Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಮೀನುಗಾರರಿಗೆ ಪ್ರೊತ್ಸಾಹಿಸಲು ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಮತ್ಸ್ಯವಾಹಿನಿ ಯೋಜನೆಯಡಿ ತ್ರಿಚಕ್ರ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಆಯ್ಕೆಯಾದವರು ಮೀನುಗಾರಿಕೆ ಇಲಾಖೆಗೆ ಸಾಮಾನ್ಯ ವರ್ಗದವರು ೧ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ-ಮಹಿಳೆಯರು ೫೦ ಸಾವಿರ ರೂ. ಭದ್ರತಾ ಠೇವಣಿ ಒದಗಿಸಬೇಕು ಹಾಗೂ ಮಾಸಿಕ ೩ ಸಾವಿರ ರೂ. ವಾಹನ ಬಾಡಿಗೆ ಪಾವತಿಸಬೇಕಾಗಿರುತ್ತದೆ.ಅರ್ಜಿ ಸಲ್ಲಿಸಲು ದಿನಾಂಕ : ೧೫-೧೧-೨೦೨೪ ಕೊನೆಯ ದಿನವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ವಿಜಯಪುರ ಮೊ:೯೮೪೫೯೨೭೧೧೦, ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುದ್ದೇಬಿಹಾಳ ಮೊ: ೯೮೮೦೨೧೦೫೦೫ ಇವರನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ದುರಸ್ತಿ, ರಸ್ತೆ ಮೇಲೆ ಕಸ ಗುಡಿಸುವಿಕೆ, ಸ್ವಚ್ಛತೆ, ಒಳಚರಂಡಿ ದುರಸ್ತಿ, ಚರಂಡಿಯಲ್ಲಿನ ಹೂಳು ತೆಗೆಯುವುದು, ಸತ್ತ ಪ್ರಾಣಿಗಳ ಸ್ಥಳಾಂತರ ಸೇರಿದಂತೆ ಪಾಲಿಕೆಗೆ ಸಂಬಂಧಿಸಿದ ದೂರು-ಸಮಸ್ಯೆಗಳಿಗೆ ಸಾರ್ವಜನಿಕರು ಪಾಲಿಕೆ ಕಚೇರಿಗೆ ಬಂದು ದೂರು ಕೊಡುವ ಬದಲಿಗೆ ಸಹಾಯವಾಣಿ ಸಂಖ್ಯೆ : ೦೮೩೫೨-೨೨೨೪೭೪೭ಗೆ ಕರೆ ಮಾಡಿ ದೂರನ್ನು ನಮೂದಿಸಿದ್ದಲ್ಲಿ ಪರಿಶೀಲಿಸಿ ತುರ್ತಾಗಿ ಕ್ರಮ ವಹಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಯ ಸದುಪಯೋಗ ಪಡೆದುಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಮಾಹಿತಿ, ದೌರ್ಜನ್ಯ ಪ್ರಕರಣಗಳ ಕುರಿತು ಅರಿವು ಹಾಗೂ ಅಸ್ಪಶೃತೆ ನಿವಾರಣೆ ವಿಚಾರಗೋಷ್ಠಿ ಮತ್ತು ಕಾರ್ಯಾಗಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಅ.೨೮ರಂದು ಬೆಳಿಗ್ಗೆ ೧೦-೩೦ರಿಂದ ೩-೩೦ರವರೆಗೆ ಏರ್ಪಡಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಗ್ರಾಮೀಣ-ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಹಾಗೂ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿ ಸದಸ್ಯರುಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಜಿಲ್ಲಾ-ತಾಲೂಕಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು ೧೯೭೭ರ ನಿಯಮ ೫ ಮತ್ತು ೨೬(೨) ಹಾಗೂ ೧೨(ಎ) (ಬಿ) ಮತ್ತು (ಸಿ) ರನ್ವಯ ೭ ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರು ದಿನಾಂಕ : ೦೫-೧೧-೨೦೨೪ರ ಸಂಜೆ ೫:೩೦ರೊಳಗೆ ಅವಶ್ಯಕ ದೃಢೀಕೃತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
*ಉದಯರಶ್ಮಿ ದಿನಪತ್ರಿಕೆ* ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು ೧೯೭೭ ರ ನಿಯಮ ೫ ಮತ್ತು ೨೬(೨) ಹಾಗೂ ೧೨(ಎ) (ಬಿ) ಮತ್ತು (ಸಿ) ರನ್ವಯ ೭ ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರು ದಿನಾಂಕ : ೦೫-೧೧-೨೦೨೪ರ ಸಂಜೆ ೫:೩೦ರೊಳಗೆ ಅವಶ್ಯಕ ದೃಢೀಕೃತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ | ನರೇಗಾ ಯೋಜನೆಯಡಿ ವೈಯಕ್ತಿಕ-ಸಮುದಾಯ ಕಾಮಗಾರಿಗೆ ಅರ್ಜಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ೨೦೨೫-೨೬ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ವಿಜಯಪುರ ಜಿಲ್ಲೆಯ ೧೩ ತಾಲೂಕುಗಳ ೨೧೧ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿ.ಎಫ್.ಟಿ ಗ್ರಾಮ ಕಾಯಕ ಮಿತ್ರರು ಒಟ್ಟುಗೂಡಿ “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಅಭಿಯಾನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ೨೦೨೫-೨೬ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ಮೂಲಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾರ್ವಜನಿಕರಿಗೆ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ…
ವಿಜಯಪುರ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಅವಶ್ಯಕವಿರುವ ಹುದ್ದೆಗಳಿಗುಣವಾಗಿ ಸಂಸ್ಥೆಗಳಲ್ಲಿ ಅರ್ಹ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಿ, ತರಬೇತಿ ಪಡೆದ ಯುವಕರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸುವ ಮೂಲಕ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಇಂಡಸ್ಟ್ರಿಯಲ್ ಲಿಂಕೇಜ್ ಸೆಲ್ (ಐಎಲ್‌ಸಿ) ಯೋಜನೆ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಇಂಡಸ್ಟ್ರಿಯಲ್ ಲಿಂಕೇಜ್ ಸೆಲ್ (ಐಎಲ್‌ಸಿ) ಯೋಜನೆ ಆರಂಬಿಸಿದ್ದು, ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ತಮ್ಮ ಉದ್ದಿಮೆಗಳ ಅವಶ್ಯಕತೆಯಂತೆ ತಮ್ಮ ಸಂಸ್ಥೆಗಳಲ್ಲಿಯೇ ತರಬೇತಿ ನೀಡುವ ಮೂಲಕ ತರಬೇತಿಯ ನಂತರ ತಮ್ಮ ಕೈಗಾರಿಕೆಗಳಲ್ಲಿಯೇ ಉದ್ಯೋಗ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಿ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ…
ಜನಜೀವನ ಅಸ್ತವ್ಯಸ್ತ | ಕೆಸರಿನ ಗದ್ದೆಗಳಾದ ಹೊಲಗಳು | ನೀರುಪಾಲಾದ ಬೆಳೆಗಳು ಉದಯರಶ್ಮಿ ದಿನಪತ್ರಿಕೆ ವೀಣಾ ಹೇಮಂತ್ ಗೌಡ ಪಾಟೀಲ್ಗದಗ: ಕಳೆದ ಹಲವಾರು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತ ವ್ಯಸ್ತಗೊಳಿಸಿದೆ. ರಸ್ತೆಗಳು ಕೆಸರಿನ ಹೊಂಡಗಳಾಗಿದ್ದು ರಸ್ತೆ ಹೌದೋ ಅಲ್ಲವೋ ಎಂಬಂತೆ ಭಾಸವಾಗುತ್ತದೆ. ಮತ್ತೆ ಕೆಲವೆಡೆ ರಸ್ತೆಗಳ ನಿಶಾನೆಯೇ ಇಲ್ಲದಂತೆ ಕೊಚ್ಚಿ ಹೋಗಿವೆ. ಹೊಳೆ, ಹಳ್ಳಗಳು ರಭಸದಿಂದ ಹರಿಯುತ್ತಿದ್ದು, ಅವುಗಳ ದುಡುಕುತನದ ಅರಿವಿದ್ದು ಕೂಡ ಅವಸರಕ್ಕೆ ಬಿದ್ದು ಕೆಲವರು ಕೊಚ್ಚಿ ಹೋಗಿರುವುದು ಅಲ್ಲಲ್ಲಿ ವರದಿಯಾಗಿವೆ.ತಗ್ಗು ಪ್ರದೇಶಗಳಲ್ಲಿನ ಮನೆಗಳಲ್ಲಿ ಎರಡೆರಡು ಅಡಿಯಷ್ಟು ನೀರು ಹೊಕ್ಕಿರುವುದು ಸಾರ್ವಜನಿಕರ ನೋವು ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ತುಸು ಶಿಥಿಲವಾಗಿರುವ ಕೊಂಚ ಹಳೆಯ ಮನೆಗಳು ಇನ್ನೇನು ಬೀಳುವ ಹಂತದಲ್ಲಿದ್ದರೆ ಮತ್ತೆ ಕೆಲ ಮನೆಗಳು ತಂಪು ಹಿಡಿದಿವೆ. ಮಳೆಯ ಕಾರಣದಿಂದ ಹೊಲಗಳಲ್ಲಿ, ಗದ್ದೆಗಳಲ್ಲಿ ಕೆಲಸ ಮಾಡುವ ಜನರು ಮನೆಯಲ್ಲೇ ಕುಳಿತುಕೊಳ್ಳುವಂತಾಗಿರುವುದು ದೈನಂದಿನ ದುಡಿಮೆಯ ಮೇಲೆ ಬದುಕನ್ನು ನಡೆಸುವ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದರೆ…
ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ – ಗದಗ ಮೊ:9945789377 ಉದಯರಶ್ಮಿ ದಿನಪತ್ರಿಕೆ “ಪಂಚೈತಾನಪೀ ಶ್ರುಜ್ಯಂತೆಗರ್ಭಸ್ತೈವ ದೇಹಿನಃಆಯುಕರ್ಮಾಚ ವಿತ್ತಂತೆವಿದ್ಯಾ ನಿಧನ ನೇವಚ”ಎಂದು ಹೇಳಲಾಗಿದೆ. ಮನುಷ್ಯ ಭ್ರೂಣಾವಸ್ಥೆಯಲ್ಲಿರುವಾಗಲೇ ಮೇಲಿನ ಐದು ವಿಷಯಗಳನ್ನು ಹೊತ್ತು ಈ ಭೂಮಿಗೆ ಬರುತ್ತಾನೆ. ಆ ಐದು ವಿಷಯಗಳು ಆಯುಷ್ಯ, ಕರ್ಮ ಅಥವಾ ಉದ್ಯೋಗ, ವಿತ್ತ ಅಂದರೆ ಹಣ, ವಿದ್ಯೆ ಮತ್ತು ಸಾವು.ಆಯುಷ್ಯಮನುಷ್ಯ ಹುಟ್ಟುವಾಗಲೇ ಆತನ ಆಯುಷ್ಯ ನಿರ್ಧಾರವಾಗಿರುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಇದು ಅಕ್ಷರಶಃ ನಿಜ. ಪ್ರತಿ ಹುಟ್ಟುಹಬ್ಬಕ್ಕೂ ನಾವು ಒಂದೊಂದು ನಿಮಿಷವೂ ಸಾವಿಗೆ ಹತ್ತಿರವಾಗುತ್ತವೆ ಎಂಬುದು ಸಾರ್ವಕಾಲಿಕ ಸತ್ಯ. ನಾವು ಭೂಮಿಯ ಮೇಲೆ ಬದುಕಿರುವುದು ಆ ದೈವದ ನಿಯಾಮಕದಂತೆ.ಕರ್ಮಅಂದರೆ ಕಾಯಕ, ಕೆಲಸ ಎಂದರ್ಥ. ನಾವು ಮಾಡುವ ಕೆಲಸ ಪೂರ್ವ ನಿರ್ಧರಿತವಾದದ್ದು. ಯಾವುದೇ ಕೆಲಸ ನನ್ನ ಕೈಗೆ ಹತ್ತುತ್ತಿಲ್ಲ ಎಂದು ಕೆಲವರು ಗೋಳಾಡುವುದನ್ನು ನೋಡುತ್ತೇವೆ. ಇನ್ನೂ ಕೆಲವೆಡೆ ಎಷ್ಟೇ ಕೆಲಸ ಮಾಡಿದರು ತೃಪ್ತಿ ನೀಡುವುದಿಲ್ಲ. ಹಿಂದೆ ವೃತ್ತಿಯಾಧಾರಿತ ಕೆಲಸ ಕಾರ್ಯಗಳು ಇದ್ದವು.ಪೂರ್ವಜನ್ಮಂ ಕೃತಂ ಕರ್ಮಅಂದರೆ ನಾವು ಮಾಡುವ ಕರ್ಮಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಟ್ಟು ಸಾವಿನ ನಡುವಿನ ಬದುಕು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕಿದವರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮರು ಎಂದು ಪ್ರಾಂಶುಪಾಲೆ ಪ್ರತಿಭಾ ಪಾಟೀಲ್ ಹೇಳಿದರು.ನಗರದ ಲೋಟಸ್ ಕಾಲೋನಿಯಲ್ಲಿನ ಚಿನ್ಮಯ ಶಾಲೆಯಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮ ಜಯಂತಿಯ ನಿಮಿತ್ತ ಮಾತನಾಡಿದ ಅವರು ಬ್ರಿಟಿಷ್ ವಿರುದ್ಧ ಕತ್ತಿ ಹಿಡಿದು ದೈರ್ಯದಿಂದ ಹೋರಾಟ ಮಾಡಿದ ಕಿತ್ತೂರು ರಾಣಿ ಚೆನ್ನಮ್ಮ ದೇಶದಲ್ಲಿ ಸಾಹಸಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ವಿ.ಆರ್. ಕುಲಕರ್ಣಿ, ಶಿಕ್ಷಕರಾದ ಜ್ಯೋತಿ, ಆಸ್ಮಾ, ಆಯಿಶಾ, ಸೃಷ್ಟಿ, ವಿದ್ಯಾಶ್ರೀ, ಗೀತಾ, ಸುಮಯ್ಯಾ, ಚಿನ್ಮಯಿ, ಪ್ರಿಯಂಕಾ, ಸಿದ್ದಣ್ಣಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
