಬೇಕು. ಜೀವನಶೈಲಿ ಮತ್ತು ಅಭ್ಯಾಸಗಳನ್ನು ಚೆನ್ನಾಗಿ ನಿರ್ವಣೆ ಮಾಡುವುದರಿಂದ ವ್ಯಕ್ತಿಯ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸೋಮಜ್ಯಾಳ ಗ್ರಾಮಸ್ಥರಲ್ಲಿ ಭಯದ ವಾತವರಣ ಸೃಷ್ಠಿ ಮಾಡಿದ್ದ ಚಿರತೆಯನ್ನು ಸಿಂದಗಿ ತಾಲೂಕು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆ ಹಿಡಿಯುವ ಮೂಲಕ ಜನರಲ್ಲಿದ್ದ ಭಯವನ್ನು ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿದು ಜನರನ್ನು ನಿರಾಳವಾಗುವಂತೆ ಮಾಡಿದ್ದಾರೆ.ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ ಅವರ ಮಾರ್ಗದರ್ಶನದಲ್ಲಿ ಸಿಂದಗಿಯ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ರಾಜೀವ ಬಿರಾದಾರ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರಿಯಾಂಕ ನಗರ, ಎಸ್.ಎಸ್. ಬಿರಾದಾರ, ಸಿಬ್ಬಂದಿಗಳಾದ ವಿಠ್ಠಲ ಚನ್ನೂರ, ಶಿವಾನಂದ ಮದಗೊಂಡ, ಮುತ್ತಪ್ಪ ಕಂಟಿಕರ, ಬೀರೇಶ ರಾಜೋಳಿ ಹಾಗೂ ಗುರು ರಾಮಗಿಮಠ ಸಿಬ್ಬಂದಿಗಳ ಕಾರ್ಯಾಚರಣೆಯ ತಂಡ ಚಿರತೆಯನ್ನು ಸೆರೆ ಹಿಡಿದಿದೆ.ಈ ಕಾರ್ಯಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಂದಗಿ ತಾಲೂಕಿನಲ್ಲಿ ಚಿರತೆಯ ಹಾವಳಿ ಹೆಚ್ಚಿದೆ. ಊರಲ್ಲಿ ಬಂದು ಸೇರಿಕೊಂಡಿದೆ ಎಂದು ಹರಿದಾಡುತ್ತಿತ್ತು. ಗ್ರಾಮಸ್ಥರ ಸಹಕಾರದಿಂದ ಸುತ್ತಮುತ್ತ ಕಂಡು ಬಂದ ಚಿರತೆಯನ್ನು ೨೪ ಗಂಟೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎನ್ನುವ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಲು ಮಹಿಳಾ ಜಾಗೃತಿ ವೇದಿಕೆ ಅಸ್ತಿತ್ವಕ್ಕೆ ಬಂದಿರುವುದು ಸ್ವಾಗತಾರ್ಹ ಎಂದು ಇನ್ನರವೀಲ್ ರೊಟರಿ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನಾ ಮನಗೂಳಿ ಹೇಳಿದರು.ಪಟ್ಟಣದಲ್ಲಿ ಮಹಿಳಾ ಜಾಗೃತಿ ವೇದಿಕೆಯ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಅಸಹಾಯಕ ಮಹಿಳೆಯರಿಗೆ ನ್ಯಾಯ ದೊರಕಿಸುವ ಕೊಡುವ ನಿಟ್ಟಿನಲ್ಲಿ ಹೋರಾಟ ಮಾಡುವ ಉದ್ದೇಶ ಇಟ್ಟುಕೊಂಡು ಈ ಮಹಿಳಾ ಜಾಗೃತಿ ವೇದಿಕೆ ಹುಟ್ಟಿಕೊಂಡಿದ್ದು, ಯಾವುದೇ ಸಂದರ್ಭದಲ್ಲಿ ಸಹಾಯಕ್ಕೆ ಸಿದ್ಧ ಎಂದರು.ಸಂಗಮ ಸಂಸ್ಥೆಯ ನಿರ್ದೇಶಕಿ ಸಿಂತಿಯಾ ಡಿ.ಮೇಲ್ಲೋ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಮಹಿಳೆಯರು ದೃಶ್ಯ ಮಾಧ್ಯಮ ಹಾಗೂ ಮೊಬಾಯಿಲ್ ಸಂಸ್ಕೃತಿಯಿಂದ ದಾರಿ ತಪ್ಪುತ್ತಿದ್ದಾರೆ. ನಾವು ಹಿಂದಿನ ಹಿರಿಯರ ಪದ್ದತಿಯನ್ನು ಮರೆಯುತ್ತಿದ್ದೇವೆ. ಅಂದು ಗಂಡು-ಹೆಣ್ಣೂ ತಾರತಮ್ಯವಿಲ್ಲ ದುಡಿಮೆ ಮಾಡಿ ಸಮನಾಗಿ ಜೀವನ ನಡೆಸುತ್ತಿದ್ದರು. ಆದರೆ ಇಂದು ಗಂಡ ದುಡಿದು ಬಂದರೂ ಕೂಡಾ ಅವರಿಗೆ ಸಮಯಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾಗದ ಕಾರಣ ಗಂಡಸರು ಕೂಡಾ ಕೆಟ್ಟ ಚಟಗಳಿಗೆ ಅಂಟಿಕೊಳ್ಳುತ್ತಿದ್ದಾರೆ, ಇದಕ್ಕೆ ಹೆಣ್ಣು ಮಕ್ಕಳೇ ಕಾರಣರಾಗಿದ್ದೇವೆ. ಟೀವಿಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಡಗುಂದಿ ಬ್ರ‍್ಯಾಂಚ್ ಕಾಲುವೆಗೆ ಟೆಂಡರ್ ಕರೆಯಲು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡು ಕೃಷ್ಣಾ ಜಲ ನಿಗಮ ಮಂಡಳಿ ಬೆಂಗಳೂರು ಇವರಿಗೆ ಮನವಿ ಸಲ್ಲಿಸಿದರು.ಭೀಮರಾಯ ಪೂಜಾರಿ, ಗ್ರಾಮ ಪಂಚಾಯತ ಅಧ್ಯಕ್ಷ ಮಲ್ಲಪ್ಪ ಬಗಲಿ, ಪರಶುರಾಮ ಹಿರೇಕುರುಬರ, ಸುರೇಶ ರೇವತಗಾವ, ವಿಠ್ಠಲ ಬಿರಾದಾರ ಗೋಪಾಲ ಶಿವಗದ್ದಿಗೆ, ರಾಜು ಅಂಗಡಿ, ತುಕಪ್ಪ ಬಸನಾಳ, ಮಲಕಪ್ಪ ಅಂಗಡಿ, ಅಶೋಕ ದಳವಾಯಿ ಮುಂತಾದವರು ಪಾಲ್ಗೊಂಡಿದ್ದರು.
