Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಯಡ್ರಾಮಿ: ಈ ಬಾರಿಯ ಗಣೇಶ ಚತುರ್ಥಿ ಆಚರಣೆಯಲ್ಲಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ, ಆರೋಗ್ಯಯುತ ಪರಿಸರ ಕಟ್ಟಲು ಎಲ್ಲರೂ ಶ್ರಮಿಸಬೇಕು ಎಂದು ಯಡ್ರಾಮಿ ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಡಗರದಿಂದ ಗಣೇಶ ಚತುರ್ಥಿ ಮಾಡುವುದಷ್ಟೇ ನಮ್ಮ ಆದ್ಯತೆ ಆಗದೇ, ರಾಸಾಯನಿಕ ಬಣ್ಣ ಲೇಪನವಿಲ್ಲದ ಮಣ್ಣಿನಿಂದ ತಯಾರಿಸಿದ ಗಣಪತಿ ಪ್ರತಿಷ್ಠಾಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಯಾವುದೇ ಕಾರಣಕ್ಕೂ ಪಿಓಪಿ ಯಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ನಿಷೇಧಿಸಲಾಗಿದೆ. ಇಂತಹ ರಾಸಾಯನಿಕ ಬಣ್ಣದ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುವಲ್ಲಿ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಂಡಂತೆ ಆಗುತ್ತದೆ. ಹೀಗಾಗಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರ ಮೂಲಕ ಸ್ವಚ್ಛ ಪರಿಸರ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸೋಣ ಎಂದರು.ಒಂದು ವೇಳೆ ರಾಸಾಯನಿಕ ಬಣ್ಣದ ಗಣಪತಿ ಪ್ರತಿಷ್ಠಾಪಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಬಸವನಬಾಗೇವಾಡಿ: ಇಂದಿನ ದಿನಮಾನಗಳಲ್ಲಿ ಅಪಘಾತಗಳಾಗುವ ಸಂಖ್ಯೆ ಹೆಚ್ಚುತ್ತಿರುವುದು ವಿಷಾದಕರ ಸಂಗತಿ. ಅಪಘಾತವಾದ ಸಂದರ್ಭದಲ್ಲಿ ಬೆನ್ನುಹುರಿಗೆ ಏನಾದರೂ ಪೆಟ್ಟಾಗಿದ್ದರೆ ಅಂತಹವರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಅವಕಾಶವಿದೆ ಎಂದು ವಿಜಯಪುರದ ಬೆನ್ನುಹುರಿ ಅಪಘಾತದ ವ್ಯಕ್ತಿಗಳ ಪುನಶ್ಚೇತನ ಕೇಂದ್ರದ ಸಂಚಾಲಕಿ ಈರಮ್ಮ ಕುಮಟಗಿ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಎನ್ಎಸ್ಎಸ್ ಹಾಗೂ ವಿಜಯಪುರದ ರೆಡೆಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೆನ್ನುಹುರಿ ಅಪಘಾತದ ವ್ಯಕ್ತಿಗಳ ಪುನಃಶ್ಚೇತನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆನ್ನುಹುರಿ ದೇಹ ಮತ್ತು ಮೆದುಳಿನ ನಡುವಿನ ಪ್ರಮುಖ ರಚನೆಯಾಗಿದೆ. ಬೆನ್ನುಹುರಿಯು ಮೆದುಳು ಮತ್ತು ದೇಹದ ಉಳಿದ ಭಾಗಗಳ ನಡುವೆ ಒಳಬರುವ ಮತ್ತು ಹೊರಹೋಗುವ ಸಂದೇಶಗಳನ್ನು ಸಾಗಿಸುವ ನರಗಳನ್ನು ಒಳಗೊಂಡಿದೆ. ಇದು ಮಾನವನ್ನು ನೇರವಾಗಿ ನಿಲ್ಲುವಂತೆ ಮಾಡುತ್ತದೆ. ಇಂದು ಅಪಘಾತದಲ್ಲಿ ಬೆನ್ನುಹುರಿಗೆ ಪೆಟ್ಟಾದರೂ ಅಂಜುವಂತಿಲ್ಲ. ನಮ್ಮ ಕೇಂದ್ರವು ಅಂತಹ ಗಾಯಾಳುಗಳಿಗೆ ವೈದ್ಯಕೀಯ ನೆರವಿನೊಂದಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಸದಾಮುಂಚೂಣಿಯಲ್ಲಿದೆ. ನಮ್ಮ ಕೇಂದ್ರದ ಸದುಪಯೋಗವನ್ನು ಪಡೆದುಕೊಂಡು ಸೂಕ್ತ ಚಿಕಿತ್ಸೆ…
ಆಲಮಟ್ಟಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪುರಾಣ ಕೈಂಕರ್ಯ ಆಲಮಟ್ಟಿ: ಆಧ್ಯಾತ್ಮಿಕ ಪುರಾಣ ಪ್ರವಚನದಲ್ಲಿ ಜೋಳದ ರಾಶಿ ಸುಗ್ಗಿಯೊಂದರ ನೈಜ ಚಿತ್ರಣ ಮನೋಜ್ಞವಾಗಿ ಇಲ್ಲಿ ಮೂಡಿಬಂತು. ಭಾವುಕತೆಯಿಂದ ಈ ದೃಶ್ಯ ವೈಭವ ಜನತೆ ಕಣ್ತುಂಬಿಸಿಕೊಂಡು ಭಕ್ತಿನಾದದಲ್ಲಿ ತನ್ಮಯರಾದರು ! ಇಂಥದೊಂದು ಭಕ್ತಿ ಪ್ರಧಾನ ಸನ್ನಿವೇಶಕ್ಕೆ ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದ ಅಂಗಳ ಸಾಕ್ಷಿಯಾಯಿತು ! ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪರ್ಯಂತರಕಾಲ ಹಮ್ಮಿಕೊಂಡಿರುವ ಕಲಬುರಗಿಯ ಶರಣಬಸವೇಶ್ವರರ ಪುರಾಣ ಪ್ರವಚನ ಕಥೆಯಲ್ಲಿ ಬಿಂಬಿತವಾಗಿರುವ ಶರಣಬಸಪ್ಪನ ಜೋಳದ ರಾಶಿ ಕಾರ್ಯಕ್ರಮ ಜರುಗಿತು. ರಾಶಿಯ ನೈಜ ದೃಶ್ಯಾಭಿನಯಗಳು ಮೂಡಿಬಂದವು. ಪ್ರವಚನಕಾರ ಗಂಗಾವತಿಯ ಶ್ರವಣಕುಮಾರ ಶಾಸ್ತ್ರಿ ಮಾತನಾಡಿ, ಪುರಾಣದ ಕಥೆಯಲ್ಲಿ ಶರಣಬಸವ ಎತ್ತುಗಳನ್ನು ಬಾಡಿಗೆ ತಗೆದುಕೊಂಡು ಬಿತ್ತಲು ಹೊರಡುತ್ತಾರೆ. ಭೂತಾಯಿಯ ಒಡಲಿನಲ್ಲಿ ಕೇವಲ ಮೂರು ಕಾಳುಗಳನ್ನು ಬಿತ್ತಲಿಕ್ಕೆ ಆರಂಭಿಸುತ್ತಾನೆ.ಅಗ ಊರಿನ ಜನರೆಲ್ಲ ತಿಪ್ಪಿಯೊಳಗ ಹಾಕುವಂಥ ಕಾಳಗಳನ್ನು ಬಿತ್ತಿದೆಲ್ಲ ಎಂದು ಅವಹೇಳನ ಮಾಡುತ್ತಾರೆ. ಆದರೆ ಆ ಮೂರು ಕಾಳುಗಳೇ ಅಮೂಲ್ಯ, ಅದ್ಭುತ ಕಾಳುಗಳಾಗಿ ರೂಪಗೊಳ್ಳುತ್ತವೆ. ಶರಣಬಸಪ್ಪನ ಪುರಾಣದಲ್ಲಿನ ಬಿತ್ತನೆ ಕಾಳುಗಳು ಬದುಕಿನ…
ವಿಜಯಪುರ: ಬೆಂಗಳೂರಿನ ಫ್ರೀಡಂ ಪಾರ್ಕ್ದಲ್ಲಿ ನಡೆಯುತ್ತಿರುವ ಕೆ.ಎ.ಎಸ್ ಪರೀಕ್ಷಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಕೇಂದ್ರದ ಮಾಜಿ ಸಚಿವರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಬಡ ಕುಟುಂಬಗಳಿಂದ ಬಂದು, ಜೀವನದಲ್ಲಿ ಸಾಧಿಸಬೇಕೆಂಬ ಛಲ, ಹುಮ್ಮಸ್ಸಿನಿಂದ ಅಹರ್ನಿಶಿ ಉದ್ಯೋಗದಲ್ಲಿದ್ದುಕೊಂಡು ಓದಿಕೊಳ್ಳುತ್ತಿರುವ ಪರೀಕ್ಷಾರ್ಥಿಗಳ ಪರ ಇರಬೇಕಾದ ಸರ್ಕಾರ, ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ.ಗಾಯಕ್ಕೆ ಬರೆ ಇಟ್ಟಂತೆ, ಅಭ್ಯರ್ಥಿಗಳು ಬರಬೇಕಾದ ಊರುಗಳಿಂದ ದೂರದೂರುಗಳಿಗೆ ಪರೀಕ್ಷೆಯ ಸೆಂಟರ್ ನಿಗದಿ ಮಾಡಿರುವ ತರ್ಕ ಏನೆಂದು ಸರ್ಕಾರವೇ ಬಿಡಿಸಿ ಹೇಳಬೇಕು. ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇರುವ ಒಂದು ಪ್ರತೀತಿಯನ್ನು ಬದಲಿಸಿ, ವಾರದ ದಿನ ಪರೀಕ್ಷೆಯನ್ನಿಟ್ಟಿರುವುದು ಖಾಸಗಿ, ಐ.ಟಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ.ಇನ್ನು, ದೂರದೂರುಗಳಿಗೆ ಹೋಗಬೇಕಾದವರು ಒಂದು ದಿನ ಮುಂಗಡವಾಗಿ ಹೋಗಬೇಕು. ಒಂದು ಪರೀಕ್ಷೆ ಬರೆಯುವುದಕ್ಕೆ ಎರಡು ದಿನ ರಜೆ ಪಡೆಯುವಂತ ಅವೈಜ್ಞಾನಿಕ ವೇಳಾಪಟ್ಟಿಯನ್ನು ಮಾಡಿರುವುದು ಪ್ರಶ್ನಾರ್ಹ ಹಾಗೂ ಅತಾರ್ಕಿಕವಾಗಿದೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು…
ಅಫಜಲಪುರ: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವವು ಅಫಜಲಪುರ ಪಟ್ಟಣದ ಬ್ರಾಹ್ಮಣ ಗಲ್ಲಿಯಲ್ಲಿ ವೈಭವನದಿಂದ ಜರುಗಿತು.ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಪ್ರಯುಕ್ತ ಪಟ್ಟಣದ ದತ್ತ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೮ ಗಂಟೆಗೆ ಅಷ್ಟೋತ್ತರ ಪಾರಾಯಣ, ಮದ್ಯಾಹ್ನ ೧೨ ಗಂಟೆಗೆ ರಥೋತ್ಸವ ಜರುಗಿದವು. ಬಳಿಕ ತೀರ್ಥ ಪ್ರಸಾದ ಜರುಗಿತು.ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ. ಉಪೇಂದ್ರ ಪಾಟೀಲ್, ಸಮಾಜದ ಅಧ್ಯಕ್ಷರಾದ ಆನಂದ ಆಲಮೇಲಕರ, ಪ್ರಮುಖರಾದ ಮಾಣಿಕರಾವ್ ಬಿಲ್ವಾಡ, ಡಾ. ಗಿರೀಶ ಪಾಟೀಲ್, ಪವನ್ ಅಲಬಾಳ, ಜಯವೆಂಕಟಾಚಾರ್ಯ ಜೋಷಿ, ಮಂದಾಕಿನಿ ಪಾಟೀಲ್, ನಂದಾ ಕುಲಕರ್ಣಿ, ಜಾನವಿ ಜೋಷಿ, ಲತಾ ಕುಲಕರ್ಣಿ, ಸಂತೋಷ ಘೂಳನೂರ, ಲತಾ ಘೂಳನೂರ, ಸುನೀತಾ ಅಲಬಾಳ, ಅಶ್ವಿನಿ ಕಟಾವೆ, ಜ್ಯೋತಿ ಬಗಲೂರ, ಸುಜಾತಾ ಬಿಲ್ವಾಡ ಸೇರಿದಂತೆ ಅನೇಕರು ಇದ್ದರು.
ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ಅ.೧೪ರಂದು ಮಧ್ಯ ರಾತ್ರಿ ಕುರುಬ ಸಮಾಜದ ಯುವಕರು ಗ್ರಾಮಸ್ಥರಿಗೆ ತಿಳಿಸದೆ ಗ್ರಾ.ಪಂ ಖಾಲಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಅನಾವರಣ ಮಾಡಿದ್ದಾರೆ. ಆದರೆ ಪ್ರತಿಮೆ ಅನಾವಣರದಿಂದ ಯಾರಿಗೂ ತೊಂದರೆ ಇಲ್ಲ, ಹೀಗಾಗಿ ಗ್ರಾಮದ ಎಲ್ಲಾ ಸಮುದಾಯಗಳ ಸಹಕಾರ ಅಗತ್ಯವಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬೀರಣ್ಣ ಕನಕಟೇಲರ್ ಮನವಿ ಮಾಡಿದ್ದಾರೆ.ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ದ ಹೋರಾಟ ನಡೆಸಿ ದೇಶ ರಕ್ಷಣೆ ಮಾಡಿ ತನ್ನ ಜೀವ ಕಳೆದುಕೊಂಡಿದ್ದಾರೆ. ಅವರ ತ್ಯಾಗ ಬಲಿದಾನವನ್ನು ದೇಶವೇ ಕೊಂಡಾಡುತ್ತಿರುವಾಗ ಮಾಶಾಳ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಪ್ರತಿಮೆಗೆ ವಿರೋಧ ಮಾಡುವುದು ಎಷ್ಟು ಸರಿ? ಪ್ರತಿಮೆ ಪ್ರತಿಷ್ಠಾಪನೆ ವಿರೋಧ ಮಾಡುವ ಬದಲಾಗಿ ಉಳಿದ ಸಮಾಜದ ಬಾಂಧವರು ಬಿಚ್ಚು ಮನಸ್ಸಿನಿಂದ ಸ್ವಿಕರಿಸಿ ಎಲ್ಲರೂ ಸೌಹಾರ್ದಯುತ ಬದುಕಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಮುಖಂಡರಾದ ರಮೇಶ ನೀಲಗಾರ, ಲಕ್ಷ್ಮಿಪುತ್ರ ಜಮಾದಾರ ಮಾತನಾಡುತ್ತಾ ಕುರುಬ ಸಮಾಜ ಎಲ್ಲಾ ಸಮಾಜಗಳೊಂದಿಗೆ…
ಅಫಜಲಪುರ: ಕಳೆದ ೩ ದಶಕಗಳಿಂದ ಮಾದಿಗರ ಒಳ ಮೀಸಲಾತಿ ಜಾರಿಗೆ ಬರಬೇಕೆಂದು ಹೋರಾಟ ಮಾಡುತ್ತಿರುವ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಸುಪ್ರೀಂ ಕೋರ್ಟ್ ಮಾಡಿದೆ. ಆದರೆ ರಾಜ್ಯ ಸರ್ಕಾರ ಬೇಗ ನ್ಯಾ. ಸದಾಶಿವ ವರದಿಯಂತೆ ಮಾದಿಗರಿಗೆ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಮಾಶಾಳಕರ ಒತ್ತಾಯಿಸಿದರು.ಅವರು ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡುತ್ತಾ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮೀನಮೇಷ ಎಣಿಸುತ್ತಿದೆ. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ೨೪ ಗಂಟೆಗಳಲ್ಲಿ ಸದಾಶಿವ ವರದಿ ಜಾರಿಗೆ ತರುತ್ತೇವೆಂದು ಸಿದ್ದರಾಮಯ್ಯನವರು ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಈಗ ತಪ್ಪಿದ್ದು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ. ವರದಿ ಜಾರಿಗೆ ಮಾಡಲು ಯಾಕೆ ಮೀನಮೇಷ ಎಣಿಸುತ್ತಿದ್ದಾರೋ ತಿಳಿಯುತ್ತಿಲ್ಲ ಇದರಿಂದ ನಮಗೆಲ್ಲ ಬಹಳಷ್ಟು ನೋವಾಗುತ್ತಿದೆ. ಕೆಪಿಎಸ್‌ಸಿ ಹಾಗೂ ಇತರೆ ಇಲಾಖೆಗಳಲ್ಲಿ ಒಳ ಮೀಸಲಾತಿ ಜಾರಿ ಆಗುವ ವರೆಗೂ ಹುದ್ದೆಗಳ…
ಅಫಜಲಪುರ: ಇತ್ತಿಚಿಗೆ ಮೊಬೈಲ್ ಬಳಕೆ ಹೆಚ್ಚಾಗಿ ಅದೇ ಗೀಳಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ವ್ಯಸನ ತಲೆಗೆರಿಸಿಕೊಂಡು ಮೊಬೈಲ್ ನೋಡುವುದಕ್ಕಾಗಿ ತಲೆ ತಗ್ಗಿಸಬೇಡಿ. ಪುಸ್ತಕಗಳನ್ನು ಓದುವುದಕ್ಕಾಗಿ ತಲೆ ತಗ್ಗಿಸಿ ನಾಳೆ ಅದು ನಿಮ್ಮ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದು ಸಾಹಿತಿ, ಪತ್ರಕರ್ತರಾದ ಮಹಿಪಾಲ್‌ರೆಡ್ಡಿ ಮುನ್ನೂರ ಹೇಳಿದರು.ಅವರು ಪಟ್ಟಣದ ಡಾ. ಎಪಿಜೆ ಅಬ್ದುಲ್ ಕಲಾಂ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ೨೦೨೪-೨೫ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಲಾಂ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕಾಲ ಬದಲಾಗಿದೆ, ಹೀಗಾಗಿ ಓದಿನತ್ತ ಹೆಚ್ಚು ಗಮನ ಸಮಯ ಪ್ರಜ್ಞೆಯಿಂದ ಇಟ್ಟುಕೊಂಡು ಓದಿ, ಸುಮ್ಮನೆ ಟೈಂ ಪಾಸ್‌ಗಾಗಿ ಓದುವುದು ಬೇಡ. ಎಂದು ಸಲಹೆ ನೀಡಿದ ಅವರು, ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಪಿಜೆ ಅಬ್ದುಲ್ ಕಲಾಂ ಕಾಲೇಜನ್ನು ಕಟ್ಟಿ ಬೆಳೆಸುತ್ತಿರುವ ಶಿವಾನಂದ ಚಿಂಚೋಳಿ ಅವರ ಶ್ರಮ ಶ್ಲಾಘನೀಯವಾದುದ್ದು ಎಂದರು.ವಿಶ್ವರಾಧ್ಯ ಶ್ರೀ ಮಳೇಂದ್ರ…
ಆಲಮಟ್ಟಿ: ನಿಡಗುಂದಿ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ನಿಡಗುಂದಿ ಬಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಮೀಪದ ಚಿಮ್ಮಲಗಿ ಭಾಗ-೨ ಸರಕಾರಿ ಪ್ರೌಢಶಾಲಾ ಮಕ್ಕಳು ವಿವಿಧ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತರಾಗಿ ಸಾಧನೆ ಮೆರೆದಿದ್ದಾರೆ.ಶಾಲೆಯ ಬಾಲಕ-ಬಾಲಕಿಯರು ಹಲ ಸ್ಪರ್ಧೆಗಳಲ್ಲಿ ಅಮೋಘ ಗೆಲುವು ಸಾಧಿಸಿ ಮಿಂಚಿದ್ದಾರೆ. ಬಾಲಕ ಹಾಗೂ ಬಾಲಕಿಯರ ವಿಭಾಗದ ಕಬಡ್ಡಿ ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ ಚಿಮ್ಮಲಗಿ ಶಾಲಾ ತಂಡ ಜಯಭೇರಿ ಬಾರಿಸಿ ಗೆಲುವಿನ ನಗೆಯೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಬಾಲಕಿಯರ ತಂಡದ ನಾಯಕಿ ಸಂಗೀತಾ ಹಳಕಟ್ಟಿ ಹಾಗೂ ಬಾಲಕರ ತಂಡದ ನಾಯಕ ಅಭಿಷೇಕ ಜಗತಾಪ ಅವರ ಮುಂದಾಳತ್ವದಲ್ಲಿ ಕ್ರೀಡಾಪಟುಗಳು ಸಾಂಘಿಕ ಆಟದ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.ಬಾಲಕಿಯರ ವಿಭಾಗದ ೩೦೦೦ ಮೀ.ಓಟದಲ್ಲಿ ಲಕ್ಷ್ಮಿ ಲಮಾಣಿ ಪ್ರಥಮ ಸ್ಥಾನ ಪಡೆದರೆ ಐಶ್ವರ್ಯ ಲಮಾಣಿ ದ್ವೀತಿಯ ಸ್ಥಾನ ಪಡೆದು ಮಿಂಚಿದ್ದಾರೆ. ೧೫೦೦ ಮೀ.ಓಟದಲ್ಲಿ ಸ್ನೇಹಾ ಸಾತಿಹಾಳ ದ್ವೀತಿಯ, ೩೦೦೦ ಮೀ.ನಡಿಗೆಯಲ್ಲಿ ಜಾನಮ್ಮ ಚಿನಗೊಂಡ ದ್ವೀತಿಯ, ೪೦೦…
ವಿಜಯಪುರ: ಭಾರತದ ಹಳ್ಳಿಗಳು ಜಾನಪದ ಸಂಸ್ಕೃತಿಯಲ್ಲಿಯೇ ಸುಖ ಕಾಣುತ್ತಿವೆ. ಜಾನಪದದ ಆಚಾರ – ವಿಚಾರಗಳು ನಮ್ಮ ಬದುಕಿಗೆ ಊರುಗೋಲಾಗಿ ಸನ್ನಡತೆಯಲ್ಲಿ ನಡೆಸುತ್ತಿವೆ. ಭಾರತದ ಘನತೆಗೆ ಜಾನಪದವೇ ಮೂಲ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ವಿಜಯಪುರ ಅಧ್ಯಕ್ಷ ಬಾಪುಗೌಡ ಪಾಟೀಲ (ಶೇಗುಣಸಿ) ಅಭಿಪ್ರಾಯಪಟ್ಟರು.ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಬಬಲೇಶ್ವರ ಶಾಂತವೀರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಿಸಿದ ” ವಿಶ್ವ ಜಾನಪದ ದಿನಾಚರಣೆ ೨೦೨೪ ” ಉದ್ಘಾಟಿಸಿ ಮಾತನಾಡುತ್ತಾ ವಿಜಯಪುರ ಜಿಲ್ಲೆಯಲ್ಲಿ ಉಳಿಸಿ ಬೆಳೆಸಲು ಬಾಳನಗೌಡ ಪಾಟೀಲ ನೇತೃತ್ವದ ಕನ್ನಡ ಜಾನಪದ ಪರಿಷತ್ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಸರಕಾರ ಮತ್ತು ಸಮುದಾಯ ಅವರಿಗೆ ಸಹಕಾರ ನೀಡಬೇಕು ಎಂದರು.” ಜನಪದ ವಿಚಾರ ಮತ್ತು ಆಚಾರ ” ಕುರಿತು ಉಪನ್ಯಾಸ ನೀಡಿದ ಸಾಹಿತಿ ಶಂಕರ ಬೈಚಬಾಳ, ಜನಪವವು ಕೆಳವರ್ಗದ ಮತ್ತು ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ಸಂಸ್ಕೃತಿ ಇಂದು ಕಳಾಹೀನವಾಗುತ್ತಿದೆ. ವಿದೇಶಿ ಪದ್ಧತಿಗೆ ನಮ್ಮವರು ಮಾರು ಹೋಗುತ್ತಿದ್ದಾರೆ. ನಮ್ಮ ಮಾಧ್ಯಮಗಳು…
