ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹುಟ್ಟು ಸಾವಿನ ನಡುವಿನ ಬದುಕು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕಿದವರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮರು ಎಂದು ಪ್ರಾಂಶುಪಾಲೆ ಪ್ರತಿಭಾ ಪಾಟೀಲ್ ಹೇಳಿದರು.
ನಗರದ ಲೋಟಸ್ ಕಾಲೋನಿಯಲ್ಲಿನ ಚಿನ್ಮಯ ಶಾಲೆಯಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮ ಜಯಂತಿಯ ನಿಮಿತ್ತ ಮಾತನಾಡಿದ ಅವರು ಬ್ರಿಟಿಷ್ ವಿರುದ್ಧ ಕತ್ತಿ ಹಿಡಿದು ದೈರ್ಯದಿಂದ ಹೋರಾಟ ಮಾಡಿದ ಕಿತ್ತೂರು ರಾಣಿ ಚೆನ್ನಮ್ಮ ದೇಶದಲ್ಲಿ ಸಾಹಸಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ವಿ.ಆರ್. ಕುಲಕರ್ಣಿ, ಶಿಕ್ಷಕರಾದ ಜ್ಯೋತಿ, ಆಸ್ಮಾ, ಆಯಿಶಾ, ಸೃಷ್ಟಿ, ವಿದ್ಯಾಶ್ರೀ, ಗೀತಾ, ಸುಮಯ್ಯಾ, ಚಿನ್ಮಯಿ, ಪ್ರಿಯಂಕಾ, ಸಿದ್ದಣ್ಣಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.