ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಕ್ಕಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಹಾರಾಷ್ಟ್ರದ ಸೋನಾರಿಯ ಕಾಳಭೈರವ ಮಠದ ಸಂಜಯ ಮಹಾರಾಜ ಹೇಳಿದರು.
ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನ ಸಮಿತಿ ಮತ್ತು ಭಾವಸಾರ ಸಮಾಜ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಜಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಧರ ಕೋಳೆಕರ ಮಾತನಾಡಿ, ಇಂದಿನ ಮಕ್ಕಳು ಬಾಲ್ಯದಿಂದಲೇ ಅತ್ಯಂತ ಪ್ರತಿಭಾವಂತರಾಗಿದ್ದು ಅವರಲ್ಲಿ ಆತ್ಮಸ್ಥೈರ್ಯ ಹಾಗೂ ವಿಶ್ವಾಸ ಮೂಡಿಸುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ ಎಂದರು.
ಸಮಾರಂಭದಲ್ಲಿ ಮೋತಿಲಾಲ ಕೋಳೆಕರ, ಶಿವಾಜಿ ಕೋಳೆಕರ, ಗಣು ಮಹೀಂಧ್ರಕರ, ಕಿರಣ ಬಳಮಕರ, ಸುಭಾಷ ಬಳಮಕರ, ಭಗವಂತ ಕರಣೆ, ಡಾ.ರಾಜೇಶ ಕೋಳೆಕರ ಮತ್ತಿತರಿದ್ದರು.
ಪ್ರತಿಭಾ ಪುರಸ್ಕಾರ
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವೈಷ್ಣವಿ ಪತಂಗೆ, ತೇಜಸ್ವಿನಿ ಝೀಂಗಾಡೆ, ಅಭಿಷೇಕ ಝಿಂಗಾಡೆ,ಸಂದ್ಯಾ ಮಹೀಂದ್ರಕರ, ರುತಿಕಾ ಸುಲಾಖೆ, ಕೃಷ್ಣಾ ಸುಲಾಖೆ ಮತ್ತಿತರರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಶಾಲಾ ಮಕ್ಕಳಿಗೆ ಸಮಾಜದ ವತಿಯಿಂದ ನೋಟಬುಕ್ ಮತ್ತು ಪೆನ್ನು ವಿತರಿಸಲಾಯಿತು.

