ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕ್ಯಾನವಾಸ್ ಆರ್ಟ್ ಫೌಂಡೇಷನ್ ಹಾಗೂ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ಆಯೋಜಿಸುತ್ತಿರುವ ರಾಜ್ಯಮಟ್ಟದ ಕಲಾಶಿಬಿರ ಇತ್ತೀಚಿಗೆ ನಿಧನರಾದ ಜಮಖಂಡಿಯ ವರ್ಣಶಿಲ್ಪಿ ಕೆ. ವೆಂಕಟಪ್ಪ ಪ್ರಶಸ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ನಾಡಿನ ಹೆಸರಾಂತ ಹಿರಿಯ ಕಲಾವಿದರಾಗಿದ್ದ ದಿ. ಶ್ರೀ. ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ ಹಾಗೂ ದಿ. ಶ್ರೀ ವಿಜಯ ಸಿಂಧೂರ ಅವರ ಮೂಲ ಕಲಾಕೃತಿಗಳ ಪ್ರದರ್ಶನ” ವನ್ನು ರವಿವಾರ ಅ.06 ರಂದು ಬೆಳಿಗ್ಗೆ 10-00 ಗಂಟೆಗೆ ವಿಜಯಪುರದ ಪ್ರವಾಸೋದ್ಯಮ ಇಲಾಖೆಯ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ 10 ಗಂಟೆಗೆ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿಷ್ಣು ಎಂ. ಶಿಂದೆ ನಡೆಸಿಕೊಡಲಿದ್ದಾರೆ.
ನಂತರ ರಾಜ್ಯ ಮಟ್ಟದ ಕಲಾ ಶಿಬಿರದಲ್ಲಿ 20 ಜನ ಕಲಾವಿದರುಗಳಾದ ವಿಜಯಪುರದ ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ, ರಮೇಶ ಚವ್ಹಾಣ, ಬಿ.ಎಸ್.ಪಾಟೀಲ, ಎ.ಜಿ.ನೆಲ್ಲಗಿ, ಶಿವಣ್ಣ ಗೊಳಸಂಗಿ, ರಾಘವೇಂದ್ರ ಪಾಟೀಲ, ಶಿವಾನಂಧ ಅಥಣಿ, ಶ್ರೀಕಾಂತ ರಜಪೂತ, ಹಂಪಿಯ ಕೆ. ಕೆ. ಮಕಾಳಿ, ಜಮಖಂಡಿಯ ಜಿ. ವಿ. ಹಂಪಣ್ಣವರ, ಎಚ್. ಎಂ.ವಿಶ್ವನಾಥ ಧಾರವಾಡದ ಎನ್. ಆರ್. ನಾಯ್ಕರ್, ಕುಮಾರ ಕಾಟೆನಹಳ್ಳಿ, ಕಲಬುರಗಿಯ ಬಸವರಾಜ ಕಮಾಜಿ, ಬಾಗಲಕೋಟೆಯ ಶಿವು ಹೂಗಾರ ಇಲಕಲ್ಲಿನ ಚಂದ್ರಕಾAತ ಸರೋದೆ, ಶ್ರೀಶೈಲ್ ಧೋತ್ರೆ, ಎಸ್. ಎನ್.ಪೋಚಗುಂಡಿ ಕೊಪ್ಪಳದ ಗಂಗಾಧರ ಬಂಡನವರ ಕಲಾಕೃತಿಗಳನ್ನು ರಚಿಸಿ ವಿಜಯ ಸಿಂಧೂರರವರಿಗೆ ಕಲಾಕೃತಿಗಳ ಮೂಲಕ ಗೌರವ ನಮನಗಳನ್ನು ಸಲ್ಲಿಸಲಿದ್ದಾರೆ.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ವಿಜಯಪುರದ ಕಲಾ ಪೋಷಕರಾದ ವಿಶ್ವನಾಧ ಬೀಳಗಿ, ಬೆಂಗಳೂರಿನ ಬಾಲಾಜಿ ಫ್ರೇಮ್ ಮಾಲಿಕರಾದ ಪ್ರಶಾಂತ ಹೆಗಡೆ, ಜಮಖಂಡಿಯ ರಾಜು ವಿಜಯ ಸಿಂಧೂರ, ಸೋಮನಾಥ ಸಿಂಧೂರ, ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ, ರಮೇಶ ಚವ್ಹಾಣ, ಲಿಂಗರಾಜ ಕಾಚಾಪೂರ ಮತ್ತು ಕಲಾವಿದರು ಕಲಾಸಕ್ತರು ಭಾಗವಹಿಸಲಿದ್ದಾರೆ ಎಂದು ಕ್ಯಾನವಾಸ್ ಆರ್ಟ್ ಫೌಂಡೇಷನ್ ಕಾರ್ಯದರ್ಶಿ ರಮೇಶ ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

